ಜಮಖಂಡಿ:ತಾಲುಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಮೇ 24 ರಂದು ಸಂಜೆ 6.00 ಗಂಟೆಗೆ ತಿಂಗಳ ನಾಲ್ಕನೆಯ ಭಾನುವಾರದ ಮಾಸಿಕ ಕಾರ್ಯಕ್ರಮ ‘ಶ್ರೀಗುರುದೇವ ಸತ್ಸಂಗ’ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಯಂಕಂಚಿಯ ಶ್ರೀಗುರುದೇವಾಶ್ರಮದ ಗುರುಪಾದ ಮಹಾಸ್ವಾಮಿಗಳು ‘ಷಟ್‌ಸ್ಥಲ: ಭಕ್ತ ಮತ್ತು ಭಕ್ತಿ’ ವಿಷಯ ಕುರಿತು ಅನುಭಾವ ಹಂಚಿಕೊಳ್ಳಲಿದ್ದಾರೆ. ಶ್ರೀಗುರುದೇವ ಸಂಗೀತ ಬಳಗದಿಂದ ಸಂಗೀತ ಸೇವೆ ನಡೆಯಲಿದೆ. ಬಬಲೇಶ್ವರ ತಾಲ್ಲೂಕಿನ ಕುಮಠೆ ಗ್ರಾಮದ ಶೇಖರ ಸಿದ್ರಾಮಪ್ರ ತೇಲಿ ಮಹಾಪ್ರಸಾದ ಸೇವೆ ನೆರವೇರಿಸುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
