Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

*ಬೇಸಿಗೆಯ ತಂಪು ಪಾನೀಯ ಕೋಕಂ ಜ್ಯೂಸ್ ಆರೋಗ್ಯಕ್ಕೆ ಸಂಜೀವಿನಿ :ಡಾ,ಕಸ್ತೂರಿ ಕರಮುಡಿ*



ಕೊಪ್ಪಳ,    ಕೋಕಂ ಒಂದು ಪ್ರಾಕೃತಿಕ ಮತ್ತು ಆರೋಗ್ಯಕರ ಫಲವಾಗಿದ್ದು ಇದು ದಕ್ಷಿಣ ಭಾರತದ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಇದರ ವೈಜ್ಞಾನಿಕ ಹೆಸರು (Garcinia indica, ) ಗಾರ್ಸಿನಿಯಾ ಇಂಡಿಕಾ ಆಡು ಭಾಷೆಯಲ್ಲಿ ಇದಕ್ಕೆ ಪುನರ್ಪುಳಿ ಮತ್ತು ಅಮಸೋಲ್ ಎಂದು ಕೂಡ ಕರೆಯುತ್ತಾರೆ, ಬೇಸಿಗೆಯ ಕಾಲದಲ್ಲಿ ದೇಹಕ್ಕೆ ತಂಪು ನೀಡುವ ಉತ್ತಮ ಪಾನೀಯಗಳಲ್ಲಿ ಕೋಕಂ ಜ್ಯೂಸ್ ಪ್ರಮುಖವಾಗಿದೆ ಎಂದು ಕೊಪ್ಪಳದ ಆಯುರ್ವೇದ ವೈದ್ಯರಾದ ಡಾ, ಕಸ್ತೂರಿ ವೀರೇಶ್ ತಮ್ಮ ವಿಶೇಷ ಲೇಖನದಲ್ಲಿ ತಿಳಿಸಿದ್ದಾರೆ,

 ಬೇಸಿಗೆಯ ಧಗೆಯನ್ನು ನೀಗಿಸಲು ಕೃತಕ ಪಾನೀಯಗಳ ಮೊರೆಹೋಗುವ ಬದಲು ಕೋಕಂ ಅತ್ಯಂತ ಉತ್ತಮ ಪಾನೀಯವಾಗಿದೆ. ಆಯುರ್ವೇದದ ಪ್ರಕಾರ ಕೋಕಂ ದೇಹದ ಪಿತ್ತ ದೋಷವನ್ನು ಶಮನಗೊಳಿಸುವ ಗುಣ ಹೊಂದಿದೆ.

          ಕೋಕಂ ಹಣ್ಣು ಕೆಂಪು ನೇರಳೆ ಬಣ್ಣ ಹೊಂದಿದ್ದು ಅದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ವಿಟಮಿನ್ ಸಿ ಮತ್ತು ವಿವಿಧ ಪೋಷಕಾಂಶಗಳ ಅಗರವಾಗಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಉಪಯುಕ್ತ, ಕೋಕಮ್ ಜ್ಯೂಸ್ ದೇಹವನ್ನು ತಂಪಾಗಿಡುತ್ತದೆ ಮತ್ತು ದಾಹವನ್ನು ತಣಿಸುತ್ತದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಅಜೀರ್ಣ ಆಮ್ಲಪಿತ್ತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

      ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾದಾಗ ಕೋಕಂ ಜ್ಯೂಸ್ ಸೇವಿಸುವುದರಿಂದ ತಕ್ಷಣ ಶಮನ ದೊರೆಯುತ್ತದೆ ಇದು ದೇಹದ ದಾಹ ದೌರ್ಬಲ್ಯ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ ಕೆಲವು ಅಧ್ಯಯನಗಳ ಪ್ರಕಾರ ಕೋಕಂನಲ್ಲಿ ಇರುವ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ(HCA) ತೂಕ ಇಳಿಕೆಗೆ ಸಹ ಸಹಾಯಕವಾಗಿದೆ.

     ಕೋಕಮ್ ಜ್ಯೂಸ್ ತಯಾರಿಸುವ ವಿಧಾನವು ಕೂಡ ಸರಳವಾಗಿದೆ ಬೀಜ ತೆಗೆದು ಒಣಗಿದ ಕೋಕಮ್ ಅನ್ನು ನೀರಿನಲ್ಲಿ ತೊಳೆದು ಬಿಸಿ ನೀರಿನಲ್ಲಿ ಎರಡರಿಂದ ಮೂರು ತಾಸು ನೆನೆಸಿ ಅದೇ ನೀರಿನಲ್ಲಿ ಅದನ್ನು ರುಬ್ಬಿಕೊಂಡು ನಂತರ ಸೋಸಿ ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಸೈಂದವ  ಉಪ್ಪು ಹುರಿದ ಜೀರಿಗೆ ಪುಡಿ ಏಲಕ್ಕಿ ಪುಡಿ ಸೇರಿಸಿ ಮಂದ ಉರಿಯಲ್ಲಿ ಐದರಿಂದ ಎಂಟು ನಿಮಿಷ ಕುದಿಸಿ ಆರಿಸಿ ಫ್ರಿಡ್ಜ್ ನಲ್ಲಿ ಸ್ವೀಕರಿಸಿಟ್ಟುಕೊಳ್ಳಬಹುದು ನಾವು ಕುಡಿಯುವಾಗ ಅದಕ್ಕೆ ಮತ್ತಷ್ಟು ನೀರು ಸೇರಿಸಿ ಕುಡಿಯಬಹುದು

    ಒಟ್ಟಿನಲ್ಲಿ ಕೋಕಂ ಜ್ಯೂಸ್ ಆರೋಗ್ಯಕರ ಮತ್ತು ಪ್ರಕೃತಿಯ ಕೊಡುಗೆಯಾದ ಪಾನೀಯವಾಗಿದೆ ಆದ್ದರಿಂದ ಬೇಸಿಗೆಯಲ್ಲಿ ದಿನನಿತ್ಯವೂ ಕೋಕಂ ಜ್ಯೂಸನ್ನು ಸೇವಿಸುವುದು ಉತ್ತಮ  ಅಭ್ಯಾಸವಾಗಿದೆ ಎಂದು ಕೊಪ್ಪಳದ ಆಯುರ್ವೇದ ವೈದ್ಯರಾದ ಡಾ,  ಕಸ್ತೂರಿ ವೀರೇಶ್ ಕರಮುಡಿ ರವರು ತಮ್ಮ ವಿಶೇಷ ಲೇಖನದಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿದ್ದಾರೆ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ