Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಿಯೊಬ್ಬರು, ಸಂಘ ಸಂಸ್ಥೆಗಳು ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಕೈ ಬಿಡಬೇಕು: ನ್ಯಾ.ಕೃಷ್ಣಪ್ಪ ಪಮ್ಮಾರ



ಈ ಪದ್ದತಿಯನ್ನು ನಿರ್ಮೂಲನೆ ಮಾಡಲು ಕೇವಲ ಸರ್ಕಾರದ ಕಾಯ್ದೆ ಕಾನೂನುಗಳಿಂದ ಮಾತ್ರ ಸಾಧ್ಯ ಇಲ್ಲ. ಪ್ರತಿಯೊಬ್ಬರು, ಸಂಘ ಸಂಸ್ಥೆಗಳು ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಕೈ ಬಿಡಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಬಡತನ ಹೋಗಲಾಡಿಸುವುದರೊಂದಿಗೆ ಈ ಪದ್ದತಿಯ ನಿರ್ಮೂಲನೆಗೆ ಮುಂದಾಗಬೇಕು ಎಂದು ದಿವಾಣಿ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ ಹೇಳಿದರು.

ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ತಾಲೂಕಾ ಆಡಳಿತ ಇವರ ಆಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

೧೯೯೮ರ ಜನಗಣತಿ ಪ್ರಕಾರ ದೇಶದಲ್ಲಿ ೧.೨೬ ಕೋಟಿ ಬಾಲ ಕಾರ್ಮಿಕರಿದ್ದರು. ೨೦೦೯- ೧೦ನೇ ಸಾಲಿನ ಗಣತಿ ಪ್ರಕಾರ ೪೯ ಲಕ್ಷ ಬಾಲ ಕಾರ್ಮಿಕರಿದ್ದರು. ದೇಶದಲ್ಲಿ ೨೦೧೧ರ ಜನಗಣತಿ ಪ್ರಕಾರ ೪೩ ಲಕ್ಷ ಬಾಲ ಕಾರ್ಮಿಕರಿರುವುದು ಬೆಳಕಿಗೆ ಬಂದಿದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂನೆಯ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಹಳಷ್ಟು ಕೆಲ ಕಾರ್ಯಗಳು ನಡೆದಿವೆ.

ಶೈಕ್ಷಣಿಕ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಬಹುದು. ಕೌನ್ಸೆಲಿಂಗ್ ಕೂಡ ಕೊಡಬಹುದು ಎಂದು ಅವರು ನುಡಿದರು.

ಈ ವೇಳೆ ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣ ನೀಡಿ ದುಡಿಮೆಯಿಂದ ಮುಕ್ತಿಗೊಳಿಸಿ, ಮಕ್ಕಳನ್ನು ಶಾಲೆಗೆ ಕಳಿಸಿ ಕೆಲಸಕ್ಕಲ್ಲ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ, ದೇಶದ ಸರ್ವತೋಮುಖ ಸುಧಾರಣೆ, ದುಡಿಸಬೇಕೆ ಮಕ್ಕಳನ್ನು ಅವಮಾನಿಸಬೇಕೆ ದೇಶವನ್ನು, ಬಾಲಕಾರ್ಮಿಕರ ನೇಮಕ ಅಪರಾದ ೨೦ ಸಾವಿರ ರೂ ದಂಡ ೬ ತಿಂಗಳ ಜೈಲು ಶಿಕ್ಷೆ ಎಂದು ಹೇಳಿದರು.

ಉಪನ್ಯಾಸಕ ಆರ್. ಕೆ. ಹುಣಶಿಕಟ್ಟಿ ಮಾತನಾಡಿ ಬಾಲ ಕಾರ್ಮಿಕರು ಕಂಡ ತಕ್ಷಣ ನೀವು ೧೦೯೮ ಪೋನ್ ಮಾಡಿ ಸಕ್ಷಮ ಪ್ರಾಧಿಕಾರದವರು ಬಂದು ಕ್ರಮ ತೆಗೆದುಕೊಳ್ಳುತ್ತಾರೆ. ಮಕ್ಕಳು ಓದಬೇಕೆ ಹೊರತು, ದುಡಿಮೆಗೆ ಅಲ್ಲ ಎಂದರು.

ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಆರ್. ರೆಬ್ಬನ್ನವರ, ಉಪಾಧ್ಯಕ್ಷ ವ್ಹಿ. ಜಿ ಬಿರಾದಾರಪಾಟೀಲ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಕಾರ್ಮಿಕ ನಿರೀಕ್ಷಕ ಮಹೇಶ ಬಾಗೋಜಿ, ಸಿಪಿಐ ಆಯ್ ಎಂ ಮಠಪತಿ, ಪಿಎ??? ಎಲ್. ಬಿ. ಮಾಳಿ, ನ್ಯಾಯವಾದಿಗಳಾದ ಆರ್. ಎಸ್. ಆಲದಕಟ್ಟಿ, ವ್ಹಿ. ಬಿ. ಹೊಸಮನಿ, ಎಸ್. ವ್ಹಿ. ಮಾಳಕಾಕನ್ನವರ, ಎಫ್. ಬಿ. ಹಟ್ಟಿ, ರಾಜು ಪಾಕಾಲೆ, ಏಕಲವ್ಯ ನಾಯ್ಕರ, ಪ್ರಧಾನ ಗುರುಗಳಾದ ಎ. ಎ. ಮಕ್ತುಮನ್ನವರ, ಶಿಕ್ಷಕಲಾದ ಎಂ. ಎಂ. ಚಿಲದ, ಎಸ್. ಬಿ. ಮಿಕಲಿ, ಕಂದಾಯ ನಿರೀಕ್ಷಕ ವಾಯ್ ಎಫ್ ಮುರ್ತೇನ್ನವರ, ಗ್ರಾಮ ಆಡಳಿತಾಧಿಕಾರಿ ಎಲ್. ಬಿ. ದಳವಾಯಿ, ರಾಜೇಂದ್ರ ಶೆಟ್ಟಿ, ವಿರೇಶ ಚೌದರಿ, ಸಬ್ಬಿರಅಹ್ಮದ ಜಮಖಂಡಿ, ಮಂಜುನಾಥ ಕಲಾಲ, ಬಸವರಾಜ ಗಂಗರಡ್ಡಿ, ಎಚ್. ಎಸ್. ಹೂಗಾರ, ವೀರಭದ್ರಪ್ಪ ಕುರುಬಗಟ್ಟಿ ಸೇರಿದಂತೆ ಮಕ್ಕಳ ರಕ್ಷಣಾ ಸಮಿತಿ, ವಕೀಲರ ಸಂಘ , ಪೊಲೀಸ್ ಇತರೇ ಶಿಕ್ಷಕ-ಶಿಕ್ಷಕಿಯರಿ ಮತ್ತು ತಹಶೀಲ್ದಾರ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ