ಮುಧೋಳ ಬ್ಲಾಕ್ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷರಾಗಿ ಸಂಗಪ್ಪ ಅಮಾತಿ ಆಯ್ಕೆ
ರನ್ನ ಬೆಳಗಲಿ: ಏ.೧೯., ರನ್ನ ಬೆಳಗಲಿಯ ಕಾಂಗ್ರೆಸ್ ಮುಖಂಡರಾದ ಸಂಗಪ್ಪ ಅಮಾತಿ ಅವರ ಪಕ್ಷದ ಕಾರ್ಯಕ್ಷೇತ್ರದಲ್ಲಿ ನೀಡಿದ ಅನಂತ ಸೇವೆಯನ್ನು ಹಾಗೂ ಕಾರ್ಯಕರ್ತರ ಜೊತೆಗಿನ ಆತ್ಮೀಯ ಸಂಬಂಧ ಮತ್ತು ಸಂಘಟನೆ ವಿಚಾರವಾಗಿ ಪಕ್ಷಕ್ಕೆ ಬಲ ನೀಡಲೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾದ ಎಸ್. ಮಧು ಬಂಗಾರಪ್ಪನವರ ಅನುಮೋದನೆ ಮೇರೆಗೆ ಮತ್ತು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಸ್. ಜಿ. ನಂಜಯ್ಯಮಠ ಹಾಗೂ ಕರ್ನಾಟಕ ಸರಕಾರದ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್. ಬಿ.ತಿಮ್ಮಾಪುರ ಅವರ ಸೂಚನೆ ಮೇರೆಗೆ ರನ್ನ ಬೆಳಗಲಿಯ ಕಾಂಗ್ರೆಸ್ ಯುವ ಮುಖಂಡರಾದ ಸಂಗಪ್ಪ ಮಹಾದೇವಪ್ಪ ಅಮಾತಿ ಅವರನ್ನು ಹಿಂದುಳಿದ ವರ್ಗಗಳ ವಿಭಾಗದ ಮುಧೋಳ ತಾಲೂಕಾ ಅಧ್ಯಕ್ಷರನ್ನಾಗಿ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮೆಟಗುಡ್ಡದ ವೆಂಕಣ್ಣ ಹುಣಸಿಕಟ್ಟಿ, ಮತ್ತು ಮುಧೋಳ ಬ್ಲಾಕ್ ಒಬಿಸಿ ಪ್ರಧಾನ ಕಾರ್ಯದರ್ಶಿಯಾಗಿ ಲಾಲಸಾಬ್ ನದಾಫ್ ರವರನ್ನು ಆಯ್ಕೆ ಮಾಡಿ ಮಾನ್ಯ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್. ಬಿ. ತಿಮ್ಮಾಪುರ ಮತ್ತು ಬಾಗಲಕೋಟೆ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷರಾದ ಮುದಕಣ್ಣ ಅಂಬಿಗೇರ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಕಿವಡಿ, ಉದಯ ಸಾರವಾಡ, ಮುಧೋಳ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ ಪಾಟೀಲ, ಈರಪ್ಪ ಕಿತ್ತೂರ, ಯಮನಪ್ಪ ದೊಡ್ಡಮನಿ, ಮುಬಾರಕ್ ಅತ್ತಾರ, ಸದಾಶಿವ ಕುಲಗೋಡ, ಯಮನಪ್ಪ ಪೂಜೇರಿ ಮುಂತಾದವರು ಸೇರಿ ನೂತನ ಅಧ್ಯಕ್ಷರಿಗೆ ಸನ್ಮಾಸಿ ಅಭಿನಂದಿಸಿದ್ದಾರೆ.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.