Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ ಎಸ್ ಎಸ್ ಬಗ್ಗೆ ಮಾತನಾಡುವದನ್ನು ಬಿಟ್ಟು ಸಂಸ್ಕಾರ ಕಲಿ : ಸಂಜಯ ಪಾಟೀಲ 

ಬೆಳಗಾವಿ: ಬಿಟ್ಟಿ ಪ್ರಚಾರದ ಗೀಳಿನಿಂದ,ನವೆಂಬರ್ ಕ್ರಾಂತಿಯವರೆಗೆ ಮಂತ್ರಿ ಪದವಿ ಉಳಿವಿಗಾಗಿ ಹೈಕಮಾಂಡ ಮೆಚ್ಚಿಸಲು ಅಪ್ರಸ್ತುವಾಗಿ ಮಾತನಾಡುವ ಮರಿ ಪ್ರಿಯಾಂಕಾ ಖರ್ಗೆ ರಾಷ್ಟಸೇವಿಗೆ ಸಮರ್ಪಣೆಯಾಗಿರುವ ಅರ್ ಎಸ್ ಎಸ್ ಬಗ್ಗೆ ನಾಲಿಗೆಯನ್ನು ಹರಿಬಿಡುವದನ್ನ ಬಿಟ್ಟು ಸಂಸ್ಕಾರ ಕಲಿಯಲಿ ಎಂದು ಮಾಜಿ ಶಾಸಕ ಸಂಜಯ ಪಾಟೀಲ  ಟೀಕಿಸಿದ್ದಾರೆ.

   ಮಂಗಳವಾರ  ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ ಅವರು, ಪ್ರಿಯಾಂಕಾ ಖರ್ಗೆಯವರ ಬುದ್ಧಿ ಒಂದು ರೀತಿ ಓಡಿದರೆ ಮನಸ್ಥಿತಿ ಇನ್ನೊಂದು ರೀತಿಯಲ್ಲಿದ್ದು ಎರಡಕ್ಕು ಸಂಬಂಧವಿಲ್ಲದ ಅಸಂಬದ್ಧ ಮಾತು ಬಾಯಿಮೂಲಕ ಆಡುವದೆ ಇವರ ಬಾಯಿಚಪಲಕ್ಕಾಗಿ ಏನೆನೊ‌ಮಾತನಾಡುತ್ತಾರೆ.

ಆರೆಸ್ಸೆಸ್ ಎಂದರೆ ರಾಷ್ಟ್ರ ನಿರ್ಮಾಣ ಮಾಡುವ ಸಂಘಟನೆ. ಇಂಥ ದೇಶಭಕ್ತ ಸಂಘಟನೆಯ ಚಟುವಟಿಕೆಗಳ ಮೇಲೆ ನಿಷೇಧ ಹೇರುವ ಪತ್ರ ಬರೆದಿರುವದನ್ನ‌ ನೋಡಿದರೆ ಸಮಾಜಕ್ಕೆ ಒಳಿತಾಗಬಾರದು, ವ್ಯಕ್ತಿ ನಿರ್ಮಾಣ ಆಗಬಾರದು ಎಂಬ ದುರುದ್ದೇಶದ ಪತ್ರವನ್ನು ಮುಖ್ಯಮಂತ್ರಿಗೆ ಬರೆದಿದ್ದಾರೆ ಎಂದು ಟೀಕಿಸಿದರು.

ಈ ವ್ಯಕ್ತಿ ಯಾವಾಗಲೂ ಅಪ್ರಸ್ತುತ ಮಾತುಗಳ ಮೂಲಕ ತಮ್ಮ ದಿನದ ಕೆಲಸಗಳನ್ನು ಪ್ರಾರಂಭ ಮಾಡುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು, ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿಕಾರಿಯಾದ ಕೆಲಸ ಮಾಡಲು ಅವಕಾಶವಿದೆ. ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆಯಲ್ಲೂ ಕ್ರಾಂತಿಕಾರಿ ಕೆಲಸ ಮಾಡಬಹುದು, ಇವತ್ತು ನಮ್ಮ ಕರ್ನಾಟಕ, ನಮ್ಮ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆದ ನಗರ. ಅಂಥ ಇಲಾಖೆಗಳನ್ನು ನಿರ್ವಹಿಸುವ ಈ ಮಹಾನುಭಾವರು ಸಚಿವರಾಗಿ ಈಗ ಎರಡೂವರೆ ವರ್ಷ ಆಗಿದೆ. ಇದರ ಮುಂಚೆಯೂ 2 ಬಾರಿ ಸಚಿವರಾಗಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಮಗ ಎಂಬುದೇ ಇವರ ಅರ್ಹತೆ ಬಿಟ್ಟರೆ ಕಾರ್ಯಕ್ಷಮತೆ ಇಲ್ಲದ ಅಸಮರ್ಥ ಸಚಿವರಾಗಿದ್ದಾರೆ  ಎಂದು ವ್ಯಂಗ್ಯವಾಗಿ ನುಡಿದರು. ಅನುಭವ, ಜ್ಞಾನ, ಅರ್ಹತೆ ಇದೆಯೋ ಇಲ್ಲವೋ ಅವರಿಗೆ ಕೂತಲ್ಲೇ ಅಧಿಕಾರ ಲಭಿಸಿದೆ

ವಂಶಪಾರಂಪರ್ಯ ಆಧಾರದಿಂದ ನೀವು ಬಂದಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ ಸಂಘದ ಬಗ್ಗೆ ಮಾತನಾಡಲು, ಜನರು ಅಧಿಕಾರ ಕೊಟ್ಟಿದ್ದಾರೆ ರಾಜ್ಯದ ಜನತೆಗೆ ವಿಶಿಷ್ಟವಾದ ಸೇವೆ ಮಾಡುವ ಮೂಲಕ ನಿಮ್ಮ ಸಾಧನೆ ಮಾತನಾಡಲಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ, ನೆರೆಹಾವಳಿಯಿಂದ ರೈತರ ಬೆಳೆ ಹಾಳಾಗಿದ್ದು ಪರಿಹಾರ ಇಲ್ಲದೆ ರೈತರು ಆತ್ಮಹತ್ಯೆ ಹಾದಿ ಹಿಡದಿದ್ದಾರ ಇದನ್ನು ಮೊದಲು ಸರಿಮಾಡಲು ಪತ್ರ ಬರೆಯಿರಿ ಖರ್ಗೆಯವರೆ ಎಂದು ಸವಾಲೆಸೆದರು.

  ಹಿರಿಯ ಕಾಂಗ್ರೆಸ್ ನಾಯಕ‌ ಬಿ.ಕೆ.ಹರಿಪ್ರಸಾದ ಅಧಿಕಾರದ ದಾಹಕ್ಕೆ ತಮ್ಮ ಪಕ್ಷದ ಹಿರಿಯರನ್ನ ಮೆಚ್ಚಿಸುವ ಉದ್ದೇಶಕ್ಕಾಗಿ ಸಂಘವನ್ನು ಉಗ್ರ ಸಂಘಟನೆಗೆ ಹೊಲಿಸುವದು ಅವರಿಗೆ ಗೌರವ ತಂದುಕೊಡದು ಅವರ ಅವನತಿಗೆ ದಾರಿಯಾಗಿದೆ. ಮುಳಗಿದ ಕಾಂಗ್ರೆಸ್ ಪಕ್ಷದ ಹಡಗಿನ ಕುರುಹುಗಳನ್ನು ಸಿಗದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟಿಕಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ