Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಗರ ಕುಲವು ಇಂದು ಹಿಂದುಳಿದ ಸಮಾಜವಾಗಿದೆ: ಡಾ.ಪುರುಷೋತ್ತಮಾನಂದಪುರಿ ‍ಶ್ರೀ

 

ರನ್ನ ಬೆಳಗಲಿ: ಜೂ.೭., ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಹೊಸೂರು ನಗರದಲ್ಲಿ ಶ್ರೀ ಮಹರ್ಷಿ ಭಗೀರಥ ಉಪ್ಪಾರ ಅಭಿವೃದ್ಧಿ ತಾಲೂಕಾ ಸಂಘದ ಆಶ್ರಯದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತಿ ಉತ್ಸವ ಹಾಗೂ ಶ್ರೀ ಮಹರ್ಷಿ ಭಗೀರಥ ಸರ್ಕಲ್ ಉದ್ಘಾಟನೆ ಸಮಾರಂಭ ವೈಭವದಿಂದ ಜರುಗಿತು.

ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಪುರು?ತ್ತಮಾನಂದಪುರಿ ಮಹಾಸ್ವಾಮಿಗಳು ಭಗೀರಥ ಪೀಠ ತಾ.ಹೊಸದುರ್ಗ ಶ್ರೀಗಳು ಸೂರ್ಯವಂಶಸ್ಥರು ಉಪ್ಪಾರರಾಗಿದ್ದಾರೆ. ಸಾಗರದ? ಇತಿಹಾಸ ಹೊಂದಿರುವ ಸಗರ ಕುಲವು ಇಂದು ಹಿಂದುಳಿದ ಸಮಾಜವಾಗಿದೆ. ಸಮುದಾಯದ ಯುವಕರು ಶಿಕ್ಷಣ ಜೊತೆಗೆ ಸಂಸ್ಕಾರ ಪಡೆದು ಸಮಾಜದ ಋಣಕ್ಕೆ ಬದ್ಧರಾಗಿ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಶ್ರೀರಾಮನಂತೆ ಆದರ್ಶ ಜೀವನ ಪಾಲಿಸುವ ತರುಣರಾಗಬೇಕು. ಉಪ್ಪಿನಂತೆ ಸಹೋದರರ ಸಮಾಜದಲ್ಲಿ ಬೆರೆತು ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಮುದಾಯದ ಅಭಿವೃದ್ಧಿಗೆ ಬದ್ಧರಾಗಬೇಕೆಂದು ತಿಳಿಸಿದರು.ಸಾನಿಧ್ಯ ಕರುಣಿಸಿದ ಪ.ಪೂ.ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ರಬಕವಿ ಪೂಜ್ಯರು ಹಿಂದುಳಿದ ಎಲ್ಲ ಮಠಮಾನ್ಯಗಳ ಪೂಜ್ಯರ ಸಂಘದ ಗೌರವ ಅಧ್ಯಕ್ಷರಾಗಿ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಾ ನಮ್ಮಂತಾ ಯುವ ಸ್ವಾಮೀಜಿಗಳಿಗೆ ಮಾರ್ಗದರ್ಶಕರಾಗಿ ಪ್ರೋತ್ಸಾಹಿಸುತ್ತಿರುವ ಶ್ರೀ ಭಗೀರಥ ಪೀಠದ ಪೂಜ್ಯರ ಕಾರ್ಯ ಅಮೋಘವಾಗಿದೆ ಎಂದು ಆಶೀರ್ವಚನುಡಿಯಲ್ಲಿ ತಿಳಿಸಿದರು.

ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸಿ ಉಪ್ಪಾರ ಸಮಾಜ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳುವ ಮೂಲಕ ಉಪ್ಪಾರ ಸಮಾಜದ ಅಭಿವೃದ್ಧಿಗೆ ನಾನು ಸದಾ ಬದ್ಧವಾಗಿದ್ದೇನೆ. ನಿಮ್ಮ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಸಹಾಯ ಸಹಕಾರ ಯಾವಾಗಲೂ ಇದ್ದೇ ಇರುತ್ತದೆ ಎಂದು ಅವರು ಹೇಳಿದರು.ಸಣ್ಣ ಪುಟ್ಟ ಉದ್ಯೋಗ, ವ್ಯಾಪಾರ ಹಾಗೂ ಒಕ್ಕಲುತನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವ ಸಮಾಜದಲ್ಲಿನ ಬಡವರಿಗೆ ತಾಯಂದಿಯರಿಗೆ, ನಿರುದ್ಯೋಗ ಯುವಕರಿಗೆ ಉಪ್ಪಾರ ಅಭಿವೃದ್ಧಿ ನಿಗಮದ ವತಿಯಿಂದ ಹೆಚ್ಚಿನ ಅನುಕೂಲ ಮಾಡಿಕೊಡಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

ಭಗೀರಥ ಪ್ರಯತ್ನ ಮಾಡಿ ಭಗೀರಥ ಸರ್ಕಲ್ ನಿರ್ಮಾಣ ಮಾಡಿ ಪೂಜ್ಯದ್ವಯರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು, ಸರ್ಕಲ್ ಕ್ಕೆ ಮೆರುಗು ತಂದು ಕೊಟ್ಟ ಸಮಾಜದ ಮುಖಂಡರಿಗೆ ಕಾರ್ಯಕರ್ತರಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದ್ದರು.

ಇದೇ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ ಮಾತನಾಡಿ,ಉಪ್ಪಾರ ಸಮಾಜಕ್ಕೆ ೫೦ ಲಕ್ಷ ರೂ ಅನುದಾನ ನಮ್ಮ ಸರ್ಕಾರದ ಅವಧಿ ಮುಗಿಯುವುದರೊಳಗಾಗಿ ತಂದು ಕೊಡುವುದಾಗಿ ತಿಳಿಸಿ, ಸಮಾಜದ ಯಾವುದೇ ಕೆಲಸ ಕಾರ್ಯಗಳನ್ನು ತೆಗೆದುಕೊಂಡು ಸರ್ವತ್ತಿನಲ್ಲಿ ಬಂದರೂ ಪಕ್ಷಾತೀತವಾಗಿ ಮಾಡಿಕೊಡುತ್ತೇನೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭೀಮಶಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕಾಡಾಪೂರ ಸ್ವಾಗತಿಸಿದರು. ಯೋಗ ಶಿಕ್ಷಕರಾದ ರಾಘವೇಂದ್ರ ನೀಲನ್ನವರ ನಿರೂಪಿಸಿದರು, ಉಪನ್ಯಾಸಕರಾದ ಸಂಜೀವ ಕುಳ್ಳೂರ ಮತ್ತು ಅರ್ಜುನ ಕಾಖಂಡಿಕಿ ಶಿಕ್ಷಕರು ಸತ್ಕಾರ ಕಾರ್ಯ ನಿರ್ವಹಿಸಿದರು,ನಾರಾಯಣ ಕಾರಜೋಳ ಶಿಕ್ಷಕರು ಕಾರ್ಯಕ್ರಮಕ್ಕೆ ವಂದಿಸಿದರು.

ನಗರಸಭೆ ಅಧ್ಯಕ್ಷಳಾದ ವಿದ್ಯಾ ದಬಾಡಿ, ಉಪಾಧ್ಯಕ್ಷಳಾದ ದೀಪಾ ಗಾಡಿವಡ್ಡರ, ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವೆಂಕನಗೌಡ ಪಾಟೀಲ,ಸ್ಥಾಯಿ ಕಮಿಟಿ ಚೇರ್ಮನ್ ರಾದ ಅರುಣ ಬುದ್ಧಿ, ಶ್ರೀಮಂತ ಚೌರಿ, ಬಸಪ್ಪ ಗೋಪಾಳಿ,ಪರಪ್ಪ ಬ್ಯಾಕೋಡ,ಬಾಳವ್ವ ಕಾಖಂಡಕಿ,ಗಣಪತರಾವ ಹಜಾರೆ,ಹಣಮಂತ ಕೊಡಗನೂರ.ಭೀಮಪ್ಪ ಸಸಾಲಟ್ಟಿ, ಡಿ ಎಸ್ ಉಪ್ಪಾರ.ಭೀಮತಿ ಹಂದಿಗುಂದ ಭರಮಣ್ಣ ಉಪ್ಪಾರ,ರಮೇಶ ಲೋನಾರಿ, ಡಾ.ಗೀತಾ ಸೈದಾಪೂರ.ನೀಲಕಂಠ ಮುತ್ತೂರ,ಬಸವರಾಜ ದಲಾಲ,ಮಹಾಲಿಂಗಪ್ಪ ಲಾತೂರ ಶ್ರೀಶೈಲ ಬೀಳಗಿ, ಬಸವರಾಜ ಲಾಯನ್ನವರ,ಸುರೇಶ ಕೊಡಗನೂರ, ರಾಯಪ್ಪ ಹೆಗ್ಗಣ್ಣವರ,ಶಂಕರ ಪಾಟೀಲ, ಪರಶುರಾಮ ಕಾಖಂಡಕಿ,ರವಿ ಜಮಖಂಡಿ, ಅರ್ಜುನ ಕಾಖಂಡಕಿ,ಸಂಜೀವ ಕಾಖಂಡಕಿ,ಬಸಪ್ಪ ಶಿರೋಳ, ಈರಪ್ಪ ಬ್ಯಾಕೋಡ,ಸಿದ್ದಪ್ಪ ಉಪ್ಪಾರ, ಅಲ್ಲಪ್ಪ ಹೊಸೂರ, ಮಂಜುನಾಥ ಕೊಡಗಾನೂರ, ಮುದಕಪ್ಪ ದೋಬಸಿ, ಸೇರಿದಂತೆ ಉಪ್ಪಾರ ಸಮಾಜ ಮುಖಂಡರು, ವಿವಿಧ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ