Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬದುಕು ಹಸನಾಗಲು ತ್ಯಾಗ ಮುಖ್ಯ : ಧರ್ಮಗುರು  ಮೋಹಮ್ಮದ್  ಸಿದ್ಧಿಕಿ

ಬಳ್ಳಾರಿ,ಜೂ,09 : ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ತ್ಯಾಗ ಮಾಡುವ ಸಂದರ್ಭಗಳು ಎದುರಾಗುತ್ತವೆ, ಎಲ್ಲರ ಬದುಕು ಹಸನಾಗಲು ತ್ಯಾಗವೂ ಮುಖ್ಯ ಎಂದು ಮುಸ್ಲಿಂ ಧರ್ಮಗುರು ಸೈಯದ್ ಸಿದ್ಕಿ ಕರೆ ನೀಡಿದರು.


 ಇಂದು ಈದ್ಗಾ  ಮೈದಾನದಲ್ಲಿ ಬಕ್ರಿ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಕ್ರಿ  ಹಬ್ಬದ ಸಂದೇಶ ಸಾರಿ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಸರ್ವ ಜನಾಂಗದೊಂದಿಗೆ  ಸಹೋದರರಂತೆ ಬಾಳುವಂತೆ ಕರೆ ನೀಡಿದರು.


ನಗರದ ಎಪಿಎಂಸಿ ಬೆಂಗಳೂರು ರಸ್ತೆಯ ಈದ್ಗಾ ಮೈದಾನ ಹಾಗೂ ನಗರದ ಅನೇಕ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಈದ್ಗಾ  ಮೈದಾನಕ್ಕೆ ಬೈಕ್, ಆಟೋ, ಕಾರುಗಳಲ್ಲಿ ಬಂದ ಸಾವಿರಾರು ಜನ  ಮುಸ್ಲಿಂರು ಅಲ್ಲಾನ ಪ್ರಾರ್ಥನೆ ಮಾಡಿದರು. ಹಿರಿಯರೊಂದಿಗೆ ಮಕ್ಕಳು, ಯುವಕರು ಪ್ರಾ ರ್ಥನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಅನೇಕ ಜನಪ್ರತಿನಿಧಿಗಳು ಪ್ರಾರ್ಥನೆಯಲ್ಲಿ ಭಾಗವಹಿಸಿ ನಂತರ ಮುಸ್ಲಿಂ ಸಮುದಾಯಕ್ಕೆ ಬಕ್ರಿ ಹಬ್ಬದ

ಹಬ್ಬದ ಶುಭಾಶಯ ಕೋರಿದರು.


ಬೆಳಿಗ್ಗೆ 9 ರಿಂದ ಆರಂಭವಾದ ಪ್ರಾರ್ಥನೆ 10.30ಕ್ಕೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಧರ್ಮಗುರುಗಳಾದ  ಸ್ಯೆಯದ್ ಗುಲಾಮ್ ಮೊಹಮ್ಮದ್   ಸಿದ್ಧಿಕಿ ಅವರು  ಪ್ರಾಥ್ರನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ವಾಖ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್ ಮಾತನಾಡಿ

ತ್ಯಾಗ ಮತ್ತು ಬಲಿದಾನದ ಮಹತ್ವ ಸಾರುವ ಈ ಹಬ್ಬವನ್ನು ಎಲ್ಲರೂ ಶ್ರದ್ದಾ ಭಕ್ತಿಯಿಂದ ಆಚರಿಸುತ್ತೇವೆ, ಸಮಾಜದ ಬಡವರಿಗೆ ದಾನ ನೀಡುತ್ತೇವೆ, ಮನೆ ಮಂದಿ ಎಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತೇವೆ ಎಂದರು.  ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಮಿನಿಮಯ ಮಾಡಿಕೊಂಡರು


ಹಬ್ಬದ ಹಿನ್ನೆಲೆಯಲ್ಲಿ ಹೊಸ ಉಡುಗೆ, ತೊಡುಗೆ ತೊಟ್ಟ ಸಮುದಾಯದ ಮಕ್ಕಳು, ಮಹಿಳೆಯರು, ಹಿರಿಯರಾದಿಯಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಇನ್ನು ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಕೂಡ ಪಾಲ್ಗೊಂಡರು.  ಬಕ್ರಿದ್  ಹಬ್ಬದ ಹಿನ್ನೆಲೆಯಲ್ಲಿ ಈದ್ದಾ ಮೈದಾನದಲ್ಲಿ  ಪೊಲೀಸರು ಬಿಗಿ ಒಂದೋಬಸ್ತ್ ಏರ್ಪಡಿಸಿದ್ದರು .


ಈ   ಸಂದರ್ಭದಲ್ಲಿ  ರಾಜ್ಯಸಭಾ  ಸಾಧ್ಯಸ್ಯ  ನಾಸಿರ್ ಹುಸೇನ್   ಪಾಲಿಕೆಯ ಸದಸ್ಯರಾದ ಎನ್ ಎಂ ಡಿ  ಆಸೀಫ್  ಭಾಷ  ಪೇರಂ ವಿಕ್ಕಿ, ಅರ್ಷಾದ್ ಸಮೀರ್ ಶ್ರೀನಿವಾಸ ಮಿಂಚು, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡರಾದ   ಆಯಾಜ್ , ಸೈಫುಲ್ಲಾ, ಕಣೇಕಲ್ಲು ಮಹೆಬೂಬ್ ಸಾಬ್, ಹುಸೇನ್ ಪೀರಾ ರಿಯಾಜ್  ಸಾರ್ಫಾರಾಜ್,  ಮನ್ಸೂರ್, ಇರ್ಫಾನ್ ದಾದಾ ಸಲ್ಮಾನ್  ಸೇರಿದಂತೆ ಸಾವಿರಾರು ಜನ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.


(1)ಬಕ್ರೀದ್ ಹಬ್ಬದ ವಿಶೇಷತೆ ಬಾಕ್ಸ್)


  ಪ್ರಾಣಿ ಬಲಿ (ಕುರ್ಬಾನಿ) ಬಕ್ರೀದ್  ಹಬ್ಬದ ಜೀವಾಳ, ಕುರ್ಬಾನಿ

ಎಂದರೆ ಅತ್ಯಾಪ್ತ ವಸ್ತುವನ್ನು ಅಲ್ಲಾಹುವಿಗೆ ಸಮರ್ಪಿಸುವುದು ಎಂದರ್ಥ.


ಹೀಗಾಗಿ ಹಿಂದಿನಿಂದಲೂ ಕುರಿ, ಟಗರು, ಮೇಕೆ, ಹೋತ, ಬಲಿ ನೀಡಿ ಬಕ್ರೀದ್ ಆಚರಿಸಲಾಗುತ್ತಿದೆ. ಈ ಮೂಲಕ ಅಲ್ಲಾಹುವಿನ ಕೃಪೆ, ಅನುಗ್ರಹಕ್ಕೆ ಪಾತ್ರರಾಗುವುದು ಈ ಆಚರಣೆಯ ಹಿಂದಿನ ಉದ್ದೇಶ

ಪ್ರವಾದಿ  ಇಬ್ರಹಿಂ ಅಲೈ ಸಲಾಂ ಆಣತಿಯಂತೆ ಬಕ್ರೀದ್ ಆಚರಣೆ ವೇಳೆ ಬಲಿದಾನ ನೀಡುವುದು, ಬಡವರಿಗೆ ಹಬ್ಬದ ಊಟ ಕೊಡುವುದು ಆಚರಣೆಯ ಪ್ರಮುಖ ಅಂಶ. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಕಬರಸ್ತಾನಕ್ಕೆ ತೆರಳಿ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಸ್ಥಿತಿವಂತರು ಮನೆಯಲ್ಲಿ ಕುರಿ, ಮೇಕೆ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ