ಬಳಿಕ, 2023ರ ನವೆಂಬರ್ನಲ್ಲಿ ದುರ್ಗಪ್ಪರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಆದರೆ, ನ್ಯಾಯಾಲಯ ವಿಧಿಸಿದ್ದ ದಂಡ ಕಟ್ಟಬೇಕಾಗಿತ್ತು. ಆದರೆ, ದುರ್ಗಪ್ಪರ ಬಳಿ ಹಣವಿರಲಿಲ್ಲ. ಹೀಗಾಗಿ ಜೈಲಿನಿಂದ ಬಿಡುಗಡೆಯಾದರೂ ಹಣವಿಲ್ಲದೇ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರು.
ಜೈಲಾಧಿಕಾರಿಗಳು ದುರ್ಗಪ್ಪನ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆದರೆ, ದುರ್ಗಪ್ಪ ಸಂಬಂಧಿಕರು ಕ್ಯಾರೆ ಎನ್ನಲಿಲ್ಲ. ಅಲ್ಲದೇ, ಕೆಲ ಎನ್ಜಿಓಗಳನ್ನು ಸಂರ್ಪಕ ಮಾಡಿದ್ದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ದುರ್ಗಪ್ಪರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಅದರೂ, ಅಲ್ಲಿಂದಲೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.
ಆದರೆ, ವಯೊವೃದ್ದರಾಗಿದ್ದ ದುರ್ಗಪ್ಪರಿಗೆ ಜೈಲಿನಿಂದ ಬಿಡುಗಡೆಯಾಗುವ ಹಂಬಲವಿತ್ತು. ಅದರೆ, ಕಿತ್ತು ತಿನ್ನುವ ಬಡತನ ದುರ್ಗಪ್ಪರ ಆಸೆಗೆ ತಣ್ಣಿರೆಚಿತ್ತು. ಮದುವೆಯಾಗದ ದುರ್ಗಪ್ಪರಿಗೆ ಆಸ್ತಿ ಮನೆ ಯಾವುದು ಇರಲಿಲ್ಲ. ಲಿಂಗಸೂರಿನಲ್ಲಿ ಸಂಬಂಧಿಕರಿದ್ದರು. ಯಾರೂ ಕೂಡಾ ಸಹಾಯ ಮಾಡಿರಲಿಲ್ಲ. ಆಗ, ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧಿಕ್ಷಕಿ ಡಾ.ಅರ್ ಅನಿತಾ ಅವರು ದುರ್ಗಪ್ಪರ ನೆರವಾಗಿದ್ದಾರೆ.
ದುರ್ಗಪ್ಪ ಜೈಲಿನಲ್ಲಿದ್ದಾಗ ಮಾಡಿದ್ದ ಕೂಲಿ ಕೆಸಲದ ಹಣ ಇರುವುದನ್ನು ಪತ್ತೆ ಹಚ್ಚಿದ್ದರು. ದುರ್ಗಪ್ಪರ ಬ್ಯಾಂಕ್ ಖಾತೆ ಇದಿದ್ದು ಲಿಂಗಂಸೂರಿನಲ್ಲಿ. ಕೊನೆಗೆ ತಮ್ಮ ಸಿಬ್ಬಂದಿಯನ್ನು ದುರ್ಗಪ್ಪರ ಜೊತೆಗೆ ಕಳಹುಸಿ ಹಣ ಡ್ರಾ ಮಾಡಿಸಿಕೊಂಡು ಬರಲು ಅನುವು ಮಾಡಿಕೊಟ್ಟಿದ್ದರು. ಕೊನೆಗೆ ಜೀವಾವಧಿ ಶಿಕ್ಷೆಯ ತೀರ್ಪಿನಲ್ಲಿ ನ್ಯಾಯಾಲಯ ವಿಧಿಸಿದ್ದ ದಂಡದ ಮೊತ್ತ 1 ಲಕ್ಷ ರೂ. ಪಾವತಿ ಮಾಡಿಸಿ. ಕೊನೆಗೆ ಜೈಲಿಗೂ ಮಾನವೀಯ ಮುಖವಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.