Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಂಎಸ್ಎಂಇ ಕುರಿತು ಜಿಲ್ಲಾ ಚಾರ್ಟೆಡ್  ಅಕೌಂಟೆಂಟ್ ಸಂಘದ ವತಿಯಿಂದ ಕಾರ್ಯಗಾರ : ಎಸ್ ಪನ್ನರಾಜ್ 



 ಬಳ್ಳಾರಿ ಜೂನ್ 25 : ದೇಶದಲ್ಲಿ ಎಂಎಸ್ಎಂಇ ಯೋಜನೆ  ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನಡೆಯುವುದು ಈ ಯೋಜನೆಯನ್ನು ಎರಡು ಸರ್ಕಾರಗಳು ಉತ್ತೇಜಿಸಿದಲ್ಲಿ ಮಾತ್ರ ದೇಶದ ಜಿಡಿಪಿ ಹೆಚ್ಚಲು ಸಾಧ್ಯವಾಗುತ್ತದೆ ಇದನ್ನು ಮನಗಂಡ ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದ ವತಿಯಿಂದ ಇದೆ 27ರಂದು ನಗರದ ಬಸವ ಭವನದಲ್ಲಿ  ಎಂಎಸ್ಎಂಇ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು   ಲೆಕ್ಕಪರಿಶೋಧಕರ ಸಂಘದ ದಕ್ಷಿಣ ಭಾರತದ ಮಾಜಿ ಅಧ್ಯಕ್ಷರು ಹಾಗೂ ಎಂ ಎಸ್ ಎಮ್ಇ ಮಹೋತ್ಸವದ ನಿರ್ದೇಶಕರಾದ  ಎಸ್  ಪನ್ನರಾಜ್ ತಿಳಿಸಿದರು.


 ಅವರು ಇಂದು ನಗರದ ಪತ್ರಿಕಾ ಭವನದಲ್ಲಿ  ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ,  ದೇಶದ ಜಿಡಿಪಿಯಲ್ಲಿ ಎಂ ಎಸ್ ಎಮ್ ಈ ಪಾಲು ಶೇಕಡ 30ರಷ್ಟಿದೆ ದೇಶದ ಅಭಿವೃದ್ಧಿ ಕೇವಲ ಜಿಡಿಪಿಯಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ ದೇಶದ ಅಭಿವೃದ್ಧಿಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಪ್ರಕಾರ ಎಂಟರಷ್ಟು ಜಿಡಿಪಿ ಮುಟ್ಟಿದಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಉದ್ಯೋಗ ಸಿಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದೆ ಅದರಂತೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎಂ ಎಸ್ ಎಂ ಈ ಅಭಿವೃದ್ಧಿಯನ್ನು ಕೈಗೊಳ್ಳಲು ಲೆಕ್ಕ ಪರಿಶೋಧಕರ ಸಂಘ ವತಿಯಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಎಂಎಸ್ಎಂಇ ಪಾತ್ರ ಎಂಬ ವಿಷಯದ ಕುರಿತು ಗೋಷ್ಠಿ ಇರುತ್ತದೆ ಮತ್ತು ನಮ್ಮ ಸಂಘದ ವತಿಯಿಂದ ಪದವಿ ಮುಗಿಸಿ ಹೊರಬಂದ ವಿದ್ಯಾರ್ಥಿಗಳಿಗಾಗಿ ಎಂಎಸ್ಎಂಇ ಯೋಜನೆಯನ್ನು ಪರಿಚಯಿಸಿ ಈ ಯೋಜನೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲಾಗುವುದು ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು.


 ಉದ್ಯಮಿಯಾಗು ಉದ್ಯೋಗ ನೀಡು ಎಂಬ ಘೋಷ  ವಾಕ್ಯದೊಂದಿಗೆ ಶೇಕಡಾ 75ರಿಂದ 80ರ ವರೆಗೆ ಕೃಷಿ ಚಟುವಟಿಕೆಯೊಂದಿಗೆ ಎಂಎಸ್ಎಂಇಗಳನ್ನು ಅಭಿವೃದ್ಧಿಪಡಿಸಲಾಗುವುದು, ನಿರುದ್ಯೋಗ ಯುವಕರು ಕೇವಲ ಸಬ್ಸಿಡಿ ಮತ್ತು ಸಾಲಕ್ಕಾಗಿ ಉದ್ಯಮಿಯಾಗದೆ ಉದ್ಯಮ ಕ್ಷೇತ್ರದಲ್ಲಿ ತರಬೇತಿಯನ್ನು ಪಡೆದುಕೊಂಡು ಸರಿಯಾದ ಲೆಕ್ಕಚಾರದೊಂದಿಗೆ ಉದ್ಯಮವನ್ನು ಆರಂಭಿಸಿದಲ್ಲಿ ಮಾತ್ರ ವ್ಯವಹಾರಿಕವಾಗಿ ಯಶಸ್ವಿಯಾಗಲು ಸಾಧ್ಯ ಎಂದು ಈ ಸಂದರ್ಭದಲ್ಲಿ  ಯುವಕರಿಗೆ ಕಿವಿಮಾತು ಹೇಳಿದರು .


 ಈ ಕಾರ್ಯಕ್ರಮಕ್ಕೆ ಸರ್ಕಾರ ಡಿಐಸಿ ಮತ್ತು ಬ್ಯಾಂಕರ್ಸ್ ಗಳು ಕೈಜೋಡಿಸುತ್ತಾರೆ. 2017ರಿಂದ ಜಾಗತಿಕವಾಗಿ ಎಮ್ ಎಸ್ ಎಂ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಯುಕ್ತ ಬಳ್ಳಾರಿ ಜಿಲ್ಲೆಯಲ್ಲೂ ಸಹ ನಾವು ಎಂಎಸ್ಎಂಎ ಮಹೋತ್ಸವವನ್ನು ಹಮ್ಮಿಕೊಂಡಿದ್ದೇವೆ ಎಂದರು.


 ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಗಜರಾಜ್, ಕಾರ್ಯದರ್ಶಿ ವಿಶ್ವನಾಥ್ ಆಚಾರ್ ಉಪಾಧ್ಯಕ್ಷ ಕೆಎಂ ಪುರುಷೋತ್ತಮ್ ಖಜಾಂಚಿ ಕೆ ವಿ ಸಪ್ನ ಪ್ರಿಯ ಮತ್ತು ಜಿತೇಂದ್ರ ಪ್ರಸಾದ್ ಶರಣ ಪಾಟೀಲ್ ಸೇರಿದಂತೆ ಇತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ