Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಂಗಸಂಪದ ತಂಡದ ಎರಡು ದಿನಗಳ ರಂಗಾಭಿನಯ ಕಾರ್ಯಾಗಾರಕ್ಕೆ ಚಾಲನೆ 

ಬೆಳಗಾವಿ; ರಂಗಸಂಪದ ಬೆಳಗಾವಿಯ ತಂಡದ ಎರಡು ದಿನಗಳ ರಂಗಾಭಿನಯ ಕಾರ್ಯಾಗಾರ ಇವತ್ತು ಶನಿವಾರ ದಿ 25 ರಂದು ಬೆಳಿಗ್ಗೆಯ 10.30 ಕ್ಕೆ ಕನ್ನಡ ಸಾಹಿತ್ಯ ಭವನದಲ್ಲಿ ಪ್ರಾರಂಭವಾಯಿತು.14 ಮಹಿಳಾ ಮತ್ತು 11 ಪುರುಷ ಆಸಕ್ತ ಕಲಾವಿದರು ಭಾಗವಹಿಸುತ್ತಿರುವ ಈ ಕಾರ್ಯಾಗಾರವನ್ನು ಮುಖ್ಯ ಅತಿಥಿಗಳಾದ ಡಾ.ಬಸವರಾಜ ಜಗಜಂಪಿ ಅವರು ಸಸಿಗೆ ನೀರುಣಿಸಿ ಮತ್ತು ದಮಡಿ ಬಾರಿಸುವ ಮೂಲಕ ಉದ್ಘಾಟಿಸಿದರು. 
ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಕಾರ್ಯಾಗರದ ಪೂರ್ಣ ಸದುಪಯೋಗ ಪಡೆದುಕೊಳ್ಳಲು ಆಹ್ವಾನಿಸಿದರು..
ಸಂಪನ್ಮೂಲ ದಂಪತಿಗಳಾದ ಶ್ರೀಮತಿ ರಜನಿ ಮತ್ತು ಡಾ.ಪ್ರಕಾಶ ಗರುಡ ಅವರೂ ಸಹ ಸಸಿಗೆ ನೀರುಣಿಸಿ ದಮಡಿ ಬಾರಿಸುವ ಮೂಲಕ ಉದ್ಘಾಟಿಸಿದರು ಮತ್ತು ಕಲಾವಿದರಿಗೆ ಎರಡು ದಿನಗಳಲ್ಲಿ ಕಾರ್ಯಾಗಾರದಲ್ಲಿ ಪೂರ್ಣ ಸಹಭಾಗಿತ್ವ ಮಾಡಲು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿದ ಶ್ರೀ ಎಲ್ ಎಸ್ ಶಾಸ್ತ್ರೀ ಅವರು ಇಂತಹ ಅಪರೂಪದ ಕಾರ್ಯಾಗಾರ ಹಮ್ಮಿಕೊಂಡಿದ್ದಕ್ಕೆ ರಂಗಸಂಪದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಡಾ.ಅರವಿಂದ ಕುಲಕರ್ಣಿಯವರು ಸ್ವಾಗತಿಸಿ  ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶ್ರೀಮತಿಗಳಾದ ವೀಣಾ ಹೆಗಡೆ ಮತ್ತು ಪದ್ಮಾ ಕುಲಕರ್ಣಿಯವರು ಅತಿಥಿಗಳ ಪರಿಚಯ ಮಾಡಿದರು. ಶ್ರೀ ಪ್ರಸಾದ ಕಾರಜೋಳ ವಂದಿಸಿದರು.ಶ್ರೀ ಶರಣಯ್ಯ ಮಠಪತಿ ನಿರೂಪಿಸಿದರು.ಶ್ರೀ ಚಿದಾನಂದ ವಾಳಕೆ , ಶ್ರೀ ರಾಮಚಂದ್ರ ಕಟ್ಟಿ ಮತ್ತು ಶ್ರೀ ಬಸವರಾಜ ಹುಣಶೀಕಟ್ಟಿ ಸಹಕರಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ