Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮುದಾಯ ಭವನಕ್ಕೆ ರೂ.೨೫ಲಕ್ಷ, ಶೇಟಿಗಮ್ಮ ದೇವಸ್ಥಾನಕ್ಕೆ ರೂ.೫ಲಕ್ಷ ಅನುದಾನ : ಮನಗೂಳಿ ಭರವಸೆ

ಸಿಂದಗಿ: ರಜಪೂತ ಸಮಾಜದ ಬೇಡಿಕೆಗಳಾದ ಸಮುದಾಯ ಭವನಕ್ಕೆ ರೂ.೨೫ಲಕ್ಷ, ಶೇಟಿಗಮ್ಮ ದೇವಸ್ಥಾನಕ್ಕೆ ರೂ.೫ಲಕ್ಷ ಅನುದಾನ ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು. 
ಸಿಂದಗಿ ನಗರದ ಹೀರೋಡೇಶ್ವರ ದೇವಸ್ಥಾನದಲ್ಲಿ ರಜಪೂತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ರಾಷ್ಟ್ರವೀರ ಮಹಾರಾಣಾ ಪ್ರತಾಪ್‌ಸಿಂಹ ಅವರ ೪೮೯ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಜಪೂತ ಸಮುದಾಯವೆಂದರೆ ಭಾರತ ದೇಶದ ಸಂಸ್ಕೃತಿ ರಕ್ಷಕರು ಮತ್ತು ರಾ?ದ ಭಕ್ತರು. ಮೊಘಲರ ವಿರುದ್ಧ ಹೋರಾಡಿದ ಮಹಾನ್ ರಾಷ್ಟ್ರವೀರರು. ಇಂತಹ ಮಹಾನ್ ವ್ಯಕ್ತಿಯ ವೃತ್ತವನ್ನು ಅತೀ ಶಿಘ್ರದಲ್ಲಿಯೇ ಸಿಂದಗಿ ನಗರದಲ್ಲಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. 
ಈ ವೇಳೆ ಮುಖ್ಯ ಸಾಯಬಣ್ಣ ಪುರದಾಳ ಮಾತನಾಡಿ, ರಾಣಾ ಪ್ರತಾಪ್‌ಸಿಂಹ ಅವರು ರಜಪೂತ ವಂಶದ ಮೇವಾರ್‌ನ ೧೩ನೇ ರಾಜ. ಮೋಘಲ್ ಸಾಮ್ರಾಜ್ಯದ ವಿಸ್ತರಣೆಯನ್ನು ಪ್ರತಿರೋಧಿಸಿದ ಮತ್ತು ಸ್ವತಂತ್ರ ಉಳಿಯಲು ಹೋರಾಡಿದ ವೀರ ಯೋಧನಾಗಿ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಶಿವಲಾಲಸಿಂಗ ರಜಪೂತ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಹೀರಾಸಿಂಗ ರಜಪೂತ, ವಿಜಯಸಿಂಗ, ಭಗವಾನಸಿಂಗ, ಪರಶುರಾಮ ಸಿಂಗ, ಗಣಪತಿಸಿಂಗ, ವಿಕಾಸ, ವಿಠ್ಠಲಸಿಂಗ, ರಾಜು ಸಿಂಗ್, ಅರುಣ, ಅಪ್ಪಣ್ಣ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು ಹಾಗೂ ತಾಯಂದಿರು ಇದ್ದರು. ಅನಿಲಕುಮಾರ ರಜಪೂತ ನಿರೂಪಿಸಿದರು. ಸಚಿನ್ ಠಾಕೂರ ಸ್ವಾಗತಿಸಿದರು. ಜೈಯಸಿಂಗ ರಜಪೂತ ವಂದಿಸಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಸಾವುತಾಂತ್ರಿಕ ಕಾರಣಗಳಿಂದ ವೀರಭದ್ರೇಶ್ವರ ಏತ ನೀರವಾರಿ ವಿಳಂಭ : ಹೊಸ ಟೆಂಡರ್ ಕರೆದು, ಶೀಘ್ರ ಕಾಮಗಾರಿ ಪ್ರಾರಂಭ : ಪಟ್ಟಣ ಭರವಸೆ"ಸತತ ಪರಿಶ್ರಮ ಓದಿನೊಂದಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ"ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮೆಗಾ ಮಾರ್ಕೆಟಗೆ ರೂ.೫ ಕೋಟಿ ಅನುದಾನ ಬಿಡುಗಡೆ ತೋಟದ ವಸತಿಗಳಲ್ಲಿ ಸರಣಿ ಕಳ್ಳತನ ಮೇ.೧೧ರಂದು ಬೃಹತ್ ಉದ್ಯೋಗ ಮೇಳ  ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಹೆಮ್ಮೆಯ ರಾಜ್ಯ ನಮ್ಮದಾಗಿದೆ : ಹಾಸಿಂಪೀರ ವಾಲಿಕಾರ ಸಮುದಾಯ ಭವನಕ್ಕೆ ರೂ.೨೫ಲಕ್ಷ, ಶೇಟಿಗಮ್ಮ ದೇವಸ್ಥಾನಕ್ಕೆ ರೂ.೫ಲಕ್ಷ ಅನುದಾನ : ಮನಗೂಳಿ ಭರವಸೆ ಇಂಗಳಗಾಂವ ತೀರ್ಥ ಗ್ರಾಮದ ಸೀಮಿ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿಯಿಂದ ಅಡಿಗಲ್ಲುಆರ್‌ವೈಎಂಇಸಿ ಕಾಲೇಜಿನಲ್ಲಿ ‘ಗುರು ವಿಕಾಸ್’ ವಿಜ್ಞಾನ ವಿಭಾಗದ ಅಧ್ಯಾಪಕರ ವೃತ್ತಿಪರ ಅಭಿವೃದ್ಧಿ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನ