Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೂ. 14,248 ಕೋಟಿ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಬಳ್ಳಾರಿ,

ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗಿರುವ 2026-27ನೇ ಹಣಕಾಸು ವರ್ಷದ ಜಿಲ್ಲಾ ಕ್ರೆಡಿಟ್ ಯೋಜನೆಯನ್ನು ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ವತಿಯಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು. ನಗರದ ನೂತನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಈ ಸಾಲಿನ ಸಾಲ ಯೋಜನೆಯ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.

ಸಾಲ ಯೋಜನೆಯ ಮುಖ್ಯಾಂಶಗಳು (2026-27)
ಈ ಬಾರಿಯ ಸಾಲ ಯೋಜನೆಯು ಕಳೆದ ವರ್ಷಕ್ಕಿಂತ ಶೇ.16.19 ರಷ್ಟು ಹೆಚ್ಚಳ ಕಂಡಿದ್ದು, ಒಟ್ಟು ರೂ.14,248.71 ಕೋಟಿಗಳ ಗುರಿಯನ್ನು ಹೊಂದಿದೆ.
ಕೃಷಿ ವಲಯ: ಒಟ್ಟು ಯೋಜನೆಯ ಶೇ. 43.74 ರಷ್ಟು ಅಂದರೆ ರೂ. 6,231.71 ಕೋಟಿ ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.
ಎಂ.ಎಸ್.ಎA.ಇ: ಜಿಲ್ಲೆಯ ಕೈಗಾರಿಕಾ ಚಟುವಟಿಕೆಗಳ ಉತ್ತೇಜನಕ್ಕಾಗಿ ರೂ. 3,630.09 ಕೋಟಿ ನಿಗದಿಪಡಿಸಲಾಗಿದೆ.
ಆದ್ಯತಾ ವಲಯ: ಒಟ್ಟು ಯೋಜನೆಯ ಶೇ. 70.96 ರಷ್ಟು ಭಾಗವನ್ನು (ರೂ. 10,111.45 ಕೋಟಿ) ಆದ್ಯತಾ ವಲಯಕ್ಕೆ ನೀಡಲಾಗಿದೆ.
ಇತರೆ: ಶಿಕ್ಷಣ ವಲಯಕ್ಕೆ ರೂ. 44.56 ಕೋಟಿ ಹಾಗೂ ವಸತಿ ವಲಯಕ್ಕೆ ರೂ. 173.13 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.

ಕಳೆದ ಸಾಲಿನ ಸಾಧನೆ (2025-26):
ಬ್ಯಾಂಕಿAಗ್ ಪ್ರಗತಿ: ಜಿಲ್ಲೆಯ ಬ್ಯಾಂಕಿAಗ್ ವಲಯದ ಒಟ್ಟು ಠೇವಣಿ ರೂ. 21,858.21 ಕೋಟಿಗಳಾಗಿದ್ದು (ಶೇ. 16.26 ಪ್ರಗತಿ), ಒಟ್ಟು ಮುಂಗಡಗಳು ರೂ. 19,312.87 ಕೋಟಿಗಳಾಗಿವೆ. ಜಿಲ್ಲೆಯ ಸಾಲ-ಠೇವಣಿ ಅನುಪಾತವು ಶೇ. 88.36 ರಷ್ಟಿದೆ. ಕಳೆದ ಸಾಲಿನಲ್ಲಿ ರೂ. 12,263.03 ಕೋಟಿ ಸಾಲ ವಿತರಣೆಯ ಗುರಿಯ ವಿರುದ್ಧ ಬ್ಯಾಂಕುಗಳು ರೂ. 13,138.78 ಕೋಟಿ ವಿತರಿಸಿ, ಶೇ. 107.14 ರಷ್ಟು ಅತ್ಯುತ್ತಮ ಸಾಧನೆ ದಾಖಲಿಸಿವೆ ಎಂದು ಕೆನರಾ ಬ್ಯಾಂಕ್‌ನ ಎಲ್‌ಡಿಎಂ ಗಿರೀಶ್ ವಿ ಕುಲಕರ್ಣಿ ಅವರು ಕಳೆದ ವರ್ಷದ ಸಾಧನೆಯ ಅಂಕಿ-ಅAಶಗಳನ್ನು ಈ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, “ಪಿಎಂಎಫ್‌ಎAಇ, ಪಿಎಂಇಜಿಪಿ ಹಾಗೂ ಪಿಎಂ ಸ್ವಾನಿಧಿಯಂತಹ ಯೋಜನೆಗಳ ಸಮರ್ಪಕ ಅನುಷ್ಠಾನವಾಗಬೇಕು. ಬ್ಯಾಂಕರ್‌ಗಳು ಮತ್ತು ಸರ್ಕಾರಿ ಇಲಾಖೆಗಳ ನಡುವೆ ಉತ್ತಮ ಸಮನ್ವಯವಿದ್ದರೆ ಈ ವರ್ಷವೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಆಶಿಸಿದರು.

ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಸಣ್ಣ ಸಾಲಗಳಿಗೆ ಮತ್ತು ಸರ್ಕಾರಿ ಯೋಜನೆಗಳಿಗೆ ಮೇಲಾಧಾರ ಭದ್ರತೆ ಕೇಳದಂತೆ ಬ್ಯಾಂಕರ್‌ಗಳಿಗೆ ಸೂಚಿಸಿದ ಅವರು, ಸಕಾಲಿಕ ಸಾಲ ಹರಿವು ಜಿಲ್ಲೆಯ ನಿರುದ್ಯೋಗ ನಿರ್ಮೂಲನೆಗೆ ಸಹಕಾರಿ ಎಂದರು.

ಈ ವೇಳೆ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎಜಿ, ವಿಭಾಗೀಯ ವ್ಯವಸ್ಥಾಪಕ ಉಪೇಂದ್ರ ಸಿಂಗ್, ಯೂನಿಯನ್ ಬ್ಯಾಂಕ್‌ನ ಜಿ. ರಾಜೇಶ್, ಕೆಜಿಬಿ ಹಿರಿಯ ವ್ಯವಸ್ಥಾಪಕ ಚಂದ್ರಪ್ಪ, ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ನಾಗರಾಜು, ಐಓ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಮಹಾಂತೇಶ್.ಟಿ., ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯಸ್ಥ ರಮೇಶ್ ಜೋನಾಲ್, ಕ್ಲಸ್ಟರ್ ಮುಖ್ಯಸ್ಥ ನಂದ ಕಿಶೋರ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಾಸೀರ್ ಅಹಮದ್, ಆರ್‌ಎಸ್‌ಇಟಿಐ ಸಿಬಿ ನಿರ್ದೇಶಕ ರಾಜಸಾಬ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಜಿಲ್ಲಾ ಸಂಯೋಜಕರು ಮತ್ತು ಲೈನ್ ಇಲಾಖೆಯ ಅಧಿಕಾರಿಗಳು ಇದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ