ಗಂಗಾವತಿ : ಪ್ರತಿ ಕ್ಷೇತ್ರದಲ್ಲೂ ದುಡಿಯುವ ವರ್ಗದ ಮೇಲೆ ಆ ಕ್ಷೇತ್ರದ ಅಭಿವೃದ್ಧಿ ಪೂರಕವಾಗಿದ್ದು, ದೇಶದ ಔನ್ನತಿಗೆ ಕಾರ್ಮಿಕರ ಪ್ರಮಾಣಿಕ ಶ್ರಮ ಪ್ರಮುಖ ಎಂದು ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಸೇವಾ ಸಂಘದ ರಾಜ್ಯಧ್ಯಕ್ಷ ಶಿವುಕುಮಾರ್ ಹೇಳಿದರು.
ಅವರು, ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಸೇವಾ ಸಂಘವು ಸಮೀಪ ಬಾಪಿರೆಡ್ಡಿ ಕ್ಯಾಂಪಿನಲ್ಲಿ ಆಯೋಜಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಹಾಗು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರವು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು, ಶ್ರಮಿಕರ ಜೀವನಮಟ್ಟ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಮಾತನಾಡಿ, ಕಾರ್ಮಿಕರು ತಮ್ಮ ಸೌಲಭ್ಯಗಳನ್ನು ಪಡೆಯಲು ಸಂಘಕ್ಕೆ ಭೇಟಿ ನೀಡಬೇಕು, ಹಲವು ಸೌಲಭ್ಯ ಪಡೆಯದೆ ಅನೇಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ತಿಳುವಳಿಕೆಯ ಕೊರತೆಯಿದೆ ಪ್ರತಿಯೊಬ್ಬರು ಎಲ್ಲರ ಜಾಗೃತಿಗೆ ದುಡಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಕೆ. ಸಂಜನಾ, ಸಂಜಿತ ಕುಮಾರ್ ಇಂಗಳಗಿ, ಹರ್ಷವರ್ಧನ್, ಅನುಷಾ, ಶಹಬುದ್ದೀನ್, ಇರ್ಫಾನ್, ಗಾಯತ್ರಿ, ಅಯೋಸ್ತೀರ್, ರಾಣಿ, ಲತಾ, ಪ್ರೇಮ್ ಕುಮಾರ್, ಸಲೀಮ್, ಐಶ್ವರ್ಯ, ಭರತ್ ಸೇರಿದಂತೆ ಅನೇಕ ಪಿಯು ಮಕ್ಕಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತಲ್ಲದೆ , ಹಿರಿಯ ಕಾರ್ಮಿಕರನ್ನೂ ಸನ್ಮಾನಿಸಲಾಯಿತು. ಕಾರ್ಮಿಕ ದಿನಾಚರಣೆ ಪಯುಕ್ತ ಹಿರಿಯ ಕಾರ್ಮಿಕರಾದ ಪರಶುರಾಮ್ ಮೇಸ್ತ್ರಿ, ಬಾಬು ಮೇಸ್ತ್ರಿ, ಬಸವರಾಜ್ ಮೇಸ್ತ್ರಿ, ನಾಗೇಶ್ ರಾವ್ ಮೇಸ್ತ್ರಿ, ಹನುಮಂತ ಮೇಸ್ತ್ರಿ, ವೀರೇಶ್ ಮೇಸ್ತ್ರಿ, ರಹೀಮ್ ಸಾಬ್ ಮೇಸ್ತ್ರಿ, ಸಂಗಪ್ಪ ಮೇಸ್ತ್ರಿ, ಷರೀಪ್ ಮೇಸ್ತ್ರಿ, ಸುಕುಮುನಿ ಮೇಸ್ತ್ರಿ, ಮಾರೇಶ್ ಮೇಸ್ತ್ರಿ, ರಾಮ್ ಮೇಸ್ತ್ರಿ, ಸೀಮಾನ್ ಮೇಸ್ತ್ರಿ, ಅಬ್ರಾ ಮೇಸ್ತ್ರಿ, ರವಿ ಮೇಸ್ತ್ರಿ, ಸಂಗಪ್ಪ ಮೇಸ್ತ್ರಿ, ಶಾಮಣ್ಣ ಮೇಸ್ತ್ರಿ, ಹನುಮಂತ ಮೇಸ್ತ್ರಿ, ಎಲ್ಲಪ್ಪ ಮೇಸ್ತ್ರಿ, ದುರುಗಪ್ಪ ಮೇಸ್ತ್ರಿ, ವೀರೇಶ್ ಹಣವಾಳ್, ರಾಘವೇಂದ್ರ ಮೇಸ್ತ್ರಿ, ಹುಲುಗಯ್ಯ ಮೇಸ್ತ್ರಿ, ಚಂದ್ರು ಮೇಸ್ತ್ರಿ ಹಾಗು ಇಮಾಮ್ ಮೇಸ್ತ್ರಿ ಇವರನ್ನು ಗೌರವಿಸಲಾಯಿತು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ್ ಕುಷ್ಠಗಿ, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಜೇಶ್ ಹೇರೂರ್, ಕಾರಟಗಿ ತಾಲೂಕು ಅಧ್ಯಕ್ಷ ಬಾಬು ಮೇಸ್ತ್ರಿ ಇತರರಿದ್ದರು.