ಎತ್ತಿನ ಬಂಡಿಯಲ್ಲಿ ಸರಕು ಸಾಗಾಣಿಕೆ : ಪರಿಷ್ಕøತ ಧರ ಒಪ್ಪಂದ
ಬಳ್ಳಾರಿ, ಏ. 19:ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಬಳ್ಳಾರಿ ನಗರದ ಎಪಿಎಂಸಿ ಎತ್ತಿನ ಬಂಡಿಗಳಲ್ಲಿ ಸರಕು ಸಾಗಾಣಿಕೆ ಮಾಡುವ ಕುರಿತು ಬಂಡಿ ಚಾಲಕರ ಸಂಘ, ಅಕ್ಕಿ ವರ್ತಕರ ಸಂಘ ಮತ್ತು ಬಳ್ಳಾರಿ ಕಿರಾಣಿ ಅಸೋಸಿಯೇಷನ್ ಮಧ್ಯೆ ಧರ ಪರಿಷ್ಕರಣೆ ಮಾಡಿ, ಶನಿವಾರ ಒಪ್ಪಂದ ಮಾಡಿಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಬಂಡಿ ಚಾಲಕರ ಸಂಘದ ಪ್ರತಿನಿಧಿಗಳಾಗಿ ಬಿ. ರಾಜೇಶ್ ಮತ್ತು ನೂರ್, ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾದ ಜಿ. ಹನುಮೇಶ್, ಕಾರ್ಯದರ್ಶಿಗಳಾದ ಆರ್. ರಮೇಶ್ ಮತ್ತು ಬಳ್ಳಾರಿ ಕಿರಾಣಿ ಅಸೋಸಿಯೇಷನ್‍ನ ಪ್ರತಿನಿಧಿಯಾಗಿ ಬೆಲ್ಲಂಕೊಂಡ ವೀರಾಂಜಿನೇಯಲು ಅವರು ನೂತನ ಧರಪಟ್ಟಿ ಕರಾರು ಒಪ್ಪಂದಕ್ಕೆ ಸಹಿ ಮಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ಬಂಡಿ ಚಾಲಕರ ಸಂಘದ ಪದಾಧಿಕಾರಿಗಳು, ಸರಕು ಸಾಗಾಣಿಕೆಯ ವೆಚ್ಚ ಹೆಚ್ಚಳಕ್ಕೆ ನಮ್ಮ ಸಂಸ್ಥೆಯನ್ನು ಕೋರಿದಾಗ, ಸಂಬಂಧಿಸಿದವರ ಜಂಟಿ ಸಭೆಯನ್ನು ನಡೆಸಿ, ನೂತನ ಧರಪಟ್ಟಿಯನ್ನು ಸಿದ್ದಪಡಿಸಿ, ಒಪ್ಪಂದವನ್ನು ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಖಜಾಂಚಿಗಳಾದ ಸಿ.ಎಸ್. ಸತ್ಯನಾರಾಯಣ, ಪತ್ರಿಕಾ ಮತ್ತು ಮಾಧ್ಯಮ ಚೇರ್ಮನ್ ಟಿ. ಶ್ರೀನಿವಾಸರಾವ್, ಈವೆಂಟ್ಸ್ ಕಮಿಟಿ ಚೇರ್ಮನ್ ನೇಕಾರ ನಾಗರಾಜ್, ಮ್ಯಾಗಜಿನ್ ಕಮಿಟಿ ಚೇರ್ಮನ್ ಕೌಡಿಕಿ ಹನುಮೇಶಬಾಬು, ವಿಶೇಷ ಆಹ್ವಾನಿತರಾದ ಕೆ.ಎಂ. ಭೋಗೇಶ್ ಸೇರಿ ಸಂಬಂಧಿಸಿದ ಸಂಘಟನೆಗಳ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.