ಬೆಳಗಾವಿ.ಗಣಕರಂಗ(ರಿ)ಧಾರವಾಡ ಇವರು ಆಯೋಜಿಸಿದ್ದ "ಬುದ್ಧ ಯುದ್ಧ ಕವನ ಸ್ಪರ್ಧೆ-2026" ರ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿಯ ಸಾಹಿತಿಗಳಾದ ಕಿರಣ ಕ ಗಣಾಚಾರಿ. ಮುತ್ತಿನಪೆಟ್ಟಿಗಿ(ಇಟಗಿ) ಇವರ ಕವನ 'ಮನ ಶುದ್ಧ ಬುದ್ಧ' ಸ್ವರಚಿತ ಕವನವು 'ಪ್ರಥಮ ಬಹುಮಾನ' ಕ್ಕೆ ಪಾತ್ರವಾಗಿರುತ್ತದೆ ಹಾಗೂ ದ್ವಿತೀಯ ಬಹುಮಾನ ದೀಪಾ ಪಾಟೀಲ್ ಟಿ ಗುಂಡೂರು, ತೃತೀಯ ಬಹುಮಾನ ಜಗದೀಶ್ ಮುಗಳಿ ಬೆಂಡವಾಡ ಮತ್ತು ನಾಲ್ವರು ಮೆಚ್ಚುಗೆ ಬಹುಮಾನಕ್ಕೆ ಪಾತ್ರರಾಗಿರುತ್ತಾರೆ ಎಂದು ಗಣಕರಂಗ(ರಿ)ಧಾರವಾಡ ಅಧ್ಯಕ್ಷರು ಹಾಗೂ ರಂಗಕರ್ಮಿ-ಸಂಕಟಕರಾದ ಸಿದ್ದರಾಮಯ್ಯ ಹಿಪ್ಪರಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.