Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮ ಕಾರ್ಯವೇ ನಮಗೆ ಆದರ್ಶವಾದಾಗ ಗೌರವ ತಾನೆ ಬರುತ್ತದೆ:  ಸುನೀಲ ಬಾಗೇವಾಡಿ

ಧಾರವಾಡ: ಸಾಮಾನ್ಯ ಮತ್ತು ಅಸಾಮಾನ್ಯವಾಗಿ ಬದುಕುವವರದ್ದು 'ನಾನು', 'ನನ್ನದು' ಎನ್ನುವ ಚೌಕಟ್ಟಿನಿಂದ ಹೊರತಾದ ಬದುಕು ಆಗಿರುತ್ತದೆ. ಅದು ಸ್ವಹಿತಾಸಕ್ತಿಯ ಹೊರತಾದ ಸಮಷ್ಠಿಯ ಯೋಚನೆಯಾದಾಗ ನಮ್ಮ ಕಾರ್ಯವೇ ನಮಗೆ ಆದರ್ಶವಾಗಿ ನಿಲ್ಲುತ್ತದೆ ಎಂದು ಇಂ. ಸುನೀಲ ಬಾಗೇವಾಡಿ ಹೇಳಿದರು.


ಅವರು ಅಶೋಶಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜನಿಯರ್ಸ, ಲೋಕಲ್ ಸೆಂಟರ್ ಧಾರವಾಡದಿಂದ  ಚಿಕ್ಕಮಲ್ಲಿಗವಾಡದ  ರೈಸಿಂಗ್ ರೇಸಾರ್ಟಿನಲ್ಲಿ ರಾಜ್ಯೋತ್ಸವದ ಆಚರಣೆ ಅಂಗವಾಗಿ ಮಹಾನಗರ ಪಾಲಿಕೆಯಿಂದ ನೀಡಲಾದ ಧೀಮಂತ ಪುರಸ್ಕಾರಕ್ಕೆ  ಭಾಜನರಾದ ಇಬ್ಬರು ಸಿವಿಲ್ ಇಂಜಿನಿಯರಗಳನ್ನು ಸನ್ಮಾನಿಸಿ ಮಾತನಾಡಿದರು. ಇವರಿಬ್ಬರು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿದ್ದು ಸಮಾಜದ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯವಾದ ಸೇವೆ ಸಲ್ಲಿಸಿ ಧೀಮಂತ ಪ್ರಶಸ್ತಿಗೆ ಭಾಜನರಾಗಿ ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿಗಳಾಗಿದ್ದಕ್ಕೆ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.


ಡಾ. ರಮೇಶ್ ಚಕ್ರಸಾಲಿ ಪ್ರಾಚಾರ್ಯರು,ಧರ್ಮಸ್ಥಳ ಇಂಜಿನಿಯರಿಂಗ್ ಕಾಲೇಜ್ ಹಾಗೂ ಡಾ. ಮನೋಜ್ ಚಿತ್ತವಾಡಗಿ, ಸಿವಿಲ್ ಮುಖ್ಯಸ್ಥರು ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ, ಅವರುಗಳು ಮುಖ್ಯ ಆತಿಥಿಗಳಾಗಿ ಮಾತನಾಡಿದರು.


ಗೌರವ ಸನ್ಮಾನ ಸ್ವೀಕರಿಸಿದ ಡಾ. ಎಂ ಆರ್. ಪಾಟೀಲ ಮಾತನಾಡಿ "ಧೀಮಂತರಾಗಲು ಒಬ್ಬರಿಂದಲೇ ಸಾಧ್ಯವಿಲ್ಲ ನಿಮ್ಮೆಲ್ಲರ ಸಹಾಯ ಸಹಕಾರ  ಇದ್ದ ಕಾರಣಕ್ಕೆ ತಮಗೆ ಸಮಾಜಸೇವೆ ತಮ್ಮ ಕ್ಷೇತ್ರದ ಮೂಲಕ ಸಾಧ್ಯವಾಯಿತು"  ಎಂದರು.


ಶ್ರೀ ಅರವಿಂದ ಕುಲಕರ್ಣಿ ಮಾತನಾಡಿ "ಇಂದು ಪ್ರತಿಯೊಬ್ಬ ಇಂಜಿನಿಯರ್ ಬಹುಮುಖ ಪ್ರತಿಭೆ ವ್ಯಕ್ತಿತ್ವ ಬೆಳೆಸಿಕೊಳ್ಳುವ ಮೂಲಕ ಸಮಾಜಸೇವೆ ಮಾಡಬಹುದು. ಕಲಿಸುವದು, ಕಟ್ಟುವದು, ಕೇಳುವದು-ಮಾಡುವದರ ಮೂಲಕ ಉತ್ತಮ ವ್ಯಕ್ತಿತ್ವ  ನಿರ್ಮಾಣ ಮಾಡಿಕೊಳ್ಳಬೇಕಾಗಿದೆ ಎಂದರು.


 ಇಂ. ವಿಜಯ ತೊಟಿಗೇರ ಸ್ವಾಗತಿಸಿದರು,  ಕಾರ್ಯದರ್ಶಿಗಳಾದ ಇಂ. ಸಿದ್ದನಗೌಡ ಪಾಟೀಲರು ವಂದಿಸಿದರು. ಕಾರ್ಯಕ್ರಮವನ್ನು ಇಂ. ದಾಮೋದರ ಹೆಗಡೆ  ನಿರೂಪಿಸಿದರು. ಕೊನೆಗೆ ಮಧುರ ಸಂಗೀತವನ್ನು ಅಭಿಯಂತರರು ನೀಡಿದ್ದು ಇಡೀಯಾದ ಕಾರ್ಯಕ್ರಮ ಕಳೆಗಟ್ಟಿತ್ತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ