Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂವಿಧಾನವನ್ನು ಕಾಪಾಡಿಕೊಳ್ಳಲು, ಶಾಂತಿಯ ತೋಟವನ್ನು ಸಂರಕ್ಷಿಸಿಕೊಳ್ಳಲು ದೇಶ ಉಳಿಸಿ ಸಂಕಲ್ಪ

ವಿಜಯಪುರ,ಏಪ್ರಿಲ್5: ವಿಜಯಪುರ ನಗರದ ಬೆಂಗಳೂರು ರೆಸ್ಟೋರೆAಟ್ ಹಾಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಏಪ್ರಿಲ್ 07/04/2024 ದೇಶ ಉಳಿಸಿ ಸಂಕಲ್ಪ ಯಾತ್ರೆ ನಡೆಯುತ್ತದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಾಥ ಪೂಜಾರ್ ಅವರು ಹೇಳಿದರು. ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಅAಬೇಡ್ಕರ ಸರ್ಕಲ ವರೆಗೊ ರ‍್ಯಾಲಿ ನಡೆಯುವುದು.

ಬರಲಿರುವ  ಲೋಕಸಭಾ ಚುನಾವಣೆಗಳು ಮುಂದಿನ 5 ವರ್ಷಗಳ ಕಾಲ ನಮ್ಮನ್ನು ಯಾರು ಆಳಬೇಕು ಎಂಬುದನ್ನು ತೀರ್ಮಾನಿಸುವ ಚುನಾವಣೆ ಮಾತ್ರವಾಗಿರದೆ, ಈ ದೇಶ ಪ್ರಜಾತಂತ್ರ ವ್ಯವಸ್ಥೆಯಡಿ ಇರಬೇಕಾ, ಸರ್ವಾಧಿಕಾರಕ್ಕೆ ಒಳಗಾಗಬೇಕಾ ಎಂಬುದನ್ನು ನಿರ್ಧರಿಸುವ ಚುನಾವಣೆಯಾಗಿದೆ ಎಂದು ಡಿ ವಿ ಪಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಾಥ ಪೂಜಾರಿ ಹೇಳಿದರು.

ದೇಶ ಅವನತಿಯ ಅಂಚಿಗೆ ಬಂದು ನಿಂತಿದೆ. ಈ ಅವನತಿಯಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು ಸಂಕಲ್ಪ ಜಾಥ ಪ್ರಾರಂಭವಾಗಿದೆ, ಈ ಯಾತ್ರೆಯ ವಿವರ, ಗುರಿ, ಉದ್ದೇಶಗಳ ಬಗ್ಗೆ ಅತಿ ಹೆಚ್ಚಿನ ಪ್ರಚಾರ ನೀಡಬೇಕೆಂದು ತಮ್ಮಲ್ಲಿ ಕೋರುತ್ತೇವೆ. ಯಾತ್ರೆಯ ವಿವರ: ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳ ಸAಯುಕ್ತಾಶ್ರಯದಲ್ಲಿ ಏಪ್ರಿಲ್ 1ರಿಂದ ಚಾಲನೆ ಪಡೆದಿರುವ ದೇಶ ಉಳಿಸಿ ಸಂಕಲ್ಪ ಯಾತ್ರೆ, ಮೂರು ವಾಹನಗಳಲ್ಲಿ, ಮೂರು ಮಾರ್ಗಗಳಲ್ಲಿ ಚಲಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಹಾಯ್ದು ಏಪ್ರಿಲ್ 8 ರಂದು ಬೆಳಗಾವಿ ತಲುಪಲಿದೆ. ಅಲ್ಲಿ ದೇಶ ಉಳಿಸಿ ಸಂಕಲ್ಪ ಸಮಾವೇಶ ಜರುಗಲಿದೆ. ಅದರಲ್ಲಿ ನಾಡಿನ ಎಲ್ಲಾ ಸಂಘಟನೆಗಳ, ಸಮುದಾಯಗಳ, ಸಾಹಿತ್ಯ - ಸಾಂಸ್ಕೃತಿಕ ವಲಯದ ಮುಂದಾಳುಗಳು ಸಮಾಗಮಗೊಳ್ಳಲಿದ್ದಾರೆ. ಈ ದೇಶವನ್ನು ಸರ್ವಾಧಿಕಾರದಿಂದ, ದ್ವೇಷರಾಜಕಾ ರಣದಿಂದ ಸುಲಿಗೆಕೋರ ನೀತಿಗಳಿಂದ ಕಾಪಾಡಿಕೊ ಳ್ಳುವ ಪಣ ತೊಡಲಾಗುತ್ತದೆ. ಹಿನ್ನೆಲೆ: ರಾಜ್ಯದ ಸಾಹಿತಿ, ಚಿಂತಕರು, ಹೋರಾಟಗಾರರ ನಡುವೆ ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ಹಲವು ಸಮಾಲೋಚನಾ ಸಭೆಗಳು ನಡೆದವು. ಬರಲಿರುವ ಚುನಾವಣೆಗಳ ಗಂಭೀರತೆಯ ಬಗ್ಗೆ,, ಈ  ಚುನಾವಣೆಗಳಲ್ಲಿ ನಾಗರೀಕ ಸಮಾಜದ ಪಾತ್ರದ ಬಗ್ಗೆ ಆಳವಾದ ಮಂಥನಗಳು ನಡೆದವು.

ರಾಜ್ಯವ್ಯಾಪಿಯಾಗಿ ವಿವಿಧ ಸಂಘಟನೆ ಮತ್ತು ವೇದಿಕೆಗಳಡಿ ಸಂವಿಧಾನ ರಕ್ಷಣೆಗಾಗಿ, ಸಹಬಾಳ್ವೆಯ ಮರುಸ್ಥಾಪನೆಗಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಈ ಎಲ್ಲಾ ಜೀವಪರ ಧಾರೆಗಳ ನಡುವೆ ತಳಮಟ್ಟದಲ್ಲೂ ಸಮರ್ಥ ಸಮನ್ವಯ ರೂಪಗೊಳ್ಳಬೇಕು ಹಾಗೂ ನಾವೆಲ್ಲರೂ ಕೂಡಿ ಒಕ್ಕೊರಲ ಸಂಕಲ್ಪ ತೊಡಬೇಕು ಎಂಬ ಅಭಿಪ್ರಾಯ  ವ್ಯಕ್ತಪಡಿಸಿದರು.

ಎಲ್ಲಾ ಜನಪರ ಶಕ್ತಿಗಳ ನಡುವೆ ಸಮನ್ವಯವನ್ನು ಸಂಬAಧವನ್ನು ಗಟ್ಟಿಗೊಳಿಸುವ ಸಲುವಾಗಿ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಜನಪರ ಶಕ್ತಿಗಳ ಐಕ್ಯ ನಿಲುವಿನ ಘೋಷಣೆಗಾಗಿ ಏಪ್ರಿಲ್ 8 ರಂದು ಬೆಳಗಾವಿಯಲ್ಲಿ ಸಂಕಲ್ಪ ಸಮಾವೇಶ ಜರುಗಲಿದೆ. ಗುರಿ: ಕರ್ನಾಟಕದಲ್ಲಿ ಅನೇಕ ಜನ ಚಳವಳಿಗಳು, ಸಂಘಟನೆಗಳು, ವೇದಿಕೆಗಳು ಇದ್ದರೂ ನಮ್ಮೆಲ್ಲರ ಗುರಿ ಒಂದೇ ಆಗಿದೆ -ಬರಲಿರುವ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ, ಧರ್ಮಾಂಧ, ಸುಲಿಗೆಕೋರ ಬಿಜೆಪಿಯನ್ನು ಸೋಲಿಸುವುದು. ಬಣ್ಣ ಬಣ್ಣದ ಕನಸುಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದ ಮೋದಿ
ಸರ್ಕಾರ ಕಳೆದ 10 ವರ್ಷಗಳಲ್ಲಿ ತನ್ನ ನಿಜಬಣ್ಣವನ್ನುತೋರಿಸಿಕೊಂಡಿದೆ, ದೇಶದ ಪರಿಸ್ಥಿತಿಯನ್ನು ಅದೋಗತಿಗೆ ತಂದಿಟ್ಟಿದೆ. ಜನಸಾಮಾನ್ಯರ ಬದುಕನ್ನು ಪಾತಾಳಕ್ಕೆ ತುಳಿದಿದೆ. ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ ಭ್ರಷ್ಟಾಚಾರ ಕಂಪನಿಗಳ ಲೂಟಿ ಜನಸಾಮಾನ್ಯರ ಸುಲಿಗೆ ಆದ ಅನ್ಯಾಯ ಹೆಚ್ಚುತ್ತಿರಿವ ಹಿಂಸೆ ದಮನ ದೌರ್ಜನ್ಯ ಧಾರ್ಮಿಕ ದೇಶದ ಬೆಳವಣಿಗೆಗಳಾಗಿವೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಸ್ಲಂ ಅಭಿವೃದ್ಧಿ ಸಮಿತಿಯ ಮಾಜಿ ಜಿಲ್ಲಾ ಅಧ್ಯಕ್ಷರಾದ ಅಕ್ರಂ ಮಾಶಾಳಕರ, ಜಮಾತೆ ಇಸ್ಲಾಂ ಸ್ಥಾನಿಕ ಅಧ್ಯಕ್ಷರಾದ ಐ ಎನ್ ಹುಲಿಕಟ್ಟಿ, ಎದ್ದೇಳು ಕರ್ನಾಟಕ ಜಿಲ್ಲೆಯ ಕೋಆರ್ಡಿನೇಟರ್ ಮಹಮ್ಮದ್ ಅಬ್ದುಲ್ ಖದಿರ್, ಸ್ಲಂ ಅಭಿವೃದ್ಧಿ ನಗರ ಸಮಿತಿ ಅಧ್ಯಕ್ಷರಾದ ಮುತ್ತಣ್ಣ ಬೋವಿ ಇತರರು ಇದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ