ಬಳ್ಳಾರಿ,ಜೂ.೧೮ : ಟಾಟಾ ಪವರ್ ಕಂಪನಿಯವರು ರಾಜ್ಯ 19 ಜಿಲ್ಲೆಗಳ ವಿದ್ಯುತ್ ವಿತರಣೆಯನ್ನು ಪಡೆಯು ಸಲ್ಲಿಸಿರುವ ಅರ್ಜಿಯನ್ನು ಕೆ.ಈ.ಆರ್.ಸಿ ಕೂಡಲೇ ತಿರಸ್ಕಾರ ಮಾಡಲು ಆಗ್ರಹಿಸಿ ರಾಜ್ಯದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಇಂದು ಕುರುಗೋಡು ಪಟ್ಟಣದ ಜೆಸ್ಕಾಂ ನ ಎ ಇ ಇ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಬೆಸ್ಕಾಂ ವ್ಯಾಪ್ತಿಯ 6, ಚೆಸ್ಕಾಂ ವ್ಯಾಪ್ತಿಯ 3, ಮೆಸ್ಕಾಂ ವ್ಯಾಪ್ತಿಯ 3, ಹೆಸ್ಕಾಂ ವ್ಯಾಪ್ತಿಯ 3 ಹಾಗೂ ಜೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳ ಒಟ್ಟು ಕರ್ನಾಟಕದ 19 ಕಂದಾಯ ಜಿಲ್ಲೆಗಳಲ್ಲಿ ಪರ್ಯಾಯವಾಗಿ ವಿದ್ಯುತ್ ಪೂರೈಕೆ ಮಾಡಲು ಲೈಸೆನ್ಸ್ ನೀಡುವಂತೆ ಟಾಟಾ ಪವರ್ ಖಾಸಗಿ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ. ವಿದ್ಯುತ್ ವಿತರಣೆಯ ಖಾಸಗೀಕರಣವು ಬಹಳ ದೊಡ್ಡ ತೊಂದರೆಗಳನ್ನು ಉಂಟು ಮಾಡಲಿದ್ದು ಪಂಪ್ ಸೆಟ್ ಬಳಸಿ ಕೃಷಿ ಮಾಡುವ ರೈತರನ್ನು, ಎಲ್ಲಾ ರೀತಿಯ ಗ್ರಾಹಕರನ್ನು ದಿವಾಳಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಟಾಟಾ ಪವರ್ ಅರ್ಜಿಯನ್ನು ಕೆ. ಇ.ಆರ್.ಸಿ ಅವರು ಕೂಡಲೇ ತಿರಸ್ಕರಿಸಬೇಕು ಎಂದು ಆಗ್ರಹಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಎ ಐ ಡಿ ವೈ ಒ ಯುವಜನ ಸಂಘದ ಜಿಲ್ಲಾ ಅಧ್ಯಕ್ಷ ಕೋಳೂರು ಪಂಪಾಪತಿ, ನರೇಗಾ ಉಳಿಸಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಕಲ್ಲುಕಂಭ ಪಂಪಾಪತಿ, ತಾಲೂಕು ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಕಾಸಿಂ ಸಾಬ್ ರೈತರಾದ ವೆಂಕಟೇಶ್, ಶ್ರೀನಿವಾಸ್, ಪಾಂಡು ಸೇರಿದಂತೆ ಇತರರು ಉಪಸ್ಥಿತರಿದ್ದರು.