ವಿಜಯಪುರ,ಮೇ,೦೭ : ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿ.ನೆಲ-ಜಲ ಹಾಗೂ ಸಂಸ್ಕೃತಿ-ಪರಂಪರೆ ಉಳಿಸುವ ಬೆಳೆಸುವ ಪ್ರಾತಿನಿಧಿಕ ಸಂಸ್ಥೆಯಾಗಿ. ೧೧೨ ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಆಚರಿಸುತ್ತಿರುವದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷೆ ಜಯಶ್ರೀ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು
ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ೧೧೨ ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆ ಎರಡು ಸಾವಿರ ವಷ೯ದ ಇತಿಹಾಸ ಹೊಂದಿದೆ. ಕನ್ನಡ ಅನ್ನದ ಭಾಷೆಯಾಗಿದ್ದರಿಂದ ನಾವೆಲ್ಲರೂ ಕನ್ನಡ ಕಡ್ಡಾಯವಾಗಿ ಅಧ್ಯಯನ ಅತ್ಯವಶ್ಯ ಎಂದರು.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಧೀಕ್ಷಕಿ ಶಶಿಕಲಾ ನಾಯ್ಕೊಡಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ವಾತಾವರಣ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸರಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕನ್ನಡ ಭಾಷೆ ಬೆಳೆಸುವತ್ತ ಗಮನ ಹರಿಸೋಣ ಎಂದರು.
ಸಾಹಿತಿ ವೈ ಎಚ್ ಲಂಬು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿಜಯಪುರದಲ್ಲಿ ಕನ್ನಡ ವಾತಾವರಣ ಸೃಷ್ಟಿಸೋಣ. ಕನ್ನಡ ನಮ್ಮೆಲ್ಲರ ಹೆಮ್ಮೆಯ ಭಾಯಿಗಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ಕನ್ನಡ ಭಾಷೆಗೆ. ಇತ್ತಿಚಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಶ್ಲಾಘನೀಯ ಎಂದರು.
ಮಲ್ಲಿಕಾರ್ಜುನ ಕೆಳಗಡೆ. ಅಜು೯ನ ಶಿರೂರ. ರಾಜೇಶ್ವರಿ ಹಿಟ್ಟಿನಹಳ್ಳಿ. ಮಹೆತಾಬ ಕಾಗವಾಡ.ವೇದಿಕೆಯಲ್ಲಿದ್ದರು.ರೂಪಾ ರಜಪೂತ. ಆಶಾ ಬಿರಾದಾರ. ಭಾಗೀರಥಿ ಸಿಂದೆ ವಿಜಯಲಕ್ಷ್ಮಿ ಹಳಕಟ್ಟಿ. ಲಕ್ಷ್ಮಿ ಬಿರಾದಾರ. ಗಂಗಮ್ಮ ರಡ್ಡಿ. ಮಂಜುಳಾ ಕಾಳಗಿ. ಸುನಂದಾ ಕೋರಿ ಪ್ರಾಥ೯ಸಿದರುಮಮತಾ ಮುಳಸಾವಳಗಿ ಪ್ರಾಸ್ತಾವಿಕ ಮಾತನಾಡಿದರು. ಯಮನಪ್ಪ ಪವಾರ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
