Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನ್ಯಾಯಾಧೀಕರಣದ ತೀರ್ಪಿನ ಕುರಿತು ವಿಚಾರ ಸಂಕಿರಣದ ಕರಪತ್ರ ಬಿಡುಗಡೆ


ವಿಜಯಪುರ : ನ್ಯಾ|| ಬ್ರಿಜೇಶ್‌ಕುಮಾರ ನೇತೃತ್ವದ ೨ನೇ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ಲಾಲ್‌ಬಹದ್ಧೂರ ಶಾಸ್ತ್ರೀ ಜಲಾಶಯದ ನೀರಿನಮಟ್ಟವನ್ನು ೫೧೯.೬೦ರಿಂದ ೫೨೪.೨೬೦ಕ್ಕೆ ನೀರು ನಿಲ್ಲಿಸಲು ಗೇಟ್ ಅಳವಡಿಸುವಂತೆ ನ್ಯಾಯಾಧೀಕರಣ ತಿರ್ಪು ನೀಡಿದ್ದರೂ ಕೂಡಾ ಇಲ್ಲಿಯವರೆಗೂ ಸರ್ಕಾರಗಳು ಗೇಟ್ ಅಳವಡಿಸಲು ಆಗುತ್ತಿಲ್ಲ. ೧೩ನೇ ವರ್ಷಕ್ಕೆ ಪಾದಾರ್ಪನೆ ಮಾಡಿದ್ದರು ಕೇಂದ್ರ ಸರ್ಕಾರ ಇನ್ನು ಅಧಿಸೂಚನೆ ಹೊರಡಿಸಿಲ್ಲ. ವಿಜಯಪುರ ಜಿಲ್ಲೆ ಹೇಳಿಕೊಳ್ಳಲು ಪಂಚನದಿಗಳು ಬೀಡಾಗಿದೆ ಆದರೆ ವಾಸ್ತವವಾಗಿ ಇನ್ನು ಕೆಲವು ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ. ಕೃಷಿಗೆ ನೀರು ಬಿಡುವುದಂತು ದೂರದ ಮಾತು ಆದ್ದರಿಂದ ನಮ್ಮ ನೀರಿನ ಪಾಲನ್ನು ನಮಗೆ ಕೊಡಲು ಸರ್ಕಾರಕ್ಕೆ ಒತ್ತಾಯಿಸಲು ಹಾಗೂ ನೀರಿನ ಹಂಚಿಕೆಯಲ್ಲಿ ಅವಳಿ ಜಿಲ್ಲೆಯ ರೈತರಿಗೆ ಯಾವ ರೀತಿ ವಂಚನೆ ಮಾಡಿದ್ದಾರೆ ಎಂಬುದನ್ನು ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ದಿನಾಂಕ ೦೮-೦೬-೨೦೨೬ ರಂದು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಬೆಳ್ಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಕರಪತ್ರವನ್ನು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಅಖಂಡ ಕರ್ನಾಟಕ ರೈತ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ಬಿಡುಗಡೆಗೊಳಿಸಲಾಯಿತು. ದಿನಾಂಕ ೨೯ ರಿಂದ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಿಗೆ ರೈತರ ಬಳಿ ಹೋಗಿ ರೈತರನ್ನು ಜಾಗೃತಿಗೊಳಿಸಿ ವಿಚಾರ ಸಂಕಿರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಲು ಮನವಿ ಮಾಡಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ. 
ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ, ಮಹಾದೇವಪ್ಪ ತೇಲಿ, ಸಿದ್ಧನಗೌಡ ಪಾಟೀಲ, ಉಮೇಶ ವಾಲೀಕಾರ, ಜಿಲ್ಲಾ ಸಂಘಟನ ಕಾರ್ಯದರ್ಶಿ ಗುರುರಾಜ ಪಡಶೆಟ್ಟಿ ಹೊನಕೇರಪ್ಪ ತೆಲಗಿ, ಬಬಲೇಶ್ವರ ತಾಲೂಕಾ ಗೌರವ ಅಧ್ಯಕ್ಷ ಸಿದ್ದಪ್ಪ ಕೋಟ್ಯಾಳ, ಬಬಲೇಶ್ವರ ತಾಲೂಕಾ ತಾಲೂಕಾಧ್ಯಕ್ಷ ಗುರಣಗೌಡ ಬಿರಾದಾರ, ಪ್ರಭುಲಿಂಗ ಕಾರಜೋಳ, ಸಂತೋಷ ಚೌರಿ, ಒಗೆಪ್ಪ ಬಿರಾದಾರ, ಸೋಮಯ್ಯ ನಂದಿಕೋಲ, ಅಮೋಗಿ ಉಕ್ಕಲಿ, ಮಲ್ಲಿಕಾರ್ಜುನ ಬಟಗಿ, ಬೋಗೇಶ ಸೊಲಾಪೂರ, ನೀಲಮ್ಮ ಕಟ್ಟಿಮನಿ, ಲಂಕೆಪ್ಪ ತಳವಾರ, ನಬಿರಸೂಲ ಬಿರಾದಾರ, ಗುರಪ್ಪ ತಳವಾರ, ಅಜೀಜ ಪಾಟೀಲ ಮುಂತಾದ ನೂರಾರು ರೈತರು ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತ್ಯಾಗದ ಪ್ರತೀಕವೇ ಬಕ್ರೀದ್ಶಾಸಕರ ಬಗ್ಗೆ ಜಿತೇಂದ್ರ ಕಾಂಬಳೆ ಅವರು ನಾಲಿಗೆ ಹರಿ ಬಿಟ್ಟು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದು ಸರಿಯಲ್ಲ : ಪ್ರಶಾಂತ ಕಾಳೆಭೂತಾನ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಅರ್ಚನಾ ಅಥಣಿ ಭಾಗಿ"ನಿಶ್ಚಿತ ಗುರಿಯೊಂದಿಗೆ ಅಧ್ಯಯನ ಮಾಡಿದಲ್ಲಿ ಯಶಸ್ಸು ದೊರೆಯಲು ಸಾಧ್ಯವಿದೆ" ಗರ್ಭ ಕಂಠದ ಕ್ಯಾನ್ಸರ್ ತಡೆಯುವಲ್ಲಿ ಹೆಚ್.ಪಿ.ವಿ ಲಸಿಕೆ ಪೂರಕವಾಗಿದೆ : ಬೆವನೂರಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತಾ ಕ್ರಮವಾಗಿ ಎಲ್ಲ ಸಿದ್ದತೆ ಕೈಗೊಳ್ಳಿ : ಬಿರದಾರಮೇ ೩೧ರಂದು ತ್ರಿವೇಣಿ ಸಂಗಮದ ಭೃಹತ್ ಆರತಿ ಕಾರ್‍ಯಕ್ರಮ : ದತ್ತಾತ್ರೆಯ ಶಿಂತ್ರೆ ಪೋಷಕರೂ ತಮ್ಮ ಜವಾಬ್ದಾರಿ ಅರಿಯಬೇಕು: ಪ್ರೀತಿ ಕಾಮಕರವಿವಿಧ ಫಲಾನುಭವಿಗಳಿಗೆ ಸಲಕರಣೆಗಳ ವಿತರಣೆ ಶರಣ ಸಂಸ್ಕೃತಿಯಿಂದ ಮಾತ್ರ ಜಗದೋದ್ಧಾರ : ಪ್ರೊ.ಎಸ್.ಎಂ. ಶೇಖ ಅಭಿಮತ