ಹೆಣ್ಣು ಮಕ್ಕಳಿಗೆ ನೀಡುವ ಶಿಕ್ಷಣ, ಸಮುದಾಯದ ಅಭಿವೃದ್ಧಿ ಅಡಿಪಾಯ: ಆರ್ ಬಿ ತಿಮ್ಮಾಪುರ
ರನ್ನ ಬೆಳಗಲಿ: ಜೂ.೨೫., ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗೆ ಮಂಗಳವಾರ ದಂದು ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿನಿಯರ ಶೌಚಾಲಯದ ಉದ್ಘಾಟನೆ ಕಾರ್ಯಕ್ರಮ ಜರಗಿತು.
ಆರ್ ಬಿ ತಿಮ್ಮಾಪುರ ಅಬಕಾರಿ ಸಚಿವರು, ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ವಿಧಾನಸೌಧ ಬೆಂಗಳೂರು ಮಾನ್ಯರು ಉದ್ಘಾಟಿಸಿ ಹೆಣ್ಣು ಮಕ್ಕಳಿಗೆ ನೀಡುವ ಶಿಕ್ಷಣ, ಸಮುದಾಯದ ಅಭಿವೃದ್ಧಿ ಅಡಿಪಾಯ ವಾಗುತ್ತದೆ ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕೂಡ ಕಡಿಮೆ ಇಲ್ಲಾ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಶ್ರಮಿಸುತ್ತಿದೆ ಎಂದು ತಿಳಿಸಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ. ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅಭಿನಂದಿಸಿ,ಶಾಲೆಗೆ ಬೇಕಾಗಿರುವ ಮೂಲಭೂತ ಅವಶ್ಯಕತೆಗಳನ್ನು ಉನ್ನತಿಕರಣ ಮಾಡುವುದಾಗಿ ತಿಳಿಸಿ,ದಾಖಲಾತಿ ಹೆಚ್ಚಳಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ಸಲಹೆಗಳನ್ನು ನೀಡಿದರು.
ಹಿರಿಯ ನ್ಯಾಯವಾದಿಗಳಾದ ಅಶೋಕ ಕಿವಡಿ,ತಾಲೂಕ ಪಂಚಾಯತ ಕಾರ್ಯ ನಿರ್ವಣಾಧಿಕಾರಿ ಉಮೇಶ ಸಿದ್ನಾಳ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮೋಹನ ಕೋರಡ್ಡಿ,ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮಹೇಶ ದಂಡನ್ನವರ, ಪ. ಪಂ ಸದಸ್ಯರಾದ ಪ್ರವೀಣ ಪಾಟೀಲ,ಮುಬಾರಕ ಅತ್ತಾರ, ನೀಲಕಂಠ ಸೈದಾಪುರ ಪ.ಪಂ ಮುಖ್ಯಾಧಿಕಾರಿ ಎನ್ ಎ ಲಮಾಣಿ,ಮುಖ್ಯೋಪಾಧ್ಯಯನಿ ಎಸ್ ಎಲ್ ಕಠಾರೆ,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಯಮನಪ್ಪ ಆಲಗೂರ, ಉಪಾಧ್ಯಕ್ಷೆ ಪ್ರೇಮಾ ಲೋಹಾರ, ಸದಸ್ಯರಾದ ಶ್ರೀಶೈಲ ಬಬಲಾದಿ, ಸದಾಶಿವ ಹಳ್ಳೂರ, ಸದಾಶಿವ ಗುಲಗಂಜಿಕೋಪ,ರಾಜೇಶ್ವರಿ ಪುರಾಣಿಕ, ಲಕ್ಷ್ಮೀ ನಾವಿ, ಭಾರತಿ ಗುರಕಿ,ಪವಿತ್ರಾ ಜೀರಗಾಳ ಶಿಕ್ಷಕರಾದ ಎಸ ಎಚ್ ಮಾದರ,ಎಸ್ ಪಿ ಜೋಶಿ,ಆರ್ ಡಿ ಬಂಡಿ, ಎಚ್ ಬಿ ಜಮಾದಾರ,ರೂಪಾ ದಂಡಿನ, ಯೋಗ ಶಿಕ್ಷಕ ರಾಘವೇಂದ್ರ ನೀಲನ್ನವರ ಮುಖಂಡರಾದ ಸಂಗಪ್ಪ ಅಮಾತಿ, ಮುದಕಪ್ಪ ದೋಬಸಿ, ಯಮನಪ್ಪ ದೊಡಮನಿ, ಚನ್ನಪ್ಪ ಜಾಲಿಕಟ್ಟಿ, ಸಿದ್ಧು ಮಾಳಿ, ಪ್ರಕಾಶ ಕೊಣ್ಣೂರ, ಗುರು ಗೂಳೆದ, ಮಲ್ಲಪ್ಪ ಹೊಸಪೇಟೆ, ಸದಾಶಿವ ಕುಲಗೋಡ, ಲಕ್ಕಪ್ಪ ಹಂಚಿನಾಳ,ಮಹಾದೇವ ಹಾದಿಮನಿ, ಮಾರುತಿ ಜಾಲಿಕಟ್ಟಿ ಇನ್ನಿತರರು ಉಪಸ್ಥಿತರಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.