Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆ ಬೈಲಹೊಂಗಲದಲ್ಲಿ ಲಾಠಿ ಚಾರ್ಜ್ ಖಂಡಿಸಿ ರಸ್ತಾ ರೋಖೊ ನಿರ್ಧಾರ.

 

ಬೈಲಹೊಂಗಲ: ಪಂಚಮಸಾಲಿಗಳ ಮೇಲೆ ಮಂಗಳವಾರ ಸುವರ್ಣವಿದಾನಸೌಧದ ಮುಂದೆ ನಡೆದ ಲಾಟಿ ಚಾರ್ಜ್ ಖಂಡಿಸಿ ಮತ್ತು ಇದಕ್ಕೆ ಕಾರಣವಾದ ಸರ್ಕಾರಿ ಅಧಿಕಾರಿಗಳ ಅಮಾನತ ಮಾಡುವದು ಹಾಗೂ ಪ್ರತಿಭಟಣಾಕಾರರ ಮೇಲೆ ದೌರ್ಜನ್ಯ ಎಸಗಿದ ಮುಖ್ಯಮಂತ್ರಿಗಳು ಪಂಚಮಸಾಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕ್ಷಮಾಪನೆ ಕೇಳಬೇಕೆಂದು ಆಗ್ರಹಿಸಿ ಗುರುವಾರ ಬೆಳಿಗ್ಗೆ 10ಘಂಟೆಯಿಂದ‌ ರಸ್ತಾ ರೊಖ ನಡೆಸಲು ಬೈಲಹೊಂಗಲ ಪಂಚಮಸಾಲಿ ಘಟಕ‌ ನಿರ್ಣಯಿಸಿದರು.

ಪಟ್ಟಣದ ಸೋ.ಸ.ಖಾ. ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಾಜದ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ ಮಾತನಾಡಿ, ಸಮಾಜದ ಜನರು ನ್ಯಾಯ ಕೇಳಲು ಹೊದವರ ಮೇಲೆ ಲಾಟಿ ಚಾರ್ಜ್ ನಡೆಸಿ ಲಿಂಗಾಯತ ಪಂಚಮಸಾಲಿ ಸಮಾಜದ ಅಸ್ಮಿತತೆಗೆ ದಕ್ಕೆ ತಂದಿರುವ ಸಿದ್ದರಾಮಯ್ಯನವರ ಸರ್ಕಾರದ ನಡೆ ಖಂಡನೀಯ ಎಂದರು.

ನ್ಯಾಯವಾದಿ ಎಫ್‌ಎಸ್.ಸಿದ್ದನಗೌಡರ, ಮಾಜಿ ಜಿಪಂ ಸದಸ್ಯ ಶಂಕರ ಮಾಡಲಗಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಅಧಿಕಾರಿಗಳನ್ನು ಛೂ ಬಿಟ್ಟು ಹೋರಾಟ ಹತ್ತಿಕ್ಕುವ ಕಾಂಗ್ರೆಸ್ ಸರ್ಕಾರದ ನಡೆಗೆ ಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಲು ಸಮಾಜ ಸಿದ್ದವಿದೆ. ಶಾಂತಿಯುತ ಸಮಾಜದ ಮೇಲೆ‌ ಪೋಲಿಸ್ ದೌರ್ಜನ್ಯ ನಡಿಸಿದ ನಿಮ್ಮ ನಡೆಗೆ ಜನರೆ ಉತ್ತರಿಸುತ್ತಾರೆ. ಕೇವಲ ರಸ್ತಾ ರೊಖ ಮಾಡಿ ಬೀಡುವದಿಲ್ಲ. ಸಮಾಜದ ಗುರುಗಳ ಕ್ಷಮಾಪಣೆ ಕೇಳಿ ಘಟನಗೆ ಕಾರಣರಾದ ಅಧಿಕಾರಿಗಳನ್ನ ಅಮಾನತು ಮಾಡದೆ ಹೊದರೆ ಮುಂಬರುವ ದಿನಗಳಲ್ಲಿ ಇನ್ನು ಉಗ್ರ ಹೊರಾಟ ಮಾಡಲಾಗುವದೆಂದರು.

ಚನ್ನಮ್ಮ‌ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಗೂಂಡ್ಲೂರ,

ಸಮಾಜದ ಪ್ರದಾನ ಕಾರ್ಯದರ್ಶಿಗಳಾದ ಮಹೇಶ ಹರಕುಣಿ ಮಾತನಾಡಿ, ಗುರುವಾರ ನಡೆಯುವ ಪ್ರತಿಭಟಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೈಲಹೊಂಗಲ ನಾಡಿನ ನಾಗರಿಕರು ಪಾಲ್ಗೊಂಡು ಪ್ರತಿಭಟಣೆಯನ್ನು ಯಶಸ್ವಿಯಾಗಿಸೊಣ ಸರದಕಾರದ ಅನ್ಯಾಯವನ್ನು ಖಂಡಿಸೋಣ ಎಂದರು.

ನ್ಯಾಯವಾದಿಗಳಾದ ಎಮ್.ವಾಯ್.ಸೋಮಣ್ಣವರ, ಎಮ್.ವಿ.ಮತ್ತಿಕೊಪ್ಪ, ಚಂದ್ರು ವಣ್ಣುರ, ಸಮಾಜದ ಮುಖಂಡರಾದ ಮಹಾಂತೇಶ ತುರಮರಿ, ಬು.ಬಿ.ಸಂಗನಗೌಡರ, ಶಿವಾನಂದ ಬೆಳಗಾವಿ, ಶಿವಾನಂದ ಬಡ್ಡಿಮನಿ, ಬಾಳನಗೌಡ ಪಾಟೀಲ, ಮಹೇಶ ಕೊಟಗಿ, ಶ್ರೀಶೈಲ ಶರಣಪ್ಪನವರ, ಸಂತೋಷ ಕೊಳವಿ, ಚಂದನ ಕೌಜಲಗಿ, ಮಡಿವಾಳಪ್ಪ ಚಿಕ್ಕೊಪ್ಪ ಸೇರಿದಂತೆ ಇತರರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ