Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವ ರಂಗಭೂಮಿ ದಿನಾಚರಣೆ ನೇತ್ರ ಕಲಾ ಸಂಘದಿಂದ "ರಂಗ ಪುರಸ್ಕಾರ"


ಬಳ್ಳಾರಿ.ಮಾ 30.. :  ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನೇತ್ರ ಕಲಾ ಸಂಘದಿಂದ  ನಿನ್ನೆ ಸಂಜೆ ನಗರದ ಕನ್ನಡ ಭವನದಲ್ಲಿ  ರಂಗ ಪುರಸ್ಕಾರ ಸಮಾರಂಭ ಜರುಗಿತು. ಮಯೂರ ಕಲಾ ಸಂಘದ ಕಲಾವಿದ ಬಸವರಾಜ್ ಜೋಳದರಾಶಿ, ಪ್ರಸಾದನದ  ಜೀರ್ ಹಾಲೇಶಪ್ಪ,  ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮ ಅವರಿಗೆ ರಂಗ ಪುರಸ್ಕಾರ ನೀಡಿ ಗೌರವಿಸಲಾಯ್ತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ರಂಗ ಕಲಾವಿದೆ ಡಾ.ಎ ವರಲಕ್ಷ್ಮಿ ಅವರು ನಾಡಿನ‌ ಸಾಂಸ್ಕೃತಿಕ‌ ಕಲೆಗಳನ್ನು ಉಳಿಸಿ‌ ಬೆಳಸಬೇಕಿದೆಂದರು. ರಂಗ ಕಲಾವಿದೆ ವೀಣಾ ಆದೋನಿ‌ ಅವರು, ಮುಖಕ್ಕೆ ಬಣ್ಣ ಹಚ್ಚುವವರಿಗೆಲ್ಲ ರಂಗ ಭೂಮಿ‌ ದಿನಾಚರಣೆ ಸಂಭ್ರಮದ ದಿನ‌ ಎಂದು ರಕ್ತರಾತ್ರಿಯ ನಾಟಕದ ಭಾನುಮತಿ ಪಾತ್ರದ ಸಂಭಾಷಣೆ ಹೇಳಿ, ರಂಗಗೀತೆ ಹಾಡಿ ನೆರೆದವರ ಗಮನ ಸೆಳೆದರು.

ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಇವರು ಮಾತನಾಡಿ,  ನೇತ್ರ ಕಲಾ ಸಂಘ ಕಳೆದ 15 ವರ್ಷಗಳಿಂದ ರಂಗ ಸೇವೆ ಮಾಡುತ್ತಾ ಬಂದಿರುವುದನ್ನು ಸ್ಮರಿಸಿದರು.

ನಿವೃತ್ತ ಶಿಕ್ಷಕ, ಕಲಾವಿದ ಕೆ.ಎಂ. ಸಿದ್ದಲಿಂಗಯ್ಯಸ್ವಾಮಿ ಅಧ್ಯಕ್ಷತೆವಹಿಸಿ,  ಮಕ್ಕಳಿರುವಾಗಲೇ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಲು ಪೋಷಕರು ಮುಂದಾಗಬೇಕೆಂದರು.

ಬಯಲಾಟಕಲೆಯ ನೆಲೆಯ ಬಗ್ಗೆ  ಉಪನ್ಯಾಸ ನೀಡಿದ ಹೆಚ್.ತಿಪ್ಪೇಸ್ವಾಮಿ ಮುದ್ದಟನೂರು,  ರಾಜ್ಯದ  23 ಜಿಲ್ಲೆಗಳಲ್ಲಿ ಬಯಲಾಟ ಕಲಿಕೆ, ಪ್ರದರ್ಶನ ಇದೆ. ಆದರೆ ಕೇವಲ ನಾಲ್ಕು ಜಿಲ್ಲೆಗಳಲ್ಲಿನ ಯಕ್ಷಗಾನ ವಿಶ್ವ ಮಟ್ಟಕ್ಕೆ ಬೆಳೆಯಲು ಅದಕ್ಕೆ ಅವುಗಳ ವೀಕ್ಷಕರು ನೀಡಿದ ಪ್ರೋತ್ಸಾಹ ಮುಖ್ಯವಾಯಿತು. ಅದರಂತೆ ಬಯಲಾಟಕ್ಕೂ ಹೆಚ್ಚಿನ ಪ್ರೋತ್ಸಾಹದ ಅಗತ್ಯತೆ ಬಗ್ಗೆ ತಿಳಿಸಿ. ಬಯಲಾಟದಲ್ಲಿನ ಶಬ್ದಗಳು ಸಿಂಹಧ್ವನಿ ಇದ್ದಂತೆ. ಅನಕ್ಷರಸ್ಥರೂ ಹೇಳಿದರೂ ಅವುಗಳಲ್ಲಿನ ಗಾಂಭೀರ್ಯತೆ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ವಿವಾಹ ಮೊದಲಾದ ಸಮಾರಂಭಗಳಲ್ಲಿ ಆರ್ಕೆಸ್ಟ್ರ ಬದಲಾಗಿ ಬಯಲಾಟ ಪ್ರದರ್ಶನ ಹಮ್ಮಿಕೊಳ್ಳುವಂತಾಗಬೇಕು. ಬಯಲಾಟದಲ್ಲಿ ಇಂದಿಗೂ ಆಂಗ್ಲ ಪದದ ಬಳಕೆ ಆಗಿಲ್ಲ.  ವಿವಿಧ ಕ್ಷೇತ್ರದ ಉದ್ಯೋಗಿಗಳು ಇದನ್ನು ಕಲಿತು ಪ್ರದರ್ಶನ ನೀಡುವ ಕೆಲಸ ಆಗಬೇಕು. ಬಯಲಾಟದ ರಂಗಗೀತೆಗಳ ಸಂಗ್ರಹ ಕಾರ್ಯ ಆಗಬೇಕಿದೆಂದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ