Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿ ಮಂಡಲದಿಂದ ಎಸ್ ಆಯ್ ಆರ್ ಕುರಿತು ಜನಜಾಗೃತಿ ಅಭಿಯಾನ


ಯರಗಟ್ಟಿ,ಜೂ,೧೫ : ಭಾರತೀಯ ಚುನಾವಣಾ ಆಯೋಗದ (ಇಸಿಆಯ್) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಆಯ್.ಆರ್) ಪ್ರಕ್ರಿಯೆಯ ಬಗ್ಗೆ ಭಾರತೀಯ ಜನತಾ ಪಕ್ಷವು ತನ್ನ ಮಂಡಲ ಮತ್ತು ಬೂತ್ ಮಟ್ಟದ ಘಟಕಗಳ ಮೂಲಕ ವ್ಯಾಪಕ ಜನಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.
ಸವದತ್ತಿ ಬಿಜೆಪಿ ಮಂಡಲಗಳಿಂದ ತಾಲೂಕಿನ ರೈನಾಪೂರ, ಕೊರಕೋಪ್ಪ, ಸೊಪ್ಪಡ್ಲ ಗ್ರಾಮದಲ್ಲಿ ಕೈಗೊಳ್ಳಲಾಗುವ ಜಾಗೃತಿ ಕಾರ್ಯಕ್ರಮಗಳ ಕೈಗೊಂಡಿದೆ ಎಂದು ಜಿಲ್ಲಾ ಕಾರ್ಯದರ್ಶಿ ಹಾಗೂ ಸವದತ್ತಿ ತಾಲೂಕಿನ ಎಸ್.ಆಯ್.ಆರ್. ಉಸ್ತುವಾರಿ ಮಂಜುನಾಥ ಪಮ್ಮಾರ ಹೇಳಿದರು.
ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಬೂತ್ ಮಟ್ಟದ ಜಾಗೃತಿ (ಬಿ.ಎಲ್.ಎ) ಬೂತ್ ಮಟ್ಟದ ಏಜೆಂಟರಿಗೆ ತರಬೇತಿ ನೀಡಿ, ಅವರು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಅರ್ಹರ ಹೆಸರು ಸೇರ್ಪಡೆ ಮಾಡಲು ಮತ್ತು ಅನರ್ಹರ ಹೆಸರುಗಳನ್ನು ತೆಗೆದುಹಾಕಲು ಜಾಗೃತಿ ಮೂಡಿಸಲಾಗುತ್ತದೆ. ಅಕ್ರಮ ಮತದಾರರ ಪರಿಶೀಲನೆ  ಮತ್ತು ಅಕ್ರಮ ವಿದೇಶಿಯರು ಅಥವಾ ನಕಲಿ ಮತದಾರರು ಪಟ್ಟಿಗೆ ಸೇರ್ಪಡೆಯಾಗುವುದನ್ನು ತಡೆಗಟ್ಟಿ, ಸ್ವಚ್ಛ ಮತದಾರರ ಪಟ್ಟಿಯನ್ನು ಹೊಂದುವುದರ ಮಹತ್ವವನ್ನು ಜನರಿಗೆ ತಿಳಿಸಲಾಗುತ್ತಿದೆ ಎಂದು ಗ್ರಾಮಸ್ಥರಿಗೆ ಹೇಳಿದರು.
ವಿರೋಧ ಪಕ್ಷಗಳು ಎಸ್.ಐ.ಆರ್ ಪ್ರಕ್ರಿಯೆಯ ಬಗ್ಗೆ ಸೃಷ್ಟಿಸುತ್ತಿರುವ ಗೊಂದಲ ಮತ್ತು ಸುಳ್ಳು ಮಾಹಿತಿಗಳಿಗೆ ವಾಸ್ತವಿಕ ಮಾಹಿತಿ ಹಾಗೂ ಅಂಕಿ-ಅಂಶಗಳ ಮೂಲಕ ಜನರಿಗೆ ಸ್ಪಷ್ಟನೆ ನೀಡಲಾಗಿದೆ ಎಂದರು.
ಈ ವೇಳೆ ಬಿಎಲ್‌ಓ ಈರಣ್ಣಾ ಚಂದರಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ನರಿ, ಮಾಜಿ ಗ್ರಾ. ಪಂ. ಅಧ್ಯಕ್ಷ ಗೌಡಪ್ಪ ಸವದತ್ತಿ, ಮಾಜಿ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ ದೇವರಡ್ಡಿ, ಮಾಜಿ ಎಪಿಎಂಸಿ ಅಧ್ಯಕ್ಷ ಬಸಯ್ಯ ಹಿರೇಮಠ, ಯರಗಟ್ಟಿ ಮಹಾಶಕ್ತಿ ಅಧ್ಯಕ್ಷ ಚೇತನ ಜಕಾತಿ, ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ತೊರಗಲ್ಲ, ಮಲ್ಲೇಶ್ವರ ಸುಳೇಬಾವಿ, ಈರಣ್ಣಾ ವೀರಶೆಟ್ಟಿ, ಮಹಾದೇವ ಮುರಗೋಡ, ಆನಂದ ಬಾಗೋಡಿ, ಗ್ರಾಪಂ ಮಾಜಿ ಸದಸ್ಯ ನಂದಗೋಪಾಲ ಕಡೆಮನಿ, ಸದಾನಂದ ಪಾಟೀಲ, ಮಹಾದೇವ ಯಡ್ರಾಂವಿ, ಭೀಮರಡ್ಡಿ ಸಿದ್ನಾಳ, ಮಲ್ಲಪ್ಪ ಹೂಗಾರ, ಮಂಜುನಾಥ ನೀಲಪ್ಪನವರ, ವಿಠ್ಠಲ ಬಂಟನೂರ, ಭೀಮಶಿ ಕಳ್ಳಿಗುದ್ದಿ, ಗಂಗಪ್ಪ ಶಿದ್ನಾಳ, ಲಕ್ಷ್ಮಣ ಬಾಗೋಡಿ, ಆರ್. ಆರ್. ಗಂಗರಡ್ಡಿ, ಪುಂಡಲೀಕ ಪೂಜೇರ, ಮೈತ್ರಾ ಹೊಂಗಲ, ಜಯಶ್ರೀ ಗಾಣಗಿ, ಯಶೋಧಾ ಕಾಶಪ್ಪನ್ನವರ, ಸಕ್ಕುಬಾಯಿ ಕುಂಬಾರ, ಚುಳಕಿ, ಮಹಾಂತೇಶ ಅಡಕಿ, ಶ್ರೀನಿವಾಸ ಕಡೇಮನಿ, ಬಸವರಾಜ ತೋರಣಗಟ್ಟಿ, ಉಮೇಶ ದಾಸರ, ವೆಂಕಣ್ಣ ಹುರಕನವರ ಮುತಾಂದ ಗಣ್ಯರು ಯುವಕರು ಇದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ