ಬಳ್ಳಾರಿ,ಮೇ.16:.: ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ವಿ ಬಿ ಜಿ ರಾಮ್ ಜಿ ಕಾಯ್ದೆ ರದ್ದತಿಗಾಗಿ ಮತ್ತು ಮನರೆಗಾ ಯೋಜನೆ ಮರು ಜಾರಿಗಾಗಿ ಆಗ್ರಹಿಸಿ ನಗರದ ತಾಲ್ಲೂಕು ಪಂಚಾಯಿತಿ ಬಳಿ ಪ್ರತಿಭಟನೆ ಮಾಡಿ, ಪ್ರಧಾನಿಗಳಿಗೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ವಿ ಬಿ ಜಿ ರಾಮ್ ಜಿ ಕಾಯ್ದೆಯು ಸಂಪೂರ್ಣವಾಗಿ ಬಡ ಕೂಲಿ ಕಾರ್ಮಿಕರಿಂದ ಉದ್ಯೋಗ ಕಸೆಯುವ ಕಾಯ್ದೆಯಾಗಿದೆ, ಕೆಲಸ ನೀಡುವಲ್ಲಿ ಮೊದಲು ಗ್ರಾಮ ಪಂಚಾಯಿತಿಗಳಿಗೆ ಇದ್ದ ಅಧಿಕಾರವನ್ನು ರದ್ದು ಮಾಡಲಾಗಿದೆ, ಇನ್ನೂ ಮುಂದೆ ಈ ಕಾರ್ಯದಲ್ಲಿ ಗುತ್ತಿಗೆದಾರರ ಪ್ರವೇಶ ಮಾಡಲು ಯೋಜನೆ ರೂಪಿಸಲಾಗಿದ್ದು, ಇದೊಂದು ದೊಡ್ಡ ಷಡ್ಯಂತ್ರ ವಾಗಿದೆ.
ಹಾಗೆಯೇ, ರಾಜ್ಯ ಸರ್ಕಾರ ಬರೀ ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕದೆ, ತಾವುಗಳು ಸಹ ರಾಜ್ಯದ ಜನರಿಗೆ ಉದ್ಯೋಗ ಒದಗಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಜಿಲ್ಲಾ ಸಮಿತಿ ಸದಸ್ಯರಾದ ಕಾಸಿಂ ಸಾಬ್, ಹೋನ್ನೂರಪ್ಪ, ಸದಸ್ಯರಾದ ಗೋಪಾಲ ಗೌಡ, ಸ್ವಾಮಿ, ದಸ್ತಗಿರಿ ಸಾಬ್, ಸಿದ್ದಪ್ಪ, ಕೆಂಚಮಾಳಪ್ಪ, ಮರಿನಾಗ ಸೇರಿದಂತೆ ಇತರರು ಉಪಸ್ಥಿತರಿದ್ದರು.
