Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ತಡೆಗೆ ಅಗ್ರಹಿಸಿ ಪ್ರತಿಭಟನೆ

ಘಟಪ್ರಭಾ: ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ತಡೆಗಾಗಿ ಇಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಘಟಪ್ರಭಾ ಮೃತ್ಯುಂಜಯ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.
ಪ್ರತಿಭಟನೆ ನಿರತರನ್ನು ಉದ್ದೇಶಿಸಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸತ್ತೇಪ್ಪ ಮಲ್ಲಾಪೂರೆ ಮಾತನಾಡಿ ಇಂದು ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ಪ್ರತಿಯೊಂದ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಅಧಿಕಾರಿಗಳು ನೋಡಿಯು ನೋಡದಂತೆ ಕುಳಿತ್ತಿದ್ದಾರೆ ಇಂದು ಅಪ್ರಾಪ್ತ ಯುವಕರು ಕುಡಿತದ ಚಟಕ್ಕೆ ಬಿದ್ದು ಜೀವ ಕಳೆದು ಕೊಳ್ಳುತ್ತಿದ್ದರೆ ಮಹಿಳೆಯರು ಮನೆ ನಡೆಸಿಕೊಂಡು ಹೋಗುವ ಪರಿಸ್ಥಿತಿ ಕಠಿಣವಾಗಿದೆ ಇನ್ನು ಮೂರು ದಿನಗಳಲ್ಲಿ ಸಂಪೂರ್ಣ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸದಿದ್ದರೆ ಅಬಕಾರಿ ಅಧಿಕಾರಿಗಳನ್ನು ರೈತರು ಕಟ್ಟಿ ಹಾಕುತ್ತೇವೆ ಎಂದು ಎಚ್ಚರಿಸಿದರು. ಈ ಎರಡು ತಾಲ್ಲೂಕಿನಲ್ಲಿ ಬೆಳಿಗ್ಗೆ ೫ ಗಂಟೆಯಿಂದ ಮದ್ಯರಾತ್ರಿ ೨ ಗಂಟೆ ತನಕ ಮದ್ಯ ಮಾರಾಟ ಮಾಡಲಾಗುತ್ತಿz. ಕಾಲ ಮಿತಿಯನ್ನು ಪಾಲಿಸುತ್ತಿಲ್ಲ ಸರಕಾರ ಅಬಕಾರಿ ಇಲಾಖೆಯಿಂದ ಹೆಚ್ಚಿನ ಲಾಭ ಬರುತ್ತಿದೆ ಎನ್ನುವ ಕಾರಣಕ್ಕೆ ಮಾರಾಟಗಾರರಿಗೆ ಯಾವುದೆ ಕಡಿವಾಣ ಹಾಕುತ್ತಿಲ್ಲವೆಂದು ಹೇಳಿದರು.
ಅಬಕಾರಿ ಅಧಿಕಾರಿಗೆ ತರಾಟೆ:- ಅಬಕಾರಿ ಇನ್ಸ್‌ಪೆಕ್ಟರನ್ನು ತಮ್ಮ ಮುಂದೆ ನಿಲ್ಲಿಸಿಕೊಂಡು ರೈತರು ತರಾಟೆ ತೆಗೆದುಕೊಂಡರು ನಿಮಗೆ ಅಕ್ರಮ ಮದ್ಯ ಮರಾಟಗಾರರು ನೀಡುವ ಲಂಚದಿಂದ ಜೀವನ ನಡೆಸುತ್ತಿದ್ದಿರಿ ನಿಮಗೆ ಜೀವನ ನಡೆಸಲು ಸಂಬಳ ಸಾಕಾಗದಿದ್ದರೆ ನಾವು ರೈತರೆಲ್ಲ ಸೇರಿ ಮನೆಯಿಂದ ದೇಣಿಗೆ ಸಂಗ್ರಹಿಸಿ ನೀಡುತ್ತೇವೆ ಆದರೆ ಅಕ್ರಮ ಮದ್ಯ ಮರಾಟ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಜವಾಬ್ದಾರನನ್ನಾಗಿ ಮಾಡುತ್ತೇವೆ, ರೈತ ಸಂಘವೆ ಮುಂದೆ ನಿಂತು ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ನಿಲ್ಲುತ್ತೇವೆ ಅವಾಗ ನಮ್ಮ ಮೇಲೆ ಕೇಸ್ ಹಾಕಿ ನಾವು ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಗೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗ್ರತಿ ವೇದಿಕೆ ಬೆಂಬಲ ನೀಡಿ ಜಿಲ್ಲಾಧ್ಯಕ್ಷರಾದ ನಾಗಲಿಂಗ ಪೋತದಾರ ಮಾತನಾಡಿ ರಾಜ್ಯದ್ಯಾಂತ ಮದ್ಯ ಮಾರಾಟ ನಿಷೇಧಕ್ಕೆ ಧರ್ಮಸ್ಥಳ ವಿರೇಂದ್ರ ಹೆಗ್ಗಡೆಯವರು ಪ್ರಯತ್ನಿಸುತ್ತಿದ್ದಾರೆ ಈಗಾಗಲೆ ಸುಮಾರು ಮೂರು ಸಾವಿರ ಹತ್ತಿರ ಮದ್ಯ ವ್ಯಸನ ಮುಕ್ತ ಶಿಬಿರಗಳನ್ನು ನಡೆಸಲಾಗಿದ್ಯೆಂದು ಹೇಳಿದರು.
ಕೊಟ;- ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಸುಮಾರು ೨೦೦ ಜನ ಅಕ್ರಮ ಮದ್ಯ ಮಾರಾಟಗಾರರು ಇದ್ದಾರೆ ಅವರು ಪ್ರತಿ ತಿಂಗಳು ಅಬಕಾರಿ ಇಲಾಖೆಗೆ ೨ರಿಂದ ೩ಲಕ್ಷ ಹಾಗೂ ಪೊಲೀಸ್ ಇಲಾಖೆಗೆ ೨-೩ ಲಕ್ಷ ಲಂಚ ನೀಡುತ್ತಿದ್ದಾರೆ ಅದೇ ಕಾರಣಕ್ಕೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ತಡೆಯುತ್ತಿಲ್ಲ ಸತ್ಯಾಪ್ಪ ಮಲ್ಲಾಪೂರೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ.
ರೈತ ಸುಮಾರು ೧ ಗಂಟೆ ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರು ವಾಹನ ಸವಾರರು, ಪರದಾಡಿದರು ಸ್ಥಳದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ ಇಲಾಖೆಯ ಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಾಂಡುರಂಗ ಬೀರನಗಡ್ಡಿ, ವಾಸು ಪಂಡ್ರೋಳಿ, ಕುಮಾರ ಮರ್ದಿ, ಗೋಪಾಲ ಕೊಂಕನೂರ, ಮಂಜುನಾಥ ಪೂಜೇರಿ, ಸಿದ್ಲಿಂಗಪ್ಪ ಪೂಜೇರಿ, ವೀರಣ್ಣಾ ಸಸಾಲಟ್ಟಿ, ರಾಯಪ್ಪ ಗೌಡಪ್ಪನವರ, ಮಾಯಪ್ಪ ಹೆಗಡ್ಡೆ, ರಮೇಶ ತಿಗಡಿ, ಬೀರಪ್ಪಾ ತೋಳಿನವರ, ಲಾಲಸಾಬ ಶಿವಾಪೂರ ಹಾಗೂ ನೂರಾರು ರೈತರು, ಸಾರ್ವಜನಿಕರು ಹಾಜರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ