Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಣ್ಣಿನ ಫಲವತ್ತತೆಯ ರಕ್ಷಣೆ ಪ್ರತಿಯೊಬ್ಬರ  ಕರ್ತವ್ಯವಾಗಿದೆ:ಡಾ. ಎನ್ ಆರ್ ಸಾಲೀಮಠ

 
ಘಟಪ್ರಭಾ.ಇಂದಿನ ದಿನಮಾನಗಳಲ್ಲಿ ನಶಿಸುತ್ತಿರುವ ಭೂಮಿಯ ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆಯ ರಕ್ಷಣೆ  ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತುಕ್ಕಾನಟ್ಟಿ  ಬರ್ಡ್ಸ್  ಕೆ ವಿ ಕೆ ಯ ಡಾಕ್ಟರ್ ಎನ್ ಆರ್ ಸಾಲೀಮಠ ಅವರು ಹೇಳಿದರು.
     ಅವರು ಸಾವಳಗಿ ನಂದಗಾಂವ (ಮುತ್ನಾಳ) ಗ್ರಾಮದಲ್ಲಿ ಜೈ ಜವಾನ್ ಜೈ ಕಿಸಾನ್ ಕೃಷಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಬಾಪುರ ಖನಗಾಂವ ದವರು  ಶ್ರೀ ಮಹಾಲಕ್ಷ್ಮಿ ಸಹಕಾರಿ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ  ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಮಾತನಾಡಿ ಯಾರಾದರೂ ನಮಗೆ ಸಣ್ಣ ಸಹಾಯ ಮಾಡಿದರೆ ನಾವು ಅವರಿಗೆ ಎಷ್ಟೋ ಬಾರಿ ಧನ್ಯವಾದಗಳನ್ನು ತಿಳಿಸುತ್ತೇವೆ ಜೀವನ ಪರ್ಯಂತ ನಮ್ಮನ್ನು ಸಂರಕ್ಷಣೆ ಮಾಡುವ ಭೂಮಿ ತಾಯಿಯ ಋಣ ಎಷ್ಟು ಮಾಡಿದರು ಕಡಿಮೆ  ಎಂದು ಹೇಳಿದರು.
  ಅಧ್ಯಕ್ಷತೆ  ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಈಶ್ವರ ಭಾಗೋಜಿಯವರು ಮಾತನಾಡಿ  ಕೃಷಿ ಗ್ರಾಮೀಣ ಅಭಿವೃದ್ಧಿ ಜೊತೆಗೆ ವಿಧವೆಯರು ಅಂಗವಿಕಲರ, ದೀನ ದುರ್ಬಲರ ಕಲ್ಯಾಣ ಕ್ಕಾಗಿ ಶೃಮವಹಿಸುತ್ತಿದೆ ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
      ಶಂಕರ ಕೋರೆ ವಿಜಯಕುಮಾರ್ ಮಗದುಮ್ ಮುಂತಾದವರು ಸಾವಯವ ಕೃಷಿ ಕುರಿತು ಮಾತನಾಡಿದರು.
ಅತಿಥಿಗಳಾಗಿ ನಂದಗಾಂವ ಮುತ್ನಾಳ ಗ್ರಾಮಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ಹರ್ಷಾ ಸುಣಗಾರ, ಹಿರಿಯರಾದ ಮಲ್ಲಪ್ಪಾ 
ಕಾಡಪ್ಪಾ ಮಗದುಮ,  ಕಾಡಗೌಡಾ ಗೌಡರ ( ಪಾಟೀಲ), ಮುಂತಾದವರು ಹಾಜರಿದ್ದರು. ನ್ಯಾಯವಾದಿಗಳಾದ ಕೀರ್ತಿ ವಿಜಯಕುಮಾರ್ ಮಗದುಮ್, ಕಾರ್ಯಕ್ರಮ ನಿರೂಪಿಸಿದರೆ,
ಕಾರ್ಯದರ್ಶಿ ಶ್ರೀಮತಿ ಮಾಧವಿ ಪಾಟೀಲ ವಂದನಾರ್ಪಣೆ ಸಲ್ಲಿಸಿದರು
ಶ್ರೀಮತಿ ಶೋಭಾ ಈಶ್ವರ ಭಾಗೋಜಿ ಶೋಭಾ ಹುರಕಡ್ಲಿ ಹಾಗೂ ಸಾವಳಗಿ ನಂದಗಾಂವ ಮುತ್ನಾಳ ಖಾನಾಪುರ ಶಿವಾಪುರ ಗ್ರಾಮಗಳ ನಾಗರೀಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
 ಔಟಿe ಚಿಣಣಚಿಛಿhmeಟಿಣ
  ?  Sಛಿಚಿಟಿಟಿeಜ bಥಿ ಉmಚಿiಟ

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯರಗಟ್ಟಿಕಂಟೋನ್ಮೆಂಟ್ ರೈಲ್ವೆ ಗೇಟ್ ಬಳಿ ನೆರಳಿನ ವ್ಯವಸ್ಥೆಗಾಗಿ ಸಾರ್ವಜನಿಕರ ಆಗ್ರಹವೀರಶೈವ ಲಿಂಗಾಯತ ಸಮಾಜದಿಂದ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಜಾಸ್ತಿಯಾಗಲಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ವೀರಶೈವ ಲಿಂಗಾಯತ ಸಮಾಜದಿಂದ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಜಾಸ್ತಿಯಾಗಲಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಕನ್ನಡ ಚಲನ ಚಿತ್ರರಂಗ ಶ್ರೀಮಂತ ಪರಂಪರೆ ಹೊಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಸ್,ಎಸ್,ಎಲ್,ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲಕ್ಷ್ಮಣ ಸವದಿ ಸನ್ಮಾನOnline Liquor Delivery ಮಣ್ಣಿನ ಫಲವತ್ತತೆಯ ರಕ್ಷಣೆ ಪ್ರತಿಯೊಬ್ಬರ  ಕರ್ತವ್ಯವಾಗಿದೆ:ಡಾ. ಎನ್ ಆರ್ ಸಾಲೀಮಠ ಅಕ್ಕಮಹಾದೇವಿ ಜಯಂತಿ ಉತ್ಸವ ವಿಜೃಂಭಣೆಯಿಂದ ಆಚರಣೆಧರ್ಮಚಕ್ರ ಆರಾಧನಾ ಮಹೋತ್ಸವಕ್ಕೆ ಚಾಲನೆ