Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ರೂ.೭.೩೦ ಕೊಟಿ ಲಾಭ 


ಮೂಡಲಗಿ : ಪಟ್ಟಣದ ಪ್ರತಿಷ್ಠಿತ ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ೨೦೨೫-೨೬ನೇ ಹಣಕಾಸಿನ ವರ್ಷದ ಕೊನೆಯಲ್ಲಿ ರೂ.೭.೩೦ ಕೊಟಿ ಲಾಭ ಗಳಿಸಿ ಪ್ರಗತಿ ಪಥದತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಪುಲಕೇಶ್ ಸೋನವಾಲ್ಕರ್ ತಿಳಿಸಿದರು. 
ಮಂಗಳವಾರದಂದು ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಂಘವು ರೂ.೬.೮೯ ಕೋಟಿ ಶೇರು ಬಂಡವಾಳ, ರೂ.೩೫ ಕೋಟಿ  ನಿಧಿಗಳು, ಸಾರ್ವಜನಿಕ ವಲಯದಿಂದ ರೂ.೪೭೬ ಕೋಟಿ ಠೇವುಗಳು, ರೂ.೧೫೯ ಕೋಟಿ ಗುಂತಾವಣಿಗಳನ್ನು ಹೊಂದಿದೆ. ವಿವಿಧ ತೆರನಾದ ರೂ.೨೬೭ ಕೋಟಿ ಸಾಲ ನೀಡಿದೆ, ರೂ.೫೪೩ ಕೋಟಿ ದುಡಿಯುವ ಬಂಡವಾಳ, ೧೭,೫೬೮ ಶೇರುದಾರನ್ನು ಹೊಂದಿ ರೂ.೧,೯೦೬ ಕೋಟಿ ವಾರ್ಷಿಕ ವಹಿವಾಟು ಮಾಡಿದೆ. ಪ್ರಸಕ್ತ ಸಂಘವು ೧೮ ಶಾಖೆಗಳನ್ನು ಹೊಂದಿದ್ದು ಶೀಘ್ರದಲ್ಲೇ ೭ ನೂತನ ಶಾಖೆಗಳು ಪ್ರಾರಂಭವಾಗಲಿವೆ ಎಂದರು. 
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸುಭಾಸ.ಆರ್.ಸೋನವಾಲಕರ, ನಿರ್ದೇಶಕರಾದ ರವೀಂದ್ರ.ಪಿ ಸೋನವಾಲಕರ, ಡಾ.ಶಂಕರ.ಎಸ್ ದಂಡಪ್ಪನವರ, ಅಶೋಕ.ಎಮ್. ಹೊಸೂರ, ರೇವಪ್ಪ ಕೆ. ಕುರಬಗಟ್ಟಿ, ಶಿವಬಸು ಎಮ್.ಬೂದಿಹಾಳ, ಶಾರದಾ ಬಿ. ಗುಲಗಾಜಂಬಗಿ, ವಿದ್ಯಾವತಿ ಆರ್ ಸೋನವಾಲಕರ, ಮಂಜುಳಾ.ಎಸ್. ಬಳಿಗಾರ, ಗಂಗವ್ವಾ.ಕೆ.ಸಣ್ಣಪ್ಪನವರ, ಹಣಮಂತ.ಎಸ್.ಸಣ್ಣಕ್ಕಿ, ಲೆಕ್ಕ ಪರಿಶೋಧಕ ಭೀಮಶಿ ಜರಳಿ, ಪ್ರಧಾನ ವ್ಯವಸ್ಥಾಪಕರಾದ ವೆಂಕಪ್ಪ.ಎಚ್. ಬಾಲರಡ್ಡಿ ಪ್ರಧಾನ ಕಛೇರಿ ಮ್ಯಾನೇಜರ ಮಹೇಶ.ಬಿ.ಮಾಲಗಾರ, ಮಾರಾಟಾಧಿಕಾರಿ ಹಣಮಂತ.ಎಸ್.ಕುಂಬಾರ ಉಪಸ್ಥಿತರಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST