Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಸ್ಥಿರ ಅಭಿವೃದ್ಧಿಗೆ ಯೋಜನೆಗಳನ್ನು ಅಸಮರ್ಪಕವಾಗಿ ರೂಪಿಸುವ ಅವಶ್ಯಕತೆ ಇದೆ: ಪ್ರೊ.ಎ.ಎಂ.ಖಾನ್

  ಧಾರವಾಡ: ಸುಸ್ಥಿರ ಅಭಿವೃದ್ಧಿಗೆ ಯೋಜನೆಗಳನ್ನು ಅಸಮರ್ಪಕವಾಗಿ ರೂಪಿಸುವ ಅವಶ್ಯಕತೆ ಇದೆ. ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಅಭಿಪ್ರಾಯಪಟ್ಟರು.


ಅವರು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್  ಅಡ್ಮಿನಿಸ್ಟ್ರೇಶನ್ ಲೋಕಲ್ ಬ್ರ್ಯಾಂಚ್ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಹಯೋಗದಲ್ಲಿ ವಿಭಾಗದ ಸಭಾಂಗಣದಲ್ಲಿ  'ಸಾರ್ವಜನಿಕ ಯೋಜನೆ ಮತ್ತು ಇತ್ತೀಚಿನ ಪ್ರವೃತ್ತಿಗಳು' ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


ಸರಕಾರ ಜಾರಿಗೆ ತಂದ ಸಾರ್ವಜನಿಕ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಬೇಕು. ಸುಸ್ಥಿರ ಅಭಿವೃದ್ಧಿಗೆ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಿವ ಅವಶ್ಯಕತೆ ಇದೆ. ಪ್ರತಿಯೊಂದು ಯೋಜನೆ ಜಾರಿಗೊಳಿಸಿವಾಗ ಪೂರ್ವ ಯೋಜಿತವಾಗಿ ಸಾಮಾಜಿಕ ಹಿತದ ಉದ್ದೇಶ ಹೊಂದಿರುತ್ತದೆ. ಪ್ರಸ್ತುತ ಯೋಜನೆಗಳು ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕ ಆಗಬೇಕಾಗಿದೆ ಎಂದ ಅವರು ದೇಶದ ಬಡತನ, ಸುಸ್ಥಿರ ಪರಿಸರ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಅವಶ್ಯಕತೆ ಇದೆ ಎಂದರು.


ನಿವೃತ್ತ ಕೆ.ಎ.ಎಸ್ ಅಧಿಕಾರಿ ಡಾ.ವಿಜಯಕುಮಾರ ತೋರಗಲ್ಲ ಮಾತನಾಡಿ  ಸರ್ಕಾರಗಳು ಪ್ರಸ್ತುತ ಸಮಸ್ಯೆಗಳನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಿ ದಿಘಾರ್ವಧಿ ಮತ್ತು ಅಲ್ಪಾವಧಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತದೆ. ಸಂವಿಧಾನದ ಆಶಯದ ಅನುಗುಣವಾಗಿ ಸಾರ್ವಜನಿಕ ಹಿತರಕ್ಷಣೆ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದ ಅವರು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮರ್ಪಕವಾದ ರೀತಿಯಲ್ಲಿ ಸರಕಾರಗಳು ಯೋಜನೆ ರೂಪಿಸುವ ಅವಶ್ಯಕತೆ ಇದೆ. ಪ್ರಸ್ತುತ ಕೇಂದ್ರ ಸರಕಾರವು ವಿಕಸಿತ ಭಾರತ  ದಿರ್ಘಾವಧಿ ಯೋಜನೆ ಜಾರಿಗೆ ತಂದಿದೆ ಎಂದರು.


ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನಮಟ್ಟ ಒದಗಿಸಲು ಸಾರ್ವಜನಿಕ ಯೋಜನೆಗಳು ಸಹಕಾರ ಆಗಲಿವೆ ಎಂದ ಅವರು ದೇಶದ ಅಭಿವೃದ್ಧಿಗೆ ಯೋಜನಾಬದ್ಧ ಯೋಜನೆಗಳು ಹೆಚ್ಚು ಪೂರಕವಾಗಿವೆ‌.  ಇಂದು ಖಾಸಗಿ ರಂಗ  ಯೋಜನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿದೇಶಿ ನೇರ ಬಂಡವಾಳ ಸಮರ್ಪಕವಾದ ಯೋಜನೆಗಳು ಕಾರ್ಯರೂಪಕ್ಕೆ ತರಲು ಹೆಚ್ಚು ಪೂರಕವಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಿಂದ ದೇಶಿ ತಯಾರಿಕಾ ವಲಯಕ್ಕೆ ಪುನಶ್ಚೇತನ ನೀಡಿದೆ ಎಂದರು. ಪ್ರಸ್ತುತ ಡಿಜಿಟಲ್ ಇಂಡಿಯಾ ಯೋಜನೆ ಇಂದು ತಂತ್ರಜ್ಞಾನ ಆಡಳಿತ ಪರಿಣಾಮಕಾರಿಯಾಗಿದೆ ಇದೆ ಎಂದರು.


ಪ್ರಸ್ತುತ ನೀತಿ ಆಯೋಗವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಿದೆ ಎಂದರು. ತಂತ್ರಜ್ಞಾನ ಸಾರ್ವಜನಿಕ ಜೀವನದಲ್ಲಿ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸಾರ್ವಜನಿಕ ಯೋಜನೆ ರೂಪಿಸುವಲ್ಲಿ ಕೌಶಲ್ಯ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುವ ಅವಶ್ಯಕತೆ ಇದೆ ಎಂದರು. ಪ್ರಸ್ತುತ ಶೇಕಡಾ 54% ರಷ್ಟು ‌ಕೌಶಲ್ಯ ಹೊಂದಿರುವ ಜನರಿಗೆ ಅವಕಾಶಗಳನ್ನು ಪಡೆದಿದ್ದಾರೆ ಎಂದರು.


ಪ್ರಸ್ತುತ ಹಸಿವು, ಬಡತನ,ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳು ಸ್ವಲ್ಪ ಮಟ್ಟಿಗೆ ಮಾತ್ರ ಏರಿಕೆಯಾಗಿದ್ದು, ಭವಿಷ್ಯದಲ್ಲಿ ಹಸಿವನ್ನು ನೀಗಿಸಲು, ಬಡತನ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆ ಇದೆ ಎಂದ ಅವರು ಅಭಿವೃದ್ಧಿ ಜೊತೆಗೆ ಪರಿಸರ ಸುಸ್ಥಿರ ಅಭಿವೃದ್ಧಿಗೆ ಮಹತ್ವ ನೀಡುವ ಅವಶ್ಯಕತೆ ಇದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಡಾ.ಬಿ.ಎಚ್.ನಾಗೂರ, ಮಾತನಾಡಿ... ಸ್ವತಂತ್ರ ನಂತರ ಭಾರತದಲ್ಲಿ ಸರಕಾರಗಳು ಪ್ರಸ್ತುತ ಆರ್ಥಿಕ ಸಾಮಾಜಿಕ ವಿಷಯಗಳಿಯ ಸಂಬಂಧಿಸಿದ ಯೋಜನೆಗಳನ್ನು ರೂಪಿಸುತ್ತಾ ಬಂದಿದ್ದು, ಸ್ವತಂತ್ರ ನಂತರ ಕೃಷಿ ಮತ್ತು ಉದ್ಯಮ ವಲಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಯಿತು.1950ರ ನಂತರ ಸಮಗ್ರ ಭಾರತದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಯಿತು. ಪ್ರಸ್ತುತ ಎಲ್ಲಾ ವಲಯಗಳಲ್ಲಿ ಮಹಿಳಾ ಮಾನವ ಸಂಪನ್ಮೂಲಕ್ಕೆ ಹೆಚ್ಚು ಅವಕಾಶ ನೀಡುವುದರ ಜೊತೆಗೆ ಯುವ ಸಮುದಾಯಕ್ಕೆ ಕೌಶಲ್ಯ ವೃತ್ತಿಪರ ತರಬೇತಿ ನೀಡುವ ಅವಶ್ಯಕತೆ ಇದೆ ಎಂದರು.


ತಾಂತ್ರಿಕ ಗೋಷ್ಠಿಯಲ್ಲಿ ಸಾರ್ವಜನಿಕ ಯೋಜನೆಯಲ್ಲಿ ಇತ್ತೀಚಿನ ಪ್ರವೃತ್ತಿಗಳ ಕುರಿತು ಡಾ. ಎಸ್.ಎಸ್. ಪಟಗುಂಡಿ, ಡಾ. ಎಸ್.ಟಿ.ಬಾಗಲಕೋಟಿ, ಡಾ.ಬಿ.ಎಚ್.ನಾಗೂರ ಮಾತನಾಡಿದರು.


ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜ ನಾಗೂರ, ಧಾರವಾಡ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್  ಅಡ್ಮಿನಿಸ್ಟ್ರೇಶನ್ ಲೋಕಲ್ ಬ್ರ್ಯಾಂಚ್ ನ ಉಪಾಧ್ಯಕ್ಷ ಡಾ.ಜಗತಾಪ, ಡಾ.ಎನ್.ಎಸ್.ಮುಗದೂರ, ಪ್ರೊ.ಎಸ್.ಎಸ್.ಪಟಗುಂಡಿ, ಪ್ರೊ. ಖಾನ್  ಡಾ.‌ಮನೋಜ ಡೋಳ್ಳಿ, ಡಾ.ಬಸಪ್ಪ ಅಥಣಿ, ಡಾ.ಎಚ್.ಎಸ್. ಭರಡಿ, ಡಾ. ಕದಮ್, ಡಾ. ಲಿಂಗರಾಜ ಅಂಗಡಿ, ಸೇರಿದಂತೆ ವಿದ್ಯಾರ್ಥಿಗಳು ಸಂಶೋದಕರು ಭಾಗವಹಿಸಿದ್ದರು.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ