ಬೆಳಗಾವಿ :
38ನೇ ʼಮಿಸ್ಟರ್ ಲಿಂಗರಾಜʼ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬಿ.ಎ ಅಂತಿಮ ವರ್ಷದ ಕುಮಾರ
ಪ್ರವೀಣ ಕುದರಿಮೋತಿ ʼಮಿಸ್ಟರ್ ಲಿಂಗರಾಜʼ ಪ್ರಶಸ್ತಿ ಪಡೆದುಕೊಂಡರು.
ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕ್ರೀಡಾ ವಿಭಾಗ ಹಾಗೂ ಬೆಳಗಾವಿ ಜಿಲ್ಲಾ
ದೇಹದಾರ್ಢ್ಯ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ 38ನೇ ʼಮಿಸ್ಟರ್ ಲಿಂಗರಾಜʼ
ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ನಾಗಿರಾಜ ದ್ವಿತೀಯ, ಸಿದ್ದಾರ್ಥ ತೃತೀಯ ಸ್ಥಾನ ಪಡೆದರು. ಶ್ರೀ ಶಿರೀಷ್ ಗೋಗಟೆ, ಬೆಳಗಾವಿಯ
ಪ್ರಸಿದ್ಧ ಕೈಗಾರಿಕೋದ್ಯಮಿ, ಶ್ರೀ ಅವೀನಾಶ್ ಪೋತದಾರ ಜಿಲ್ಲಾಧ್ಯಕ್ಷರು, ಬೆಳಗಾವಿ ಜಿಲ್ಲಾ ದೇಹದಾರ್ಢ್ಯ
ಅಸೋಸಿಯೇಷನ್ ಹಾಗೂ ಮಾಜಿ ಅಂತರಾಷ್ಟೀಯ ದೇಹದಾರ್ಢ್ಯಪಟು ಮತ್ತು ಅಂತರಾಷ್ಟ್ರೀಯ
ನಿರ್ಣಾಯಕ ಲಿಂಗರಾಜ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಅಜಿತ್ ಸಿದ್ದಣ್ಣವರ ಉಪಸ್ಥಿತರಿದ್ದರು.
ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ ಇತರ ತೀರ್ಪುಗಾರರು, ನೂರ್ ಮುಲ್ಲಾ, ಗಂಗಾಧರ
ಎಂ, ಹೇಮಂತ ಹವಾಲ್, ಸುನೀಲ್ ಪವಾರ, ಆಕಾಶ್ ಎಚ್. ರಾಜು ನಲವಾಡ್, ಅಂತರಾಷ್ಟ್ರೀಯ
ದೇಹದಾರ್ಢ್ಯ ಪಟುಗಳಾದ ಪ್ರಶಾಂತ್ ಕನ್ನುಕರ್, ಪ್ರವೀಣ ಮಜೂಕರ್, ಮತ್ತು ಶ್ರೀ ಮೋತಗೆಕರ್
ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ, ದೈಹಿಕ ನಿರ್ದೇಶಕ ಡಾ.ಸಿ.ರಾಮಾ
ರಾವ್, ಡಾ.ರೀಚಾ ರಾವ್, ಡಾ.ರಾಘವೇಂದ್ರ ಹಜಗೋಳಕರ್, ಶ್ರೀ.ವಿಣಾಯಕ ವರುಟೆ,
ಶ್ರೀ.ಅನೂಪಕುಮಾರ ಜಾಂಬೋಟಿ ಶ್ರೀ.ವ್ಹಿ.ಪಿ.ಹಿರೇಮಠ, ಶ್ರೀ ಸುನೀತ್ ಮೂಡಲಗಿ, ಸಿದ್ದನಗೌಡ
ಪಾಟೀಲ ಉಪಸ್ಥಿತರಿದ್ದರು.
ಗೆ,
ಸಂಪಾದಕರು
____________________
____________________
ಈ ಮೇಲಿನ ಮಾಹಿತಿಯನ್ನು ತಮ್ಮ ಪ್ರತಿಷ್ಠಿತ ಪತ್ರಿಕೆಯಲ್ಲಿ ಸುದ್ದಿಯಾಗಿ ಪ್ರಕಟಿಸಬೇಕಾಗಿ
ವಿನಂತಿ.
ವಂದನೆಗಳೊಂದಿಗೆ
ಪ್ರಾಚಾರ್ಯರು
ದಿನಾಂಕ : 25-04-2026 ಲಿಂಗರಾಜ ಮಹಾವಿದ್ಯಾಲಯ,