ರನ್ನ ಬೆಳಗಲಿ: ಜು.೦೭ : ಪಟ್ಟಣದ ಶ್ರೀ ಚಕ್ರಪೂರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ, ಪುಣ್ಯಕೋಟಿ ಸಿದ್ದಾಶ್ರಮ ಆವರಣದಲ್ಲಿ ರವಿವಾರ ದಂದು ರಾಷ್ಟ್ರದ ಸೈನಿಕರ ಸುಭದ್ರತೆಗಾಗಿ, ಮಳೆ ಬೆಳೆಯ ಸಮೃದ್ಧಿಗಾಗಿ "ಪ್ರತ್ಯಂಗಿರಾ ಹೋಮ" ಜರುಗಿತು.
ವೇದ ಬ್ರಹ್ಮ ಶ್ರೀ ಡಾ. ರಮೇಶಕುಮಾರ ಶಾಸ್ತ್ರಿಜೀ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು,ಹೋಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಅವರು ಪ್ರತ್ಯಂಗಿರಾ ಹೋಮವು ಹಿಂದೂ ಧರ್ಮದ ಅತ್ಯಂತ ಶಕ್ತಿಶಾಲಿ ಹೋಮಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಹೋಮವನ್ನು ದೇವಿ ಪ್ರತ್ಯಂಗಿರಾ ಅವರ ಅನುಗ್ರಹಕ್ಕಾಗಿ ನೆರವೇರಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಇದು ದುಷ್ಟಶಕ್ತಿಗಳ ನಿವಾರಣೆ, ಶತ್ರುಬಾಧೆ ಶಮನ ಹಾಗೂ ರಾಷ್ಟ್ರ ರಕ್ಷಣೆಗೆ, ನಾಡಿನ ರೈತರ ಉತ್ತಮ ಮಳೆ ಬೆಳೆ ವಿಶೇಷ ಸಮೃದ್ಧಿಗಾಗಿ ಈ ಯಜ್ಞವನ್ನು ಆಶ್ರಮದ ಸಂಪೂರ್ಣ ವೆಚ್ಚದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಹೋಮದಲ್ಲಿ ಪಾಲ್ಗೊಂಡು ಕಾರ್ಯ ನಿರ್ವಹಿಸಿದ ಪೂಜ್ಯರಾದ ವೇದ ಬ್ರಹ್ಮ ಶ್ರೀ ಗುರುಮೂರ್ತಿ ದೇವರು ಸಾಲೋಟಗೆರಿ,ಶ್ರೀ ಸಿದ್ದಯ್ಯ ಶಾಸ್ತ್ರಿಗಳು ರಾಯಚೂರು, ವೀರಭದ್ರ ಶಾಸ್ತ್ರೀ, ವಿನಯ ಶಾಸ್ತ್ರೀ ಹಾಗೂ ಪಟ್ಟದ ನಿವಾಸಿಗಳು, ಶ್ರೀ ಮಠದ ಭಕ್ತವೃಂದದವರು ಉಪಸ್ಥಿತರಿದ್ದರು.