Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾಜಿ ಸೈನಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡಿ :  ಪ್ರಹ್ಲಾದ್ ರೆಡ್ಡಿ ಮನವಿ






ಬಳ್ಳಾರಿ.ಏ. 10: ಮಾಜಿ ಸೈನಿಕರಿಗೆ ಸರ್ಕಾರದಿಂದ ದೊರಯಬೇಕಾದ ಖಾಲಿ ನಿವೇಶನ ಮತ್ತು ಜಮೀನಿನ ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಮಾಜಿ ಸೈನಿಕರಾದ ಪ್ರಹ್ಲಾದ್ ರೆಡ್ಡಿ ಮತ್ತು ಇತರರು ಮನವಿ ಮಾಡಿಕೊಂಡಿದ್ದಾರೆ.


 ಅವರು ನಗರ ಶಾಸಕರಾದ  ನಾರಾ ಭರತ್ ರೆಡ್ಡಿಗೆ  ಅವರ ಕಚೇರಿಯಲ್ಲಿ  ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಸುಮಾರು 4 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸುತ್ತೋಲೆಗಳ ಅನುಸಾರವಾಗಿ  ಸೈನಿಕರಿಗೂ ಮತ್ತು ಮಾಜಿ ಅರೆ ಸೈನಿಕರಿಗೂ ಜಮೀನು ಇಲ್ಲವೇ ಖಾಲಿ ನಿವೇಶನ ಕೊಡಬೇಕೆಂದು ಆದೇಶವಿರುತ್ತದೆ ಆದರೆ  ಇಲ್ಲಿಯವರೆಗೂ ಬಳ್ಳಾರಿ ಜಿಲ್ಲೆಯ ಅರೆ ಸೈನಿಕರಿಗೆ ಅವು ಲಭ್ಯವಾಗಿಲ್ಲ   ಕಾರಣ ಮತ್ತೊಮ್ಮೆ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ, ಸೈನಿಕನ ನಿಷ್ಠೆ ಮತ್ತು ಪ್ರಾಮಾಣಿಕತೆಯ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಾ ಸುಮಾರು 20 ವರ್ಷಗಳ ಕಾಲ ತನ್ನ ಕುಟುಂಬವನ್ನು  ನೆಂಟರನ್ನು ಹಾಗೂ ರಾಜ್ಯ ಮತ್ತು ಜಿಲ್ಲೆ ಹಾಗೂ ತಾಲೂಕುಗಳನ್ನು ತೊರೆದು ದಟ್ಟವಾದ ಕಾಡುಗಳಲ್ಲಿ ಹಿಮ ಪರ್ವತಗಳಲ್ಲಿ ತನ್ನ ಪ್ರಾಣವನ್ನು ಮುಡುಪಾಗಿಟ್ಟ  ಭಾರತಾಂಬೆಯ ಸೇವೆಯಲ್ಲಿ ತಲ್ಲಿನನಾಗುತ್ತಾನೆ. ಅಷ್ಟೇ ಅಲ್ಲದೆ  ಉಗ್ರವಾದಿಗಳು ಹಾಗೂ ನಕ್ಸಲರ ವಿರುದ್ಧ ತನ್ನ ದೇಶಕ್ಕಾಗಿ ಹೋರಾಡುತ್ತಾನೆ ಈ ಸಂದರ್ಭದಲ್ಲಿ ತನ್ನ ಸಹಪಾಠಿಗಳನ್ನು ಸಹ ಕಳೆದುಕೊಳ್ಳುತ್ತಾನೆ, ಸೈನಿಕ ತನ್ನ ಪ್ರಾಣವನ್ನು ಪಣಕ್ಕಿಟ್ಟು 24 ಗಂಟೆ ದೇಶವನ್ನು  ಕಾಯುತ್ತಿರುತ್ತಾನೆ. ಸೈನಿಕರ ಈ ಎಲ್ಲಾ ಸಾಧನೆಗಳನ್ನು ಅಧಿಕಾರಿಗಳು ಮತ್ತು ಶಾಸಕರು ಹಾಗೂ ಸಂಸದರು ಗುರುತಿಸಿ ಹಾಗೂ ಕುಲಂಕುಶವಾಗಿ ಪರಿಶೀಲಿಸಿ ಸೈನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಮಾಡಿಕೊಂಡರು.



ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಕಲ್ಯಾಣ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾದಂತಹ ಸಿರಿಗೇರಿ  ಫನ್ನರಾಜ್  ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಮಾಧವ ರೆಡ್ಡಿ  ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ  ಮತ್ತು ಉಪಾಧ್ಯಕ್ಷರಾದ ಈಶ್ವರ ರೆಡ್ಡಿ  ಸಹ ಕಾರ್ಯದರ್ಶಿಯಾದ ರಾಜಸಿಂಹ ನಿರ್ದೇಶಕರಾದ ಲಕ್ಷ್ಮಣ್ ಮತ್ತು ಶೇಕ್ ಸಾಬ್, ಗೋವಿಂದರಾಜು ವೀರೇಶ್ ಎಂ ಆರ್ ರೆಡ್ಡಿ, ಪ್ರವೀಣ್, ರವಿಕುಮಾರ್ ಇನ್ನು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ