Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿರ್ದಿಷ್ಟ ಗುರಿ ಹಾಕಿಕೊಂಡು ಅಭ್ಯಾಸ ಮಾಡಿ : ಡಿಸಿ ಡಾ. ಆನಂದ ಕೆ. ಸಲಹೆ

ಡಿಸಿ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ವಿಜಯಪುರ,ಏ.೨4: ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ದಿಶೆಯಲ್ಲಿ ಅಧ್ಯಯನಶೀಲರಾದರೆ ಖಂಡಿತಾ ಹೆಚ್ಚಿನ ಅಂಕ ಪಡೆದು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತ್ಯ ಅಭ್ಯಾಸದೊಟ್ಟಿಗೆ ಮಾನಸಿಕ ಹಾಗೂ ದೈಹಿಕ ಸಮತೋಲನ ಕಾಯ್ದುಕೊಂಡರೆ ಮುಖಬರುವ ದಿನಗಳಲ್ಲಿ ಉನ್ನತ ಸಾಧನೆ ಮಾಡಬಹುದಾಗಿದೆ ಎಂದ ಅವರು, ಇದೇ ವೇಳೆ ಸಾಧನೆ ಮಾಡಿದ ಸಾಧಕರು ಹಾಗೂ ಪೋಷಕರನ್ನು ಅಭಿನಂದಿಸಿದರು. 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಾದ ರಿಷಿ ಆನಂದ ಮಾತನಾಡಿ, ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಿದ್ದು ಸಂತಸದ ವಿಷಯ. ಈ ಒಂದು ಕಾರ್ಯದಲ್ಲಿ ಶ್ರಮಿಸಿದ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ವಿದ್ಯಾರ್ಥಿಗಳನ್ನು, ಪಾಲಕರನ್ನು ಅಭಿನಂದಿಸಿದರು. ಪ್ರಸ್ತುತ ವರ್ಷ ಜಿಲ್ಲೆಯು ಇನ್ನೂ ಉನ್ನತ ಸಾಧನೆ ಮಾಡುವಂತೆ ಜೂನ್ ಪ್ರಾರಂಭದಿಂದಲೇ ಯೋಜನೆಗಳನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಾಗರಬೆಟ್ಟ ಆಕ್ಸ್ ಫರ್ಢ್  ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೌಜನ್ಯ ಬಸವರಾಜ ಕಂದಕೂರ, ನೇಹಾ ಪ್ರಭುಗೌಡ ಗುರಡ್ಡಿ, ಪೂಜಾ ಎಚ್ ಲಮಾಣಿ, ಜ್ಯೋತ್ಸಾ ಬಾಲಚಂದ್ರ ಪಾಟೀಲ, ಗಂಗಮ್ಮ ಅಶೋಕ ಕೋಳೂರ, ಸೌಪರ್ಣಿಕಾ ಸಂಗನಗೌಡ ಪಾಟೀಲ, ಸುಪ್ರೀತ ಎಸ್ ಪಾಟೀಲ, ಉಮೇರಾ ಮಹ್ಮದಸಾಬ ಉಸ್ತಾದ, ಎ,ಎ ತಾಂಬೆ, ಅರ್ಪಿತಾ ಮಡಿವಾಳಪ್ಪ ನಾಟೀಕರ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೀರಯ್ಯ ಸಾಲಿಮಠ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು. ಶಾಲಾ ಆಡಳಿತ ಮಂಡಳಿಯ ಮತ್ತು ಎಸ್ ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿಯಲ್ಲಿ ಸಂಭ್ರಮದ ಶ್ರೀ ಭಗೀರಥ ಜಯಂತ್ಯೋತ್ಸವಕರ್ನಾಟಕ ವಿಶ್ವವಿದ್ಯಾಲಯವು 75 ನೇ ವಾರ್ಷಿಕ ಘಟಿಕೋತ್ಸವ.: ಗೌರವ ಡಾಕ್ಟರೇಟ್ ಪದವಿ ಪ್ರಧಾನ.ಸುಚಿಕರವಾದ ಊಟ, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳು ತಕ್ಷಣವೇ ನೀಡಲಿ: ಶಿವರೆಡ್ಡಿ, ಬಗನಾಳ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸ್ವಾಭಿಮಾನ ಸಂಘ ಹಾಗೂ ಗ್ರಾಮದ ಸಮಸ್ತ ದೈವ ಬಾಂಧವರಿಂದ ಉಚಿತ ಸಾಮೂಹಿಕ ಮದುವೆ ಮತ್ತು ಅಂಬೇಡ್ಕರ್ ಜಯಂತಿ ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ -ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮನಿರ್ದಿಷ್ಟ ಗುರಿ ಹಾಕಿಕೊಂಡು ಅಭ್ಯಾಸ ಮಾಡಿ : ಡಿಸಿ ಡಾ. ಆನಂದ ಕೆ. ಸಲಹೆರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ :  ಮಾಜಿ ಸಚಿವ ಕೆ. ಎಸ್  ಈಶ್ವರಪ್ಪ ಶ್ರೀ ವಾಸವಿ ವಿದ್ಯಾಲಯ ಎಸ್.ಎಸ್.ಎಲ್.ಸಿ ಫಲಿತಾಂಶ ಅತ್ಯುತ್ತಮ ಸಾಧನೆ ಬಿಐಟಿಎಂಗೆ ಮತ್ತೊಂದು ಕೀರ್ತಿ: ಡಾ. ಜಗದೀಶ್ ಅಂತರರಾಷ್ಟ್ರೀಯ ಸಂಶೋಧನಾ ಸಾಧನೆERSS-112 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪಿಡಿ ಪೊಲೀಸ್ ಠಾಣೆ