Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಡವ, ಬಲಿದರ ಒಡನಾಡಿ, ಸಹಕಾರಿ ಧುರೀಣ ಎಸ್.ಎಫ್. ದೊಡಗೌಡರ.


    ರಾಜಕೀಯ, ಸಮಾಜ ಸೇವೆ, ಕ್ರೀಡೆ, ದೇವಸ್ಥಾನ ಅಭಿವೃದ್ಧಿ, ಕೃಷಿ, ಇನ್ನೂ ಅನ್ನೇಕ  ಕಾರ್ಯಗಳಲ್ಲಿ ತನ್ನನ್ನು ಜನಸೇವೆಗೆ  ಗುರುತಿಸಿಕೊಂಡು, ಸಾರ್ವಜನಿಕರ  ಸೇವೆಗೆ ಹಗಲಿರುಳು ಶ್ರಮಸಿದ  ಶ್ರಮಿಸಿದ ಸಹಕಾರಿ ಧುರೀಣ ಎಸ್.ಎಫ್. ದೊಡಗೌಡರ ಅವರ ಅವರ ಐದನೇಯ  ಪುಣ್ಯಸ್ಮರಣೆ ಇಂದು ನಡೆಯಲಿದ್ದು  ತನ್ನಿಮಿತ್ತ ಈ ಲೇಖನ.


ರಾಜಕೀಯ ನಾಯಕರಾಗಿ , ಸಮಾಜ ಸುಧಾರಕರಾಗಿ , ಸಂಘಟಕನಾ ಚತುರರಾಗಿ , ನಾಟಕ ಕಲಾವಿದರಾಗಿ   ಬೈಲಹೊಂಗಲ ತಾಲೂಕಿನ ನೇಸರಗಿ  ವಲಯವನ್ನು  ಉನ್ನತ ಮಟ್ಟಕ್ಕೆ ಬೆಳೆಸಿದ ಹೆಮ್ಮೆ ಎಸ್. ಎಫ್. ದೊಡಗೌಡರ ಅವರು  ಇಂದಿಗೂ ಅಮರ. ಅದಕ್ಕಾಗಿ ಅವರಿಗೆ ಕಳೆದ ಐದು ವರ್ಷಗಳಿಂದ ನಮ್ಮನ್ನಗಲಿದರು, ಅವರ ನೆನಪು ಬಡವ, ಬಲಿದರಲ್ಲಿ ನಮ್ಮ ಸಣಗೌಡ್ರು ದೇವರಂತಾ ಮನುಷ್ಯರಿ ಎನ್ನುವ ಮಾತು ಸರ್ವೇ ಸಾಮಾನ್ಯವಾಗಿ ನೇಸರಗಿ ಭಾಗದಲ್ಲಿ ಕೇಳಿಬರುತ್ತದೆ.


ಎಸ್.ಎಫ್. ದೊಡಗೌಡರ ಅವರು ಬೈಲಹೊಂಗಲ ತಾಲೂಕಿನ ಮದನಬಾವಿ ಗ್ರಾಮದಲ್ಲಿ 1968 ರ  ಸೆಪ್ಟೆಂಬರ್ 6 ರಂದು  ರಂದು ಫಕೀರಗೌಡ ಮತ್ತು ಶಾಂತಪ್ಪ ದಂಪತಿಗೆ ಜನ್ಮ ತಾಳಿ,

ಪ್ರಾಥಮಿಕ, ಪ್ರೌಢ, ಬಿ.ಎ ಪದವಿ ಪಡೆದು ಸಹಕಾರಿ ದುರೀಣ ದಿ‌. ಬಸವಂತರಾಯ ದೊಡಗೌಡರ  ರಾಜಕೀಯ ಗರಡಿಯಲ್ಲಿ ಬೆಳೆದು   ಬೈಲಹೊಂಗಲ ತಾಪಂ ಅಧ್ಯಕ್ಷರಾಗಿ , ಎಪಿಎಂಸಿ ನಿರ್ದೇಶಕರಾಗಿ ಅಮೋಘ ಸೇವೆ ಸಲ್ಲಿಸಿದರು. 1978  ರಲ್ಲಿ ಬೈಲಹೊಂಗಲ ವಿಧಾನಸಭಾ ಕ್ಷೇತ್ರದಿಂದ ಮತ್ತು 1985  ರಲ್ಲಿ ಕಿತ್ತೂರು ಮತಕ್ಷೇತ್ರದಿಂದ ಚುನಾವಣೆಗೆ ಸ್ಪಧಿಸಿ ಪರಾಭಾವಗೊಂಡರು ರಾಜಕೀಯದಲ್ಲಿ ಮುಂದುವರೆದು ಜನಸೇವೆಗೆ ತೊಂಕ ಕಟ್ಟಿ ನಿಂತರು . ಗ್ರಾಪಂ ಅಧ್ಯಕ್ಷರಾಗಿ, ಪಿಕೆಪಿಎಸ್ ಅಧ್ಯಕ್ಷರಾಗಿ  ಮದನಬಾವಿ ಹಾಗೂ ಮುರಕಿಭಾವಿ, ಲಕ್ಕುಂಡಿ  ಗ್ರಾಮಗಳ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ.


ರಾಮಲಿಂಗೇಶ್ವರ ದೇವಸ್ಥಾನ  ಕೊಳ್ಳದ ಅಭಿವೃದ್ಧಿಯ ಕನಸು ಕಂಡಿದ್ದ ದೊಡಗೌಡರು :


  ಎಸ್ ಎಫ್ ದೊಡಗೌಡರು  ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಪಂತ ಬಾಳೇಕುಂದರಗಿ ಸಿನ್ನಿಂಗ್ ಮಿಲ್ ಅಧ್ಯಕ್ಷರಾಗಿ  ಕಾರ್ಯ ನಿರ್ವಹಿಸಿದ್ದರು. ನೇಸರಗಿ  ಜಿ.ಪಂ ಮತಕ್ಷೇತ್ರದಿಂದ ಜಿಲ್ಲಾ ಪಂಚಾಯತ

ಸದಸ್ಯರಾಗಿ  ಆಯ್ಕೆಯಾಗಿ 2013 ರಲ್ಲಿ ಬೆಳಗಾವಿ  ಜಿಲ್ಲಾ ಪಂಚಾಯತ  ಅಧ್ಯಕ್ಷರಾಗಿ ಜಿಲ್ಲಾ ಮಟ್ಟದಲ್ಲಿ ಎಲ್ಲ ವಿಭಾಗಗಳಲ್ಲಿ ಅಪಾರ ಸೇವೆ ಸಲ್ಲಿಸಿದರು. ಅಧ್ಯಕ್ಷರ ಅವಧಿಯಲ್ಲಿ ಜಿ ಪಂ ಕ್ಷೇತ್ರದ  ಹಣಬರಹಟ್ಟಿಯ ರಾಮಲಿಂಗೇಶ್ವರ ಕೊಳ್ಳದ ಅಭಿವೃದ್ಧಿಗೆ ಪ್ರಮುಖವಾಗಿ ಕಾರ್ಯನಿರ್ವಹಿಸಿದರು. ಆ ಒಂದು ಗುಡ್ಡದ ಮದ್ಯ ಕ್ಷೇತ್ರದಲ್ಲಿ ಇರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ   10 ಲಕ್ಷ ರೂ. ಅನುದಾನದಲ್ಲಿ ಯಾತ್ರಿ ಭವನ ನಿರ್ಮಾಣ ಮಾಡಲು ಶ್ರಮಿಸಿದರು.ಆ ಸ್ಥಳದಲ್ಲಿ ಈಜುಕೊಳ ಇದ್ದು ಇಂದು ಆ ಕ್ಷೇತ್ರದ  ಪ್ರೇಕ್ಷಣಿಯ ಸ್ಥಳ ಹಾಗೂ ಮದುವೆ ಅನೇಕ ಸಮಾರಂಭಗಳು ನಡೆಯುವ ಪ್ರೇಕ್ಷಣಿಯ ಸ್ಥಳವಾಗಿದೆ.

  2003ರಲ್ಲಿ  ಆಗಿನ ಸರ್ಕಾರ ಜಾರಿಗೆ ತಂದಂಥ  ಜಿ ಪಂ ಮೂಲಕ  ನೀರಿನ ಸೌಲಭ್ಯಕ್ಕಾಗಿ ಯೋಜನೆ ಕಾರ್ಯರೂಪಕ್ಕೆ ತಂದು ಆ ಒಂದು  ಅವಕಾಶವನ್ನು ಸರಿಯಾಗಿ ಸದ್ಭಳಕೆ ಮಾಡಿ ರಾಜ್ಯದ ದೊಡ್ಡ ಜಿಲ್ಲೆಯ ಬೆಳಗಾವಿ ಜಿಲ್ಲೆಯ ಕೆರೆ ತುಂಬುವ ಯೋಜನೆಗೆ ಎಸ್ ಎಫ್ ದೊಡಗೌಡರ  ಶ್ರಮಿಸಿ ಆ ಯೋಜನೆಗಳ ಸಾಕಾರಕ್ಕೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆದರು.

   ಸಹಕಾರಿ ಕ್ಷೇತ್ರದ ದಿಗ್ಗಜರು ದೊಡಗೌಡರು

ರಾಜೀವ್ ಗಾಂಧಿ ಯುವ ಅಭಿವೃದ್ಧಿ ಸಂಘ ಪ್ರಾರಂಭಿಸಿ, ಆ ಒಂದು ಸಂಘದಿಂದ  ಅನೇಕ  ಸಾಹಿತ್ಯಕ, ಸಾಂಸ್ಕೃತಿಕ, ನಾಟಕ ರಂಗದ  ಸದಭಿರುಚಿಯ  ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ನೇಸರಗಿ ಗ್ರಾಮದಲ್ಲಿ ದಿ ನೇಸರಗಿ ಅರ್ಬನ್ ಬ್ಯಾಂಕ  ಸ್ಥಾಪಿಸಿ ಅದರ ಅಧ್ಯಕ್ಷರಾಗಿ ರೈತರ, ಉದ್ಯಮಿಗಳಿಗೆ ಸಾಲ ದೊರಕಿಸಿ  ಬ್ಯಾಂಕ ಉನ್ನತ ಮಟ್ಟಕ್ಕೆ ಬೆಳೆಸಿದರು.ದಾನೇಶ್ವರಿ ಸೇವಾ  ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಅನೇಕ ಕೌಟುಂಬಿಕ ಸಮಸ್ಯೆಗಳ ಬಡವ, ಬಲಿದರ ಸಮಸ್ಯೆಗಳ ಪರಿಹಾರಕ್ಕೆ ದಿನ ನಿತ್ಯ ಪ್ರಯುಕ್ತರಾಗಿದ್ದರು.

    ಜಿಲ್ಲಾ ಪಂಚಾಯತ ಅವಧಿಯಲ್ಲಿ  ಅಧ್ಯಕ್ಷರಾಗಿದ್ದಾಗ ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೆ ಶ್ರಮಿಸಿ  ಶಾಲೆಯ ಮತ್ತು ಮಕ್ಕಳ ವಿದ್ಯಾಭ್ಯಾಸದ ಅನುಕೂಲಗಳನ್ನು ನೀಡಿ ಸಾರ್ಥಕ ಸಾಧನೆ ಮಾಡಿದರ. ನೇಸರಗಿ ಗ್ರಾಮದ  ಸರಕಾರಿ ಶಾಲೆಯನ್ನು  ಕುವೆಂಪು ಮಾದರಿ  ಪ್ರಾಥಮಿಕ ಶಾಲೆ ಮಾಡಿದ ಹಿರಿಮೆ ದೊಡಗೌಡರದು. ಈ  ಶಾಲೆಗೆ ಗೋವಿಂದೇಗೌಡ ಪ್ರಶಸ್ತಿ ದೊರಕಿದೆ. ತಾವೇ ರಚಿಸಿ, ನಟಿಸಿದ ಶ್ರೀ  ಚನ್ನವೃಷಬೇಂದ್ರ   ನಾಟಕ ಜನರ ಪ್ರೇಕ್ಷಕಣೆಗೆ  ಗುಣಮಟ್ಟದಲ್ಲಿ ಮೂಡಿಬಂತು .ಸಾಹಿತಿ, ಶಿಕ್ಷಕ  ಸ.ಜ.ನಾಗಲೋಟಿಮಠ  ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ  ಶಿಕ್ಷಕರಿಗೆ ಅನೇಕ ವರ್ಷಗಳ ಕಾಲ ಸತ್ಕರಿಸಿ ಸನ್ಮಾನಿಸಿದ್ದಾರೆ.


ಲೇಖನ. ಗಂಗಾಧರ ಗುಜನಟ್ಟಿ. ನೇಸರಗಿ / ಬೆಳಗಾವಿ. 9845845790.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ