ಜಮಖಂಡಿ ; ಕೃಷ ಪತ್ತಿನ ಸಹಕಾರ ಸಂಘಗಳು ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಯಾಗಿವೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು, ತಾಲುಕಿನ ಶೂರಪಾಲಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಪಿಕೆಪಿಎಸ್‌ನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಘಗಳು ಕಡಿಮೆ ಬಡ್ಡಿದರದ ಬೆಳೆ ಸಾಲ, ಸಕಾಲಿಕ ನೆರವು, ಉಳಿತಾಯ ಪ್ರವೃತ್ತಿಯನ್ನು ಬೆಳೆಸುವ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರ ನೀಡುತ್ತವೆ. ಪಕ್ಕದ ಮಹರಾಷ್ಟ್ರದಲ್ಲಿ ಸಹಕಾರ ಸಂಘಗಳು ಕ್ರಾಂತಿ ಮಾಡಿವೆ. ಕೃಷಿ ಆಧಾರಿತ ಎಲ್ಲ ಚಟುವಟಿಕೆ ಗಳಿಗೆ ರೈತರ ಬೆನ್ನೆಲುಬಾಗಿ ಸಂಘಗಳು ಕಾರ್ಯನಿರ್ವಹಿಸುತ್ತವೆ. ಶೂರಪಾಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡ ಸುಸಜ್ಜಿತವಾಗಿದೆ. ಹತ್ತಿರದ ನಾಲ್ಕು ಗ್ರಾಮಗಳ ರೈತರಿಗೆ ಇದರಿಂದ ಅನುಕೂಲ ವಾಗಲಿದೆ ಎಂದು ತಿಳಿಸಿದರು. ಆಧುನಿಕ ತಂತ್ರಜ್ಞಾನ ಅಳವಡಿಕೆಯ ಜತೆಗೆ ಮಾದೆರಿಯ ಕಟ್ಟಡ ನಿರ್ಮಿಸಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಪಂಚಯ್ಯ ಹಿರೇಮಠ, ಬಸಯ್ಯ ಮಠದ, ಈರಯ್ಯ ಹಿರೇಮಠ ಸಾರಂಗ ಮಠದ ಸುನಂದಮ್ಮ ತಾಯಿಯವರು ಆಶೀರ್ವಚನ ನೀಡಿದರು. ಪಿಕೆಪಿಎಸ್‌ನ ಅಧ್ಯಕ್ಷ ರಾಮಪ್ಪ ಕಣಬೂರ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪಿಡಿಓ ಸಂತೋಷ ಬಾಡಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಸ್.ಲಾಯಣ್ಣವರ, ಗ್ರಾಮದ ಹಿರಿಯರಾದ ಬಿ,ಕೆ,ಗಲಗಲಿ, ಇಂದಿರಾಬಾಯಿ ಗಲಗಲಿ, ಸಾವಳಗಿಯ ಸುಶೀಲ ಕುಮಾರ ಬೆಳಗಲಿ ಹಾಗೂ ಶೊರಪಾಲಿ ಪಿಕೆಪಿಎಸ್‌ನ ಆಡಳಿತ ಮಂಡಳಿ ಉಪಾಧ್ಯಕ್ಷೆ ಅಶ್ವಿನಿ ರುದ್ರಗೌಡ , ನಿರ್ದೇಶಕರಾದ ಅನೀಲ ಕುಂಚನೂರ, ಬಿ.ಎಸ್.ಸಿಂಧೂರ, ಶಿವಗೊಂಡ ದಳವಾಯಿ, ಮಹಲಿಂಗಪ್ಪ ಕುಂಚನೂರ, ಗಿರಿಮಲ್ಲ ಅರಕೇರಿ, ಅಪ್ಪಾಸಾಹೇಬ ಬಾಲಪ್ಪನವರ, ನೀಲವ್ವಮಂಗೊಡ, ಮಹಬೂಬಿ ಶೇಖ, ಪರಶುರಾಮ ಶಿಂಗೆ, ಲಕ್ಕಪ್ಪ ದಳವಾಯಿ, ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ ಮಂಜುಶ್ರೀ ಮಠಪತಿ, ಶೂರಪಾಲಿ ಪಿಕೆಪಿಎಸ್‌ನ ಮುಖ್ಯಕಾರ್ಯನಿರ್ವಾಹಕ ದುಂಡಪ್ಪ ಕುಂಚನೂರ, ಸಿಬ್ಬಂದಿಗಳಾದ ಸದಾಶಿವ ಕುಂಬಾರ, ಸೇಲ್ಸಮ್ಯಾನ್ ಶಂಕರ ಅಲ್ಲವ್ವಗೋಳ, ದುಂಡಪ್ಪ ಬಲೊಳ, ಹಣಮಂತ ಬಿರಾದಾರ, ಶ್ರೀಶೈಲ ದಳವಾಯಿ, ಸುರೇಶ ಮಲಕಪ್ಪನವರ, ನರಸಿಂಹ ತೇಲಿ, ಹರೀಶ ಕರಬಸನವರ, ಮಹಾಂತೇಶ ಪಾಟೀಲ, ಗಂಗಪ್ಪ ಕುಂಬಾರ, ಬಸಪ್ಪ ಮಂಗರೋಳ, ಭಾರತಿ ಬಿರಾದಾರ, ಅಕ್ಷಯ ಕಡಪಿ, ರಮೇಶ ಬಿರಾದಾರ, ಸಿದ್ದಪ್ಪ ರಾಮಟ್ಟಿ, ಮಲ್ಲಿಕಾರ್ಜುನ ದಾಶಾಳ, ಲಾಲ್‌ಸಾಬ ನಧಾಫ ಸೇರಿದಂತೆ ಗ್ರಾಮದ ಹಿರಿಯರು ಮುಖಂಡರು, ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
