Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಛಾಯಾಚಿತ್ರ ತೆಗೆಯುವದು ವಿಶಿಷ್ಟವಾದ ಕಲೆ - ಶಾಸಕ ಜಗದೀಶ ಗುಡಗುಂಟಿ

ಜಮಖಂಡಿ;ಛಾಯಾಚಿತ್ರ ತೆಗೆಯುವದು ವಿಶಿಷ್ಟವಾದ ಕಲೆಯಾಗಿದೆ. ಛಾಯಾ ಚಿತ್ರಗಳು ಇತಿಹಾಸದ ಸಾಕ್ಷಿಗಳಾಗಿವೆ, ಎಲ್ಲ ಸಂದರ್ಭದಲ್ಲೂ ಛಾಯಾ ಚಿತ್ರಗಳಿಗೆ ವಿಶೇಷವಾದ ಮಹತ್ವ ಇದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಭಾನುವಾರ ನಗರದ ಬಸವ ಭವನದಲ್ಲಿ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ 14 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ನೈಸರ್ಗಿಕ ವಿಕೋಪಗಳು, ಯುದ್ಧ, ದಂಗೆಗಳ ಸಂದರ್ಭದಲ್ಲಿ ಜೀವವನ್ನು ಲೆಕ್ಕಿಸದೇ ಛಾಯಾಗ್ರಾಹಕರು ಸಲ್ಲಿಸುವ ಸೇವೆ ಹೆಮ್ಮೆ ಪಡುವಂತಹದ್ದಾಗಿದೆ ಎಂದು ಹೇಳಿದರು. ಸರ್ಕಾರ ಛಾಯಾಗ್ರಾಹಕರ ಸಮಸ್ಯೆಗಳ ಕುರಿತು ಗಮನ ಹರಿಸಬೇಕು, ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿದೆ. ಸಂಘಕ್ಕೆ ವಯಕ್ತಿಕವಾಗಿ 1 ಲಕ್ಷರೂಗಳ ಧನ ಸಹಾಯ ಮಾಡಿದ ಅವರು ಸಂಘ ಹೆಮ್ಮರವಾಗಿ ಬೆಳೆಯಲು ಎಲ್ಲರೀತಿಯ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು. ಛಾಯಾಚಿತ್ರಗಳು ಹಲವುಬಾರಿ ಸಾಕ್ಷಿಗಳಾಗುತ್ತವೆ. ಹತ್ತು ಹಲವು ಮಾತುಗಳಿಗಿಂತ ಒಂದು ಚಿತ್ರ ಎಲ್ಲವನ್ನು ಹೇಳಿಬಿಡುತ್ತದೆ. ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುತ್ತವೆ. ಮಧುರ ಕ್ಷಣಗಳು, ದುಖದ ಸನ್ನಿವೇಶಗಳು, ಕೋಪ, ವಿನಂಮ್ರತೆ ಹೀಗೆ ಎಲ್ಲ ಜೀವನದ ಮಜಲುಗಳಿಗೆ ಛಾಯಾಚಿತ್ರಗ ಳು ಸಾಕ್ಷಿಯಾಗಿವೆ ಎಂದು ಹೇಳಿದರು. ಸಂಘದ ಅಭಿವೃದ್ಧಿಗೆ ಸಹಕರಿಸುವದಾಗಿ ತಿಳಿಸಿದರು.

ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್‌ ಮಾತನಾಡಿ ಎಲ್ಲ ಕೆಲಸಗಳು ಮಹತ್ವದ್ದಾಗಿವೆ. ಪ್ರಾಮಾಣಿಕತೆಯಿಂದ ಮಾಡುವ ಕೆಲಸಕ್ಕೆ ಶ್ರೇಯಸ್ಸು ಸಿಕ್ಕೇ ಸಿಕ್ಕುತ್ತದೆ. ಛಾಯಾಗ್ರಾಹಕರು ದುಶ್ಚಟಗಳಿಂದ ದೂರವಿರಬೇಕು, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು ಎಂದು ಹೇಳಿದರು. ವೃತ್ತಿಯಲ್ಲಿ ಆಸಕ್ತಿ ಹಾಗೂ ಪ್ರೀತಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಓಲೆ ಮಠದ ಆನಂದ ದೇವರು ಮಾತನಾಡಿ ಜೀವನದ ಪ್ರತಿ ಹಂತದಲ್ಲೂ ಛಾಯಾಚಿತ್ರಗಳು ಅವಶ್ಯವಾಗಿವೆ. ಎಲ್ಲ ಕಾರ್ಯಕ್ರಮದ ಯಶಸ್ಸಿಗೆ ಚಿತ್ರಗಳು ಅವಶ್ಯಕವಾಗಿದೆ ಎಂದು ಹೇಳಿದರು. ಪೊಟೋ ತೆಗೆದು ಕೊಳ್ಳಲು ಬರುವ ಪ್ರತಿ ಗಿರಾಕಿಗೆ ಸ್ಮಲ್‌ ಪ್ಲೀಸ್‌ ಎಂದು ಹೇಳುವ ತಮ್ಮ ವೃತ್ತಿ ಹೆಮ್ಮೆಪಡುವಂಥಹದು, ಎಲ್ಲರನ್ನು ನಗುನಗುತ್ತ ಬದುಕಲು ಪ್ರೇರೆಪಿಸುವದು ಒಂದು ಸಮಾಜ ಸೇವೆ ಇದ್ದಂತೆ ಜೀವನದಲ್ಲಿ ಎಲ್ಲರೂ ನಗುತ್ತಿರಲಿ ಎಂಬ ಭಾವ ಅದರಲ್ಲಿ ಅಡಕವಾಗಿದೆ ಎಂದು ಆಶೀರ್ವಚನ ನೀಡಿದರು. ತಾಲೂಕ ಛಾಯಾಚಿತ್ರ ಗ್ರಾಹಕರ ಸಂಘದ ಈರನಗೌಡ ಪಾಟೀಲ್, ಮುಜಾಯಿದ್ ದಿಲಾವರ, ರಮೇಶ್ ಹಲವಾಯಿ, ಆನಂದ ಪುಕಾಳೆ, ಹಾಶೀಮ್ ಜಮಖಂಡಿ, ಅಶೋಕ ಜೋಶಿ. ಶ್ರೀ ಶೈಲ್ ಮಾಳಿ ಸಂಜು ಕಬ್ಬೂರಿ,ರವೀಂದ್ರ ಕೋಳಿ, ಸುಭಾಷ ಕಾಸಿದ,ಶೇಖರ ಹರಕಂಗಿ,ರವೀಂದ್ರ ಜಂಬಗಿ, ಉಮರ್ ಮುಲ್ಲಾ, ಅನ್ನಪ್ಪಾ ಮೋಹಿತೆ, ಬಡಕಲ್ಲ ನದಾಪ, ಸಿದ್ದು ಗಡದಿ,ಪ್ರಹ್ಲಾದ ಲೋಗಾವಿ ರಾಜು ಆಜೂರ, ಜಗದೀಶ ತೆಗ್ಗಿನ ಮಠ, ಉಪಸ್ಥಿತರಿದ್ದರು. ಅಶೋಕ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರದೀಪ ಹಂಚಿನಾಳ ಕಾರ್ಯಕ್ರಮ ನಿರೂಪಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರವೀಂದ್ರ ಕೋಳಿ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ