Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೀರ ರಾಜೇನೂರ ಶಾ ಶಾಹನೂರಲಿ ಬಾಬಾ ಉರುಸು ಭಾವೈಕ್ಯತೆ ಸಂಕೇತ

ಇಂಡಿ : ಅಹಿರಸಂಗ ಗ್ರಾಮದಲ್ಲಿ ಆಚರಿಸುತ್ತಿರುವ ಪೀರ ರಾಜೇನೂರ ಶಾ ಶಾಹನೂರಲಿ ಬಾಬಾ ಉರುಸು ಗ್ರಾಮದಲ್ಲಿ ಹಿಂದು - ಮುಸ್ಲಿಮ ಬಾಂಧವರು ಸಹೋದರತ್ವ ಭಾವನೆಯಿಂದ ಆಚರಿಸುತ್ತಿದ್ದು ಭಾವೈಕ್ಯತೆ ಸಂಕೇತವಾಗಿದೆ ಎಂದು ಜೈನಾಪುರದ ರೇಣುಕಾ ಶಿವಾಚಾರ್ಯರರು ಹೇಳಿದರು.
ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ನಡೆದ  ಪೀರ ರಾಜೇನೂರ ಶಾ ಶಾಹನೂರಲಿ ಬಾಬಾ ಉರುಸು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪೀರ ರಾಜೇನೂರ ಶಾ ಶಾಹನೂರಲಿ ಬಾಬಾರವರು ಪವಾಡ ಪುರುಷರಾಗಿದ್ದರು. ಹೀಗಾಗಿ ಅವರ ಮೇಲೆ ಜನರ ಅಪಾರ ಪ್ರೇಮ ಇತ್ತು. ಜನರು ಅವರನ್ನು ಗೌರವ ಮತ್ತು ಶ್ರದ್ದೆಯಿಂದ ಕಾಣುತ್ತಿದ್ದರು. ಅವರಿಂದ ಉದ್ದಾರ ಆದವರು ಅನೇಕರು ಎಂದರು.
ಶ್ರೀ ಮಲ್ಲಿಕಾರ್ಜುನ ಶ್ರೀಗಳು ಅಹಿರಸಂಗ, ವಿಠ್ಠಲಗೌಡ ಯಶವಂತರಾಯಗೌಡ ಪಾಟೀಲರು,ಅಹಿರಸಂಗದ ರೇವಣಸಿದ್ದಯ್ಯ ಶಾಸ್ತ್ರೀಗಳು, ಅಶೋಕ ಬಡಿಗೇರ ದಾದಾ ಶ್ಯಾಮಣ್ಣವರ ಮಾತನಾಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ಸಾನಿದ್ಯ ವಹಿಸಿದ್ದರು. ರಜಾಕ ಯಡ್ರಾಮಿ,ಶಬಾನಾ ಶೇಖ,ಪ್ರಭುಗೌಡ ಬಿರಾದಾರ, ಮುಜಬಿರ ರಹಮಾನ ಶ್ಯಾಮಣ್ಣನವರ ಮತ್ತಿತರಿದ್ದರು ವೃದಿಕೆಯ ಮೇಲೆ ಇದ್ದರು.
ವಾಸುದೇವ ಕುಲಕರ್ಣಿ, ಲಾಲಸಾಬ ಮುಲ್ಲಾ, ಯಶವಂತ ಕಾಡೆಗೋಳ, ನಿಸಾರ ಶ್ಯಾಮಣ್ಣನವರ, ಶಿವಾನಂದ ಬ್ಯಾಗೇಳಿ, ಅಪ್ಪಾಶಾ ಇಂಗಳಗಿ ರಾಜಕುಮಾರ ವಾಲಿಕಾರ ಮತ್ತಿತರಿದ್ದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST