Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾಲಕರು ಮಕ್ಕಳ ವಿಷಯದಲ್ಲಿ ಜಾಗರೂಕರಾಗಿರಬೇಕು-ಮೋಟಗಿ

ಮುದ್ದೇಬಿಹಾಳ: ಪಾಲಕರು ಮಕ್ಕಳ ವಿಷಯದಲ್ಲಿ ಜಾಗರೂಕರಾಗಿರಬೇಕು.‌ ದಿನಕ್ಕೆ ಕನಿಷ್ಠ 10 ನಿಮಿಷಗಳನ್ನಾದರೂ ಅವರೊಂದಿಗೆ‌‌ ಕಳೆಯಬೇಕು. ಪಾಲಕರು‌ ಸರಿಯಾಗಿದ್ದರೆ ಮಕ್ಕಳೂ ಸರಿಯಾಗಿರುತ್ತಾರೆ. ಮಕ್ಕಳ ಮೇಲೆ‌ ಕುರುಡು ಪ್ರೀತಿ ಇರಬಾರದು ಎಂದು ಹಿರಿಯ ಶಿಕ್ಷಕ ರಾಜಶೇಖರ ಮೋಟಗಿ ಹೇಳಿದರು.


ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಕ್ಸಪರ್ಟ್ ಟ್ಯಾಲೆಂಟ್ ಆವಾರ್ಡ ಸ್ಪರ್ಧಾ ಪರೀಕ್ಷೆ ವಿಜೇತರಿಗೆ ನಗದು ಪುರಸ್ಕಾರ ಹಾಗೂ ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಕಾರ ಇಲ್ಲದ ಶಿಕ್ಷಣ ಶಿಕ್ಷಣವೇ ಅಲ್ಲ‌ ಎಂದು ಗಾಂಧೀಜಿ ಹೇಳಿದ್ದು ಇಂದಿನ ದಿನಗಳಲ್ಲಿ ಸೂಕ್ತವಾಗಿದೆ. ಎಸ್ಡಿಕೆ ಪ್ರೌಢಶಾಲೆ ಮತ್ತು ಎಕ್ಸಪರ್ಟ್ ಪಿಯು ಕಾಲೇಜುಗಳಲ್ಲಿ ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಲಕ್ಷ್ಮೀ ಒಲಿದಂತೆ‌ ಸರಸ್ವತಿ ಸುಲಭವಾಗಿ ಒಲಿಯುವುದಿಲ್ಲ. ಸರಸ್ವತಿಯನ್ನು ಒಲಿಸಿಕೊಳ್ಳಲು ನಾವು ಅವಿರತ ಶ್ರಮ ಪಡಬೇಕು ಎಂದರು.


ಮುಖ್ಯ ಅತಿಥಿಯಾಗಿದ್ದ ಮುಖ್ಯಾಧ್ಯಾಪಕ ಬಸಯ್ಯ ಮಠ ಅವರು ಮಾತನಾಡಿ, ಮಕ್ಕಳು ತಂದೆ‌ ತಾಯಿಗೆ ಚಿರರುಣಿ‌ಯಾಗಿರಬೇಕು, ಶಿಕ್ಷಕರಿಗೆ ವಿಧೇಯರಾಗಿರಬೇಕು. ಬೆಳೆಸಿದವರಿಗೆ ಕೃತಜ್ಞರಾಗಿರಬೇಕು. ಬೆಳೆಸಿದವರನ್ನ ಮರೆತರೆ ಅಂಥವರ ಬೆಳವಣಿಗೆಗೆ ಅರ್ಥ ಇರೊಲ್ಲ. ಪಾಲಕರು ಮತ್ತು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಆಯ್ಕೆ‌ಯಲ್ಲಿ ಸ್ಪಷ್ಟವಾಗಿರಬೇಕು. ಮಕ್ಕಳ‌ ಕನಸಿನ‌ ಬಳ್ಳಿಗೆ ಪಾಲಕರು ನೀರೆರೆದು ಪೋಷಿಸಬೇಕು. ಮಕ್ಕಳ‌ ವಿಷಯದಲ್ಲಿ ಪಾಲಕರು‌ ಸೂಕ್ತ ತೀರ್ಮಾನ ಕೈಕೊಳ್ಳಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ ಬಿ.ಜಿ.ಮಠ(ಮುತ್ತು) ಅವರು ಮಾತನಾಡಿ, ಗ್ರಾಮೀಣ ಭಾಗದ ಮತ್ತು ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಇವರು ನಗರ ಪ್ರದೇಶದವರಿಗೆ ಸರಿಸಮನಾಗಿ ಬೆಳೆಯಬೇಕು ಅನ್ನೋದು ನಮ್ಮ ಸದಾಶಯವಾಗಿದೆ. ನಮ್ಮಲ್ಲಿ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಇದೆ. ಪ್ರತಿ ವರ್ಷ ನಮ್ಮ ಸಂಸ್ಥೆಯಲ್ಲಿ 50-60 ಬಡಕುಟುಂಬದ ಪ್ರತಿಭಾವಂತ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಾರೆ. ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಹಣ ಗಳಿಸುವ ಉದ್ದೇಶ ನಮಗಿಲ್ಲ. ಗುಣಮಟ್ಟದ ಶಿಕ್ಷಣ ಕೊಡುವುದೇ ನಮ್ಮ ಧ್ಯೇಯವಾಗಿದೆ ಎಂದರು.

ಮುದ್ದೇಬಿಹಾಳ ತಾಲೂಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್.ಚಿತ್ತರಗಿ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯವಾಗಿರಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಎಲ್ಲರೂ ಹೊಂದಿಕೊಳ್ಳಬೇಕು.‌ ಜೀವನದಲ್ಲಿ ಕೆಲವೊಮ್ಮೆ ನಾವು ಮಾಡುವ ತಪ್ಪುಗಳು ಭವಿಷ್ಯದ ಜೀವನಕ್ಕೆ ದುಬಾರಿ ಆಗುತ್ತವೆ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.


ಮುಖ್ಯಾಧ್ಯಾಪಕ ಬಸಯ್ಯ ಸ್ವಾಮಿ, ಪಾಲಕರ ಪ್ರತಿನಿಧಿ ಭಂಡಾರಿಮಠ ವೇದಿಕೆಯಲ್ಲಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ವಲ್ ಮಠ, ಪಿಯು ಕಾಲೇಜು ಪ್ರಾಂಶುಪಾಲ ಐ.ಎ.ಬಾಗವಾನ, ಮುಖ್ಯಾಧ್ಯಾಪಕರಾದ ಹೀರೂ ನಾಯಕ, ಶಿವಯ್ಯ ಮಠ, ರವಿ ಪೂಜಾರಿ, ಎಲ್.ಎಚ್.ನದಾಫ, ಮಲ್ಲಿಕಾರ್ಜುನ ಕಂಬಳಿ, ಅಶೋಕ ಗಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಮುಖ್ಯಾಧ್ಯಾಪಕರು, ಶಿಕ್ಷಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾದ ವಾಣಿಶ್ರೀ ಹಳ್ಳದ, ಆವಾರ್ಡ ವಿಜೇತರ ಪರವಾಗಿ ವಿದ್ಯಾರ್ಥಿನಿ ಗಂಗಮ್ಮ ಕೋಳೂರ, ಪಾಲಕರ ಪರವಾಗಿ ಗಂಗಾ ರಾಜಮಾನ್ಯ ಅನಿಸಿಕೆ ಹಂಚಿಕೊಂಡರು.

ಬಾಕ್ಸ್:

ಟ್ಯಾಲೆಂಟ್ ಆವಾರ್ಡ ವಿಜೇತರು: ಮೈಲೇಶ್ವರ ಬ್ರಿಲಿಯಂಟ್ ಪ್ರೌಢಶಾಲೆಯ ಗಂಗಮ್ಮ ಕೋಳೂರ ಪ್ರಥಮ ಸ್ಥಾನ ಪಡೆದು ಟ್ಯಾಲೆಂಟ್ ಆವಾರ್ಡಗೆ ನಿಗದಿಪಡಿಸಿದ್ದ ಟ್ರೋಫಿ ಮತ್ತು 25000 ನಗದು ಪುರಸ್ಕಾರ ಪಡೆದು 2.15 ಲಕ್ಷ ಮೌಲ್ಯದ ಶಿಷ್ಯವೇತನಕ್ಕೆ ಆಯ್ಕೆಯಾದರು. ವಿಜಯಪುರದ ಅದಿತಿ ರಾಜಮಾನ್ಯ, ಬಿದರಕುಂದಿ ಆರ್.ಎಂ.ಎಸ್.ಎ ವಿದ್ಯಾಲಯದ ಸುಪ್ರೀತ್ ಪಾಟೀಲ, ವಿಜಯಪುರ ಎಕ್ಸಲೆಂಟ್ ಶಾಲೆಯ ಅಪೂರ್ವಾ ಮೂಲಿಮನಿ ಹಾಗೂ ಆಲಮಟ್ಟಿ ಜವಾಹರ ನವೋದಯ ವಿದ್ಯಾಲಯದ ಕಾರ್ತಿಕ್ ಜಾಲಾಪುರ ನಂತರದ ಸ್ಥಾನಗಳನ್ನು ಪಡೆದು ನಿಗದಿಪಡಿಸಿದ ನಗದು ಪುರಸ್ಕಾರ ಪಡೆದು ಹಾಗೂ ಶಿಷ್ಯವೇತನಕ್ಕೆ ಆಯ್ಕೆಯಾದರು.

ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆ:

ಸಂಸ್ಥೆಯ ಉಚಿತ ಶಿಕ್ಷಣ ಯೋಜನೆಯಡಿ ಪ್ರಯೋಜನ ಪಡೆದುಕೊಂಡು ಎಂಬಿಬಿಎಸ್ ಮೆಡಿಕಲ್ ಶಿಕ್ಷಣಕ್ಕೆ ಆಯ್ಕೆಯಾದ ವಾಣಿಶ್ರೀ ಹಳ್ಳೂರ ಹಾಗೂ ಸುಮೀತ್ ಬಗೇಲ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಾಣಿಶ್ರೀ ಅವರ ತಂದೆ, ತಾಯಿ ಮುದ್ದೇಬಿಹಾಳದ ವಿಬಿಸಿ ಪ್ರೌಢಶಾಲೆಯ ಎದುರು ಗೂಡಂಗಡಿಯಲ್ಲಿ ಸಣ್ಣ ಹೊಟೇಲ್ ನಡೆಸುತ್ತ ಜೀವನ ಸಾಗಿಸುತ್ತಿದ್ದರೆ ಸುಮೀತ್ ಅವರ ತಂದೆ ರಸ್ತೆ ಪಕ್ಕದಲ್ಲಿ ಪಾನಿ ಪುರಿ ಮಾರಿ ಜೀವನ ನಡೆಸುವಂಥ ಬಡಕುಟುಂಬಕ್ಕೆ ಸೇರಿದವರು. ಇವರ ಪರಿಸ್ಥಿತಿ ಅರಿತು ಸಂಸ್ಥೆಯ ಚೇರಮನ್ ಬಿ.ಜಿ.ಮಠ ಅವರು ವಾಣಿಶ್ರೀಗೆ ಪಿಯುಸಿ ಎರಡು ವರ್ಷ ಸಂಪೂರ್ಣ ಉಚಿತ ಶಿಕ್ಷಣ ನೀಡಿದ್ದಲ್ಲದೆ ಎಂಬಿಬಿಎಸ್ ಪ್ರಥಮ ವರ್ಷದ ಪ್ರವೇಶಕ್ಕೆ ಅಗತ್ಯವಾಗಿದ್ದ ಸರ್ಕಾರಿ ಶುಲ್ಕ ರೂ.64350 ಹಣವನ್ನು ಸಂಸ್ಥೆಯಿಂದಲೇ ಭರಿಸಿ ಆಕೆಯ ಮೆಡಿಕಲ್ ಶಿಕ್ಷಣಕ್ಕೆ ನೆರವಾಗಿದ್ದರು. ಸುಮೀತಗೆ ಪ್ರತಿ ವರ್ಷ ರೂ.50000ದಂತೆ 4 ವರ್ಷಗಳ ಕಾಲ ಒಟ್ಟು 2 ಲಕ್ಷ ರೂ ನೆರವು ನೀಡಿ ಎಂಬಿಬಿಎಸ್ ಶಿಕ್ಷಣಕ್ಕೆ ನೆರವಾಗಿದ್ದರು. ಮಠ ಅವರ ಮಾನವೀಯ ನೆರವನ್ನು ವೇದಿಕೆಯಲ್ಲಿದ್ದ ಗಣ್ಯರು ಕೊಂಡಾಡಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ