Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ವರ್ಷದ ಪಂಚಾಂಗ ಶ್ರವಣ: ಪಂಡಿತ್ ಮಠಂ ಗುರುಪ್ರಸಾದ್ ಅವರಿಂದ ಪ್ರವಚನ:   







ಬಳ್ಳಾರಿ, ಮಾ.23:.. ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ, ಉಪಗ್ರಹಗಳನ್ನು ಉಡಾವಣೆ ಮಾಡಲೂ ಸಮಯ, ಕಾಲಕ್ಕೆ ಜೋತಿಷ್ಯ ಮತ್ತು ದೇವರ ಮೊರೆ ಹೋಗುತ್ತಾರೆ. ಯುಗಾದಿ ಬಂತೆಂದರೆ ರೈತರು ಈ ವರ್ಷದಲ್ಲಿ ಯಾವ ಬೆಳೆಗೆ ಬಲಾ ಬಲದ ಬಗ್ಗೆ ಜೋತಿಷ್ಯ ಕೇಳಿದರೆ, ಇನ್ನು ರಾಜಕಾರಣಿಗಳಿಂದ ಹಿಡಿದು ಅಧಿಕಾರ ವರ್ಗದವರು ಜೋತಿಷ್ಯ ಕೇಳುವುದರಿಂದ ಹೊರತಾಗಿಲ್ಲ.

ಪ್ರತಿ ವರ್ಷವು  ಜೋತಿಷ್ಯರತ್ನ, ವಾಸ್ತುಬ್ರಹ್ಮ, ಪಂಡಿತ್ ಮಠಂ ಗುರುಪ್ರಸಾದ್ ಅವರು ಪ್ರತಿವರ್ಷವು ಶ್ರೀ ಉಮಾಮಹೇಶ್ವರ ಪಂಚಾಂಗ ರಚನೆ ಮಾಡಿ ಪಠಣೆ ಮಾಡುತ್ತಾರೆ.  ಈ ವರ್ಷದ ಶ್ರೀ ಮನೃಪ ಶಾಲಿವಾಹನ ಶಕೆ ೧೯೪೭ನೇ ಶ್ರೀ ಪರಾಭವ ನಾಮ ಸಂವ ತ್ಸರ(೨೦೨೬-೨೭)ದ ಮಳೆ, ಬೆಳೆ, ಬೆಲೆ, ವಾತಾವರಣ, ರಾಜಕೀಯ ಪರಿಸ್ಥಿತಿ, ದ್ವಾದಶ ರಾಶಿ ಗೋಚರ ಫಲಗಳು, ಗ್ರಹಣ, ಮೂಢಗಳು, ಮುಹೂರ್ತಗಳ ಬಗ್ಗೆ ವಿಶ್ಲೇಷಿಸಲಾಗಿದೆ. ಸಂಖ್ಯಾ ಶಾಸ್ತ್ರವನ್ನು ಅಳವಡಿಸಿದ ಪ್ರಥಮ ಪಂಚಾಗ ಇದಾಗಿದೆ.

ಯುಗಾದಿ ದಿನದಂದು ಪಂಚಾಂಗ ಶ್ರವಣ:

ಪ್ರತಿವರ್ಷ ಯುಗಾದಿಯಂದು ಬಹುತೇಕ ಕಡೆಗಳಲ್ಲಿ ಪಂಚಾಂಗ ಶ್ರವಣ ಮಾಡುವ ವಾಡಿಕೆ ಈಗಲೂ ನಡೆದುಕೊಂಡು ಬರುತ್ತಿದೆ. ಅಂತೆಯೇ ಪಂಡಿತ್ ಮಠಂ ಗುರುಪ್ರಸಾದ್ ಅವರು ಪಂಚಾಂಗ ಪಠಣೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಚೈತ್ರಮಾಸ ಶುಕ್ಲ ಪಕ್ಷ  ಪಾಢ್ಯಮಿ ದಿನ ಮಂಗಳ ಸ್ನಾನ ಮಾಡಿ, ಗಣಪತಿ, ಕುಲದೈವ, ಇಷ್ಟದೇವರು, ನವಗ್ರಹ ಆರಾಧನೆ ಮಾಡಿ, ಮಾತೃದೇವ ಹಾಗೂ ಗುರು ದೇವರ ಆಶೀರ್ವಾದ ಪಡೆದು ಪಂಚಾಂಗಕ್ಕೆ ನಮಸ್ಕರಿಸಿ ಬೇವಿನ ಹೂವು, ಮಾವಿನ ಕಾಯಿ ಚೂರು ಗಳು, ನಲ್ಲಿಕಾಯಿರಸ, ಹೊಸ ಹುಣಸೇ ಹಣ್ಣು, ಆಕಳ ತುಪ್ಪದಿಂದ ಚಡಿಯನ್ನು ದೇವರಿಗೆ ನೈವೇ ದ್ಯವನ್ನು ಮಾಡಿ, ಬಂಧು ಮಿತ್ರರೊಂದಿಗೆ ಸೇವಿಸಿ ಪಂಚಾಂಗ ಶ್ರವಣವನ್ನು ಮಾಡುವುದು ಪದ್ಧತಿಯಾಗಿದೆ.

ಪಂಚಾಂಗದ ಸಾರ:

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಐದನ್ನು ಪಂಚಾಂಗ ತಿಳಿಸುತ್ತದೆ.  ತಿಂಗಳು, ದಿನಗಳು, ಇತರ ಖಗೋಳ ಶಾಸ್ತ್ರಗಳನ್ನು ತಿಳಿಸುವುದು ತಿಥಿಯಾದರೆ,  ಶ್ರೇಯಸ್ಸಿಗೆ ವಾರಗಳು, ಆಯುಷ್ಯವೃದ್ಧಿಗೆ ನಕ್ಷತ್ರಗಳು, ಪಾಪ ಪರಿಹಾರಕ್ಕೆ ಯೋಗಗಳು, ರೋಗ ನಿವಾರಣೆಗೆ ಕರಣಗಳು ಹೀಗೆ ಇವೆಲ್ಲವುಗಳು ಕಾರ್ಯಸಿದ್ಧಿಗೆ ಸಹಾಯ ಮಾಡುತ್ತವೆ. ಇವುಗಳನ್ನು ಒಳಗೊಂಡ ಪಂಚಾಂಗ ಕೇಳಿದರೆ ಶತ್ರುಬಾಧೆ, ಕೇಡು ಇತ್ಯಾದಿ ಅಶುಭ ಫಲಗಳು ತೊಲಗಿಸುತ್ತದೆ.

ಪರಾಭವ ನಾಮ ಸಂವತ್ಸರದ ನವನಾಯಕರು:

ಚೈತ್ರ ಮಾಸಶುಕ್ಲಪಕ್ಷ ಪ್ರತಿಪದಾದಿ ದಿನ ಯಾವ ವಾರ ಉಂಟಾಗುತ್ತದೆಯೋ ಆ ವಾರಾಧಿಪತಿಯೇ ಆ ಸಂವತ್ಸರದ ರಾಜನಾಗುತ್ತಾನೆ, ಯಾವ ವಾರ  ಸಂಕ್ರಮಣ ಉಂಟಾಗುತ್ತದೆಯೋ ಆ ವಾರದ ಅಧಿಪತಿ ಆ ಸಂವತ್ಸರದ ಮಂತ್ರಿಯಾಗುವನು, ಯಾವ ವಾರ ಕರ್ಕ ಸಂಕ್ರಾಂತಿ ಉಂಟಾಗುತ್ತದೆಯೋ   ಆ ವಾರಾಧಿಪತಿ ಸಸ್ಯಾಧಿಪತಿ ಆಗುತ್ತಾನೆ, ಯಾವ ವಾರ ತುಲಾ ಸಂಕ್ರಮಣ ಉಂಟಾಗುತ್ತದೆಯೋ ಆ ವಾರಾಧಿಪತಿ ಆ ಸಂವತ್ಸರದ ರಸಾಧಿಪತಿ ಆಗುವನು, ಯಾವ ವಾರ ಮಕರ ಸಂಕ್ರಮಣ ಉಂಟಾಗುತ್ತದೆಯೋ ಆ ವಾರಧಿಪತಿ ಆ ಸಂವತ್ಸರದ ನೀರಸಾಧಿಪತಿ ಆಗುತ್ತಾನೆ.

ಜನರು ಸುಭೀಕ್ಷೆಯಿಂದ ಇರ್ತಾರೆ:

ರಾಜ ಗುರುವಾಗಿದ್ದರೆ, ಮಂತ್ರಿ ಕುಜನಾಗಿದ್ದಾನೆ, ಸೇನಾಧಿಪತಿ ಚಂದ್ರನಾಗಿದ್ದಾನೆ, ಸಸ್ಯಾಧಿಪತಿ ಶುಕ್ರನಾಗಿದ್ದರೆ, ಧಾನ್ಯಾಧಿಪತಿ ಬುಧನಾಗಿದ್ದರೆ, ಅರ್ಘಾಧಿಪತಿ, ಮೇಘಾಧಿಪತಿ ಚಂದ್ರನಾಗಿದ್ದಾನೆ, ರಸಾಧಿಪತಿ ಸೂರ್ಯನಾಗಿದ್ದರೆ, ನೀರಸಾಧಿಪತಿ ಶುಕ್ರನಾಗಿದ್ದಾನೆ. ಗುರು ರಾಜನಾಗಿರುವುದರಿಂದ  ಈ ಸಂವತ್ಸರದಲ್ಲಿ ಜನರು ಸುಭಿಕ್ಷೆಯಿಂದ ಆರೋಗ್ಯದಿಂದ ಸುಖ ಜೀವನ ನಡೆಸುತ್ತಾರೆ, ಅವನೀತಿ, ಅನ್ಯಾಯಗಳು ಕಡಿಮೆ ಆಗುತ್ತದೆ, ಅನುಕೂಲಕರ ಮಳೆಯಿಂದ ಬೆಳೆಗಳು ಚೆನ್ನಾಗಿ ಬೆಳೆದು ರೈತರು ಸಂತೃಪ್ತಿಯಿಂದಿರುತ್ತಾರೆ, ಬಂಗಾರದ ಬೆಲೆ ಹೆಚ್ಚಾಗುತ್ತದೆ, ಆಧುನಿಕ ವಿಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುವವರು ಹೆಚ್ಚುತ್ತಾರೆ, ಗುರುವು ಉಚ್ಚಸ್ಥಾನಗಳಲ್ಲಿ ಸಂಚಾರ ಮಾಡುವುದರಿಂದ ದೇವಾಲಯಗಳು, ಆಧ್ಯಾತ್ಮಿಕ ಕೇಂದ್ರಗಳು ಅಭಿವೃದ್ಧಿಯಾಗುತ್ತದೆ.

ಯದ್ಧ ಭಯ ಹೆಚ್ಚಾಗಲಿದೆ:

ಈ ವರ್ಷದಲ್ಲಿ ಕುಜನು ಮಂತ್ರಿಯಾಗಿರುವುದರಿಂದ ಕಲಹಗಳು, ಯುದ್ಧಗಳು, ಅಗ್ನಿಗಳು ಭಯಗಳು ಹೆಚ್ಚು, ದೇಶದಲ್ಲಿ ಯುದ್ಧಭಯ ಹೆಚ್ಚಾಗುತ್ತದೆ, ಊಹಿಸಲಾಗದ ಬದಲಾವಣೆಗಳು ಜನರಲ್ಲಿ ಭಯ ಹುಟ್ಟಿಸಿದರೂ, ಜನರ ಪರಿಸ್ಥಿತಿ ಸ್ಥಿರವಾಗಿರುತ್ತದೆ. ತೊಗರಿ, ಮೆಣಸಿನಕಾಯಿ ಮತ್ತು ಮೆಣಸಿಗೆ ಬೆಲೆ ಹೆಚ್ಚಾಗುತ್ತದೆ. ಚಂದ್ರನು ಸೇನಾಧಿಪತಿಯಾಗಿರುವುದರಿಂದ ರಾಜ್ಯಗಳ ವಿಬೇಧಗಳು ಜನಸಾಮಾನ್ಯರಲ್ಲಿ ಭಯ ಉಂಟಾಗುತ್ತದೆ,  ಸರಕಾರದ ಹಣ ದುರುಪಯೋಗ ಆಗುತ್ತದೆ,  ಸಮುದ್ರದಲ್ಲಿ ಅನೇಕ ಬದಲಾವಣೆಗಾಗಿ, ಹಡಗುಗಳ ಪ್ರಮಾದಗಳಿಂದ ಪ್ರಾಣಹಾನಿ ಸಂಭವಿಸುತ್ತದೆ. ಮಾನಸೀಕ ಬಲಹೀನತೆ ಎಲ್ಲಾ ರಂಗಗಳಲ್ಲಿ ಕಂಡು ಬರುತ್ತದೆ.

ಶುಕ್ರನು ಸಸ್ಯಾಧಿಪತಿಯಾಗಿರುವುದರಿಂದ ನೀರಾವರಿ ಮತ್ತು ಬಯಲು ಭೂಮಿಗಳಲ್ಲಿ ಉತ್ತಮ ಬೆಳೆ ಬರುತ್ತವೆ,  ದೇಶವು ಸುಭೀಕ್ಷೆಯಿಂದ ಕೂಡಿರುತ್ತದೆ. ಬಿಳಿ ಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಬುಧನು ಧಾನ್ಯಾಧಿಪತಿಯಾಗಿರುವುದರಿಂದ ಅಕ್ಕಿ, ಗೋಧಿ, ತೊಗರಿ ಸೇರಿದಂತೆ  ಬೆಲೆ ಹೆಚ್ಚಾಗುತ್ತದೆ, ಶೇಂಗಾ, ಈರುಳ್ಳಿ, ಆಲೂಗಡ್ಡೆ ಚೆನ್ನಾಗಿ ಬೆಳೆಯುತ್ತವೆ. ಧಾನ್ಯಾದಿಪತಿಯಾದ ಬುಧ ಆಗಿರುವುದರಿಂದ ಅಕ್ಕಿ, ಗೋಧಿ, ತೊಗರಿ ಎಲ್ಲಾ ಧಾನ್ಯಗಳ ಬೆಲೆ ಹೆಚ್ಚಾಗುತ್ತವೆ.

ರಾಜಕೀಯ ಕಲುಷಿತ, ರಾಜಕೀಯ ವ್ಯಾಪಾರ:

ಅರ್ಘಾಧಿಪತಿ ಚಂದ್ರನಾಗಿರುವುದರಿಂದ ರಾಜಕೀಯ ಕಲುಷಿತವಾಗಿ, ರಾಜಕೀಯ ವ್ಯಾಪಾರ ವಾಗುತ್ತದೆ, ಕುಲ, ಮತ ಮತ್ತು ವರ್ಗಗಳ ಬೇದಗಳು ಹೆಚ್ಚುತ್ತವೆ, ಅಶಾಂತಿ, ವಿಷಾದಗಳು, ಅನೈತಿಕೆ ಎದ್ದು ಕಾಣುತ್ತದೆ. ಮೇಘಾಧಿಪತಿ ಚಂದ್ರ ಆಗಿರುವುದರಿಂದ  ಅತಿಯಾದ ಮಳೆ ಜನರಲ್ಲಿ ಭೀತಿ ಹುಟ್ಟಿಸುತ್ತದೆ, ಆಲಿಕಲ್ಲು ಮಳೆಯಿಂದ ಬೆಳೆ ನಾಶ ಹೊಂದಲಿದೆ. ರಸಾಧಿಪತಿ ಸೂರ್ಯನಾಗಿರುವುದ ರಿಂದ ವಿಸ್ಫೋಟ ಸಂಬಂಧ ಘಟನೆಗಳು ಪ್ರಪಂಚಾದ್ಯಂತ ವ್ಯಾಪಾಕವಾಗಿ ನಡೆಯುತ್ತವೆ. ಹಿಂಸಾತ್ಮಕ ಘಟನೆಗಳು, ಉಗ್ರವಾದಿಗಳ ಕೃತ್ಯಗಳು ಮಹಾನಗರಗಳಲ್ಲಿ ಹೆಚ್ಚಾಗಲಿದೆ. ರಸಾಧಿಪತಿ ಶುಕ್ರನಾಗಿರುವು ದರಿಂದ ಕರ್ಪೂರ, ಶ್ರೀಗಂಧ, ಬಂಗಾರ, ಮುತ್ತು ವಸ್ತುಗಳ ಬೆಲೆಗಳು ಅಧಿಕವಾಗುತ್ತದೆ.

ಪ್ರಕೃತಿ ವೈಪರಿತ್ಯಗಳು ಹೆಚ್ಚುತ್ತವೆ, ಜಲ, ಅಗ್ನಿ ಪ್ರಳಯ, ಭೂಕಂಪಗಳು ಹೆಚ್ಚಾಗುತ್ತವೆ, ಪ್ರಕೃತಿ ವೈಪ ರಿತ್ಯಗಳು ಹೆಚ್ಚಾಗುತ್ತವೆ, ಅಮೆರಿಕದಲ್ಲಿ ಪ್ರಕೃತಿ, ವೈಪರಿತ್ಯಗಳು, ಜಪಾನಿನಲ್ಲಿ ಭೂಕಂಪನಗಳು, ನಗರಗಳಲ್ಲಿ ಜಲಪ್ರವಾಹಗಳು, ಬಿರುಗಾಳಿಯಿಂದ ಪ್ರಕೃತಿ ವೈಪರಿತ್ಯಗಳು, ಬೇಸಿಗೆಯ ಬಿಸಿಲು ಅಧಿಕವಾಗಿರುತ್ತದೆ. ಅಂಡಮಾನ್ ನಿಕೋಬರ್, ತಮಿಳುನಾಡಿನಲ್ಲಿ ಭೂಕಂಪನವಾಗಲಿದೆ.

ಈ ವರ್ಷದ ಪ್ರಮುಖ ಘಟನೆಗಳು:

ಪಾಕಿಸ್ತಾನ, ಚೈನಾ ಮತ್ತು ಭಾರತದ ಸರಹದ್ದಿನಲ್ಲಿ ವಿವಾದಗಳು ಹೆಚ್ಚುತ್ತವೆ, ಇದರಿಂದಾಗಿ ಉದ್ರಿಕ್ತ ಪರಿಸ್ಥಿತಿ ಉಂಟಾಗುತ್ತದೆ, ಅಮೇರಿಕಾಕ್ಕೆ ವಿರುದ್ಧವಾಗಿ ಪ್ರಪಂಚದ ಅನೇಕ ದೇಶಗಳು ತಲೆಯತ್ತುತ್ತವೆ. ಬಾಂಗ್ಲಾದೇಶಗಳ ಸರಿಹದ್ದು ಸಮಸ್ಯೆಗಳು ಹೆಚ್ಚುತ್ತವೆ, ಪ್ರವಾಸಿ ಭಾರತೀಯರಿಗೆ ಕಷ್ಟಕರ ಕಾಲ ಎದುರಾಗಿಲಿದೆ, ಭಾರತದಲ್ಲಿ ಸಿಕ್ಕಿಂ, ಅಸ್ಸಾಂ, ಮೇಘಾಲಯ, ಮಣಿಪುರಗಳ  ಸರಕಾರಕ್ಕೆ ಹೋರಾಟಗಳಿಂದ ಅಶಾಂತಿ ಜಗಳ ಹೆಚ್ಚಾಗುತ್ತವೆ. ವಾಣಿಜ್ಯ ರಂಗದಲ್ಲಿ ಭಾರತವು ಉನ್ನತ ಸ್ಥಾನವನ್ನು ಪಡೆಯುತ್ತದೆ, ಆಶ್ಚರ್ಯ ಪಡುವಂತಹ ಹಗರಣಗಳು ಬೆಳಕಿಗೆ ಬರುತ್ತವೆ, ಇಸ್ರೋ ಹೊಸ ಪ್ರಯೋಗಗಳಿಂದ ಉನ್ನತಿ ಹೊಂದುತ್ತದೆ. ಒಂದು ಜಾತಿಯ ಪಕ್ಷ ದೇಶದಿಂದ ಕಾಣೆಯಾಗುತ್ತದೆ ಎಂಬಿತ್ಯಾದಿ ಪ್ರಮುಖ ಅಂಶಗಳು  ಶ್ರೀ ಉಮಾಮಹೇಶ್ವರ ಪಂಚಾಂಗದಲ್ಲಿ ಪಂಡಿತ್ ಮಠಂ ಗುರುಪ್ರಸಾದ್ ಅವರು ಪ್ರಸ್ತಾಪ ಮಾಡಿದ್ದಾರೆ.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ