ಇಂಡಿ : ಕನ್ನಡ ನಮ್ಮೆಲ್ಲರ ಉಸಿರಾಗಲಿ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾತಿನಿಧಿಕ ಸಂಸ್ಥೆಯಾಗಿದೆ. ನಾಡು-ನುಡಿಗಾಗಿ ಹಗಲಿರಳು ಕನ್ನಡ ಭಾಷೆಯ ಅಭಿಮಾನ ಮೂಡಿಸುವಂತಹ ಕಾಯ೯ ಶ್ಲಾಘನೀಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಇಂಡಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ
೧೧೨ ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರಕ್ಕೆ ಪುಷ್ಪ ನಮನ ಅಪಿ೯ಸಿ ಮಾತನಾಡುತ್ತಾ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಹೆಮ್ಮೆಯ ರಾಜ್ಯ ನಮ್ಮದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯರಾಗುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಬೇಕೆಂದರು.
ಕವಿಯಿತ್ರಿ ಹಾಗೂ ಗೌರವ ಕಾರ್ಯದರ್ಶಿಗಳಾದ ಪಾವ೯ತಿ ಸೊನ್ನದ
ಮಾತನಾಡಿ ವಚನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಧಾರ. ಕನ್ನಡ ನೆಲ-ಜಲ ಕಾಪಾಡುವ ನಮ್ಮೆಲ್ಲರ ಹೊಣೆಯಾಗಿದೆ.
ಕನ್ನಡಿಗರಾದ ನಾವುಗಳು ಕನ್ನಡ ಕಟ್ಟೋಣ ಮತ್ತು ಬೆಳೆಸೋಣ ಎಂದರು. ಇಂಡಿ ಶಿಕ್ಷಕ ಸಂಘದ ಅಧ್ಯಕ್ಷ ವಾಯ್ ಟಿ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳು ನಿರಂತರ ನಡೆಯುತ್ತಿರುವದರಿಂದ ಕನ್ನಡ ಸಾಹಿತ್ಯದ ವಾತಾವರಣ ನಿರ್ಮಾಣವಾಗಿದೆ.
ಇಂಡಿಯಲ್ಲಿ ಸಾಹಿತ್ಯಾಸಕ್ತರು ಇರುವದರಿಂದ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸಬೇಕು. ಎಂದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಅಹಮ್ಮದ ವಾಲಿಕಾರ. ಆನಂದ ಕೆಂಭಾವಿ. ಜಯಶ್ರೀ ತೆಲಗಿ. ಎಸಿ ಎಟಿ ನೌಕರರ ಸಂಘ ಅಧ್ಯಕ್ಷರಾದ ಬಿ ಎಂ ವಠಾರ. ಬಿ ಬಿ ಸುತಾರ. ಖಲೀಲ ಅತ್ತಾರ. ಅರವಿಂದ ಮೇತ್ರಿ. ಕಲ್ಲನಗೌಡ ಬಿರಾದಾರ. ಗೀತಾ ಹೀರೇಮಾಳ. ಶಾಕೀರ ಪಠಾಣ. ಮಹಮ್ಮದರಪೀಕ ಬಗಲಿ ಮುಂತಾದವರು ಉಪಸ್ಥಿತರಿದ್ದರು