Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊನ್ನಗುಂದ ಸಂಸ್ಕೃತಿ ಬಳಗದಿಂದ ೫ ನಾಟಕಗಳ ಪ್ರದರ್ಶನ ಆಯೋಜನೆ

ಹುನಗುಂದ; ನಗರದಲ್ಲಿ ಬೆಳೆದು ಬಂದ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವ ಪೀಳಿಗೆಗೆ ಮನವರಿಕೆಯಾಗುವ ನಿಟ್ಟಿನಲ್ಲಿ ಕಳೆದ ೯ವರ್ಷಗಳಿಂದ ಸಮಾನ ಮನ:ಸ್ಥಿತಿಯ ತಂಡವು ಅಸ್ಥಿತ್ವಕ್ಕೆ ತಂದ ಹೊನ್ನಗುಂದ ಸಂಸ್ಕೃತಿ ಬಳಗ ಎಂಬ ಶಿರೋನಾಮೆಯ ಹೊಸಬ ಬಳಗವು ಈ ವರ್ಷವೂ ೨೦೨೬ರ ಜನೇವರಿ ೬ರಿಂದ ೧೦ರವರೆಗೆ ಬಳ್ಳಾರಿಯ ಧಾತ್ರೆ ಮತ್ತು ಕಾರ್ಕಳದ ರಂಗಾಯಣ ತಂಡಗಳಿಂದ ಪ್ರತಿ ದಿನ ಸಂಜೆ ೬-೩೬ಕ್ಕೆ ದಿನಕ್ಕೆ ಒಂದರಂತೆ ಒಟ್ಟು ೫ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಹೊಸಬ ತಂಡದ ಹಿರಿಯ ನಿರ್ದೇಶಕ ಬಡ್ಸ್ ಕಾರ್‍ಯದರ್ಶಿ ಮಹಾಂತೇಶ ಅಗಸಿಮುಂದಿನ ಹೇಳಿದರು.

ಇಲ್ಲಿನ ಬಡ್ಸ್ ಸಂಸ್ಥೆಯಲ್ಲಿ ಹೊಸಬ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಕಲಿಯುಗ ಭರಾಟೆಯಲ್ಲಿ ಮರೆಯಾಗುತ್ತಿರುವ ರಂಗ ಚಟುವಟಿಕೆಗಳಿಗೆ ಪುನ:ಶ್ಚೇತನ ಮತ್ತು ಕಲೆಯನ್ನು ಉಳಿಸಿ ಬೆಳೆಸುವದು ಹೊಸಬದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಈ ಸಂಭ್ರಮದ ನಾಟಕೋತ್ಸವಕ್ಕೆ ಪ್ರಾಯೋಜಕರು ಮುಖ್ಯ ಪಾತ್ರವಹಿಸುವತ್ತಿದ್ದಾರೆ. ಉತ್ಸವಕ್ಕೆ ಬೇಕಾಗುವ ಆರ್ಥಿಕ ವೆಚ್ಚಕ್ಕೆ ನಗರದ ಕಲೆಯನ್ನು ಪ್ರೀತಿಸುವ ರಂಗಾಸಕ್ತರು ಪ್ರಾಯೋಜಕ ರೂಪದಲ್ಲಿ ಸಹಾಯ ಸಹಕಾರ ನೀಡುತ್ತಿದ್ದು, ಈ ಹಿನ್ನೆಲೆ ಪ್ರತಿವರ್ಷದ ನಾಟಕೋತ್ಸವ ಮತ್ತು ಇನ್ನಿತರ ಕಾರ್‍ಯಕ್ರಮಗಳು ತಪ್ಪದೆ ಯಶಸ್ವಿಯಾಗಿ ನಡೆಯುತ್ತಿವೆ ಎಂದರು.

ಹೊಸಬದ ನಿರ್ದೇಶಕ ಮತ್ತು ನಾಟಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸುವ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ ನಗರದ ಚಿತ್ತರಗಿ ಸಂಸ್ಥಾನಮಠ ಹುನಗುಂದದ ಗುರುಮಹಾಂತ ಸ್ವಾಮಿಗಳು ಮತ್ತು ಗಚ್ಚಿನಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯವಹಿಸುವರು. ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ನಾಟಕೋತ್ಸವವನ್ನು ಉದ್ಘಾಟಿಸುವರು. ಪೊಲಿಸ್ ಉಪಾಧೀಕ್ಷಕ ಸಂತೋಷ ಬನ್ನಟ್ಟಿ, ವೃತ್ತ ನಿರೀಕ್ಷಕ ಶರಣಬಸ್ಪ ಆಜೂರ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈಯಾಧಿಕಾರಿ ಡಾ. ಮಂಜುನಾಥ ಅಂಕೋಲ್ಕರ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಹೆಸ್ಕಾಂ ಶಾಖಾಧಿಕಾರಿ ದತ್ತು ದಾಯಿಗುಡಿ, ರಂಗಕರ್ಮಿ ತಾಲೂಕ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮತ್ತು ಹಿರಿಯ ಪತ್ರಕರ್ತ ವರ್ಷದ ಸಂಚಾಲಕ ವೀರೇಶ ಕುರ್ತಕೋಟಿ ಪಾಲ್ಗೊಳ್ಳಲಿದ್ದಾರೆ.

೫ನಾಟಕಗಳ ಪ್ರವೇಶ ಉಚಿತವಾಗಿದ್ದು ಜನೇವರಿ ೬ರಂದು ೬-೩೬ಕ್ಕೆ ಸಿರಿಗೇರೆ ಬಳ್ಳಾರಿಯ ಧಾತ್ರಿ ರಂಗಸಂಸ್ಥೆಯ ಸಂಸಾರದಲ್ಲಿ ಸ ನಿ ದ ಪ, ೭ರಂದು ಶಿವಶರಣ ಹರಳಯ್ಯ ಮತ್ತು ೮ರಂದು ಯಕ್ಷ ರಂಗಾಯಣ ಕಾರ್ಕಳದ ಗುಲಾಮನ ಸ್ವಾತಂತ್ರ್ಯ ಯಾತ್ರೆ, ೯ರಂದು ಸೋಮಿಯ ಸೌಭಾಗ್ಯ ಮತ್ತು ೧೦ರಂದು ಮಹಾತ್ಮರ ಬರವಿಗಾಗಿ ಹೀಗೆ ನಾಟಕಗಳು ಪ್ರದರ್ಶನಗೋಳ್ಳಲಿವೆ ಎಂದು ಡಾ. ಕಡಪಟ್ಟಿ ತಿಳಿಸಿದರು. ತಂಡದ ನಿರ್ದೇಶಕರಾದ ಶೋಕ ಬಾವವಿಕಟ್ಟಿ, ವಾದಿರಾಜ ಗುಡ್ಡದ, ಐ.ಎಚ್. ನಾಯಕ, ಶಿವಬಸವ ಅಂಗಡಿ ಮತ್ತು ಚನ್ನಕೇಶವ ಅವರಾದಿ ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ