Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ದಮನಿತ ಹಿಂದುಳಿದ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು : ಡಾ. ಮುಖ್ಯಮಂತ್ರಿ ಚಂದ್ರು 


ಮೂಡಲಗಿ : ದಮನಿತ ಹಾಗೂ ಹಿಂದುಳಿದ ಜಾತಿಗಳ ಹಕ್ಕುಗಳು ಮತ್ತು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಬೆಳಗಾವಿಯಿಂದಲೇ ರಾಜ್ಯವ್ಯಾಪಿ ಹೋರಾಟಕ್ಕೆ ಚಾಲನೆ ನೀಡುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಚಲನಚಿತ್ರ ನಟ, ಮಾಜಿ ಶಾಸಕ ಹಾಗೂ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.
ಶನಿವಾರದಂದು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್. ಸೋನವಾಲ್ಕರ ಕಲ್ಯಾಣ ಮಂಟಪದಲ್ಲಿ  ಕರ್ನಾಟಕ ರಾಜ್ಯ ದಮನಿತ ಹಿಂದುಳಿದ ಜಾತಿಗಳ ಒಕ್ಕೂಟ, ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ದಮನಿತ ಹಿಂದುಳಿದ ಜಾತಿಗಳ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಮಾದರಿಯಲ್ಲಿ ದಮನಿತ ಹಿಂದುಳಿದ ಜಾತಿಗಳಿಗೂ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಪ್ರಸ್ತುತ ಜನಗಣತಿ ಪ್ರಕ್ರಿಯೆ ನಡೆಯುತ್ತಿದ್ದು, ಹಿಂದುಳಿದ ಜಾತಿಗಳ ನಿಖರ ಜನಸಂಖ್ಯೆಯ ಅಂಕಿ-ಅಂಶಗಳು ಲಭ್ಯವಾದಾಗ ಮಾತ್ರ ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರ್ ಮಾತನಾಡಿ, ಸಮಾನತೆಯ ಆಶಯ ಸಾಕಾರಗೊಳ್ಳಬೇಕಾದರೆ ದಮನಿತ ಹಿಂದುಳಿದ ಜಾತಿಗಳ ಜನರು ತಮ್ಮ ಮಕ್ಕಳ ಭವಿ?ಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕು. ರಾಜಕೀಯ ಕ್ಷೇತ್ರದಲ್ಲಿ ಈ ಸಮುದಾಯಗಳಿಗೆ ದೊರೆಯುತ್ತಿರುವ ಪ್ರಾತಿನಿಧ್ಯವನ್ನು ಅವಲೋಕಿಸಬೇಕು. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಈ ವರ್ಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು. ಸೋಲು-ಗೆಲುವಿನ ಲೆಕ್ಕಾಚಾರವಿಲ್ಲದೆ ಮತ್ತೊಮ್ಮೆ ಅವಕಾಶ ಕಲ್ಪಿಸುವ ಮೂಲಕ ಸಮುದಾಯದ ನಾಯಕತ್ವ ಬೆಳೆಯಲು ಸಹಕರಿಸಬೇಕು ಎಂದರು.
ಸುರೇಶ್ ಎಂ. ಲಾತೂರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್. ಲಿಂಗಪ್ಪ ಮಾತನಾಡಿ, ದಮನಿತ ಹಿಂದುಳಿದ ಜಾತಿಗಳ ಒಕ್ಕೂಟವು ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಜಿಲ್ಲಾವಾರು ಸಮಾವೇಶಗಳನ್ನು ಆಯೋಜಿಸುತ್ತಿದೆ. ಅನೇಕ ಹಿಂದುಳಿದ ಜಾತಿಗಳು ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ, ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಂಘಟಿತರಾಗುವ ಅಗತ್ಯವಿದೆ ಎಂದರು.
ಸಮಾವೇಶದಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷೆ ಅಂಬಿಕಾ ಜಾಲಿಗರ, ಪ್ರಧಾನ ಕಾರ್ಯದರ್ಶಿ ಸಂದೇಶ ಕೆ.ಪಿ., ಕಾರ್ಯದರ್ಶಿ ಮಾಲತಿ ಮಡಿವಾಳ, ರಾಮಪ್ಪ ಹಂದಿಗುಂದ, ಈರಪ್ಪ ಬನ್ನೂರ, ವಿ? ಲಾತೂರ, ಶಿವಪ್ಪ ಅಟಮಟ್ಟಿ, ದೇವೇಂದ್ರ ಲಾತೂರ, ಪರಸಪ್ಪ ಬಬಲಿ, ಬಸವರಾಜ ಮಾಳೆದ, ಸುಭಾಸ ಗೊಡ್ಯಾಗೋಳ ಸೇರಿದಂತೆ ವಿವಿಧ ಹಿಂದುಳಿದ ಜಾತಿಗಳ ಮುಖಂಡರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಸುಳೇಭಾವಿಯಲ್ಲಿ ನೂತನ ‘ಬನಶ್ರೀ ಭವನ’ ಉದ್ಘಾಟನೆ; ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲ*ಶೀತಲ ಕುಂಬಾರ ಅವರಿಗೆ “ಹೆಮ್ಮೆಯ ಕರ್ನಾಟಕ ರತ್ನ” ಪ್ರಶಸ್ತಿ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಜ್ಯೋತಿ ಮಾಳಿಗೆ ಪ್ರಥಮ ಬಹುಮಾನಭಾರತೀಯ ಪರಂಪರೆ ಸಂಪ್ರದಾಯ ಉಳಿಸಿ ಬೆಳೆಸಬೇಕು - ಕಾಶಿ ಶ್ರೀಸತೀಶ್ ಪ್ರತಿಭಾ ಪುರಸ್ಕಾರದಲ್ಲಿ ಸಂಕೇಶ್ವರ ಕನ್ಯಾ ಶಾಲೆಗೆ ಪ್ರಥಮ ಸ್ಥಾನ: ₹50,000 ನಗದು ಬಹುಮಾನ ವಾಯುಮಾಲಿನ್ಯ  ನಿಯಂತ್ರಣ ಮಾಸಾಚರಣೆ :  25 ರಂದು ಅಥಣಿ ಪಟ್ಟಣದಲ್ಲಿ  ಜನ ಜಾಗೃತಿ ಕಾರ್ಯಕ್ರಮ   ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸೇವಾ ಸಂಘದಿಂದ  ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಭೂಮಿ ಪೂಜೆ/ ಸಚಿವ ಲಕ್ಷ್ಮಣ ಸವದಿ ಸಲಹೆ ಜಗಜ್ಯೋತಿ ಬಸವಣ್ಣನವರ ಅವಹೇಳನ ಸಹಿಸುವ ಪ್ರಶ್ನೆಯೇ ಇಲ್ಲ : ಸಿದ್ದನಗೌಡರ ಡಿಸೆಂಬರ್  ೧೨ಕ್ಕೆ  ಘಟಪ್ರಭಾದಲ್ಲಿ ತಾಲೂಕು ಮಟ್ಟದ ಕಸಾಪ ಸಮ್ಮೇಳನಕಾಂಗ್ರೆಸ್ ಸರಕಾರ ರಾಜ್ಯದ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ"