Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿಯಲ್ಲಿ ಕನ್ನಡ ಕಡ್ಡಾಯಕ್ಕೆ ವಿರೋಧ: ಸಂಗಮೇಶ ಎನ್ ಜವಾದಿ ಖಂಡನೆ




ಬೀದರ/ಚಿಟಗುಪ್ಪಾ :  ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬಹಳಷ್ಟು ಅನೇಕ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ. ಕರ್ನಾಟಕದಲ್ಲಿಯೇ ಕನ್ನಡ ಉಳಿಯದೆ ಹೋದರೆ ಬೇರೆ ಇನ್ನೆಲ್ಲಿ ಉಳಿಯಲು ಸಾಧ್ಯ? ಈ ಹಿನ್ನೆಲೆಯಲ್ಲಿ ಪ್ರಯತ್ನಗಳು ನಡೆಯುತ್ತಿರುವಾಗ ಕೆಲ ಮುಖಂಡರು ಬೆಳಗಾವಿಯ ಮೇಯರ್ ಮಂಗೇಶ ಪವಾರ ಅವರಿಗೆ ‘ಬೆಳಗಾವಿ ನಗರ’ದಲ್ಲಿ ಕನ್ನಡ ಕಡ್ಡಾಯ ಜಾರಿ ಮಾಡುವುದನ್ನು ವಿರೋಧಿಸಿ ಮನವಿ ಪತ್ರ ಸಲ್ಲಿಸಿರುವುದು ಅತ್ಯಂತ ಆಘಾತಕಾರಿಯಾದ ಘಟನೆಯಾಗಿದೆ


ಎಂದು ಬರಹಗಾರರು , ಕನ್ನಡ ಹೋರಾಟಗಾರರಾದ ಸಂಗಮೇಶ ಎನ್ ಜವಾದಿಯವರು ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಕನ್ನಡ ಉಳಿವು ಮತ್ತು ಬೆಳವಣಿಗೆಗೆ ಗಡಿ ಭಾಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ  ಸಮಸ್ಯೆಗಳು,ಕುಂಟು ನೆಪಗಳು, ಕಂಟಕಗಳು ನಿರಂತರವಾಗಿ ಮೂಡಿ ಬರುತ್ತಿದ್ದು  ಕರ್ನಾಟಕ ಸರ್ಕಾರ ಇದನ್ನು ಎದುರಿಸುವಲ್ಲಿ ದೃಢವಾದ ಇಚ್ಚಾ ಶಕ್ತಿಯನ್ನು ತೋರಬೇಕೆಂದು ಅವರು ಹೇಳಿದ್ದಾರೆ.


ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕರುನಾಡಿನ ಅಚ್ಚಗನ್ನಡದ ನೆಲ ಬೆಳಗಾವಿ. ಬೆಳಗಾವಿಯು ವಿಧಾನ ಮಂಡಲದ ಅಧಿವೇಶನದ ಸ್ಥಳವಾಗುವ ಮೂಲಕ ಎರಡನೆಯ ರಾಜಧಾನಿ ಎನಿಸಿಕೊಂಡಿದೆ. ಆ ಜಿಲ್ಲೆಯು ಅತ್ಯಂತ ಪುರಾತನ ಜಿಲ್ಲೆ ಎಂಬ ಕೀರ್ತಿಗೆ ಭಾಜನವಾಗಿದೆ.


ಅಲ್ಲಿನ ತಾಮ್ರದ ಫಲಕಗಳ ಶಾಸನಗಳ ಪ್ರಕಾರ, ಒಂದೊಮ್ಮೆ  ಕದಂಬ ರಾಜರುಗಳ ರಾಜಧಾನಿಯಾಗಿತ್ತು ಎನ್ನುವುದು ಸಹ ತಿಳಿದು ಬರುತ್ತದೆ. ಇಂತಹ ಕನ್ನಡಪರ ಹಿನ್ನೆಲೆಯುಳ್ಳ ಸ್ಥಳವನ್ನು ಕೆಲ ಕನ್ನಡ ಭಾಷಾ ದ್ರೋಹಿ ಸಂಘಟನೆಗಳು ತಮ್ಮ ಪುಂಡಾಟಿಕೆ ಸ್ಥಳವಾಗಿಸಿ ಕೊಂಡಿರುವುದು ನಿಜಕ್ಕೂ ಬೇಸರದ ಹಾಗೂ ದುರಂತದ ಸಂಗತಿಯಾಗಿದೆ. ಕಾರಣ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಬೆಳಗಾವಿಯಲ್ಲಿ ಕನ್ನಡಿಗರು ತಮ್ಮ ಹಕ್ಕುಗಳನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ಈ ದಿಸೆಯಲ್ಲಿ ಕನ್ನಡ ಪರ ಇರುವ ನಾಡಿನ ಎಲ್ಲಾ ಸಂಘಟನೆಗಳು ಒಂದಾಗಿ, ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಸಂಗಮೇಶ ಎನ್ ಜವಾದಿ ವಿನಂತಿಸಿದ್ದಾರೆ.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ