ಬಳ್ಳಾರಿಯ ಹಿರಿಯ ಬಾಲಕರ ಫುಟ್‌ಬಾಲ್ ಕ್ರೀಡಾ ವಸತಿ ನಿಲಯವನ್ನು ಸ್ಥಳಾಂತರಿಸುವ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ, ಕಲ್ಯಾಣ ಕರ್ನಾಟಕ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ (KKPEA) ನೇತೃತ್ವದಲ್ಲಿ ಜಿಲ್ಲಾಅಧಿಕಾರಿಗಳ ಮೂಲಕ ಕೀಡಾ ಸಚಿವರಿಗೆ ಹಾಗೂ ಕೀಡಾ ಪ್ರಾಧಿಕಾಠ ಕ್ಕೆ ಅಧಿಕೃತ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿ.ಎಸ್.ಕೆ.ಯು. ವಿವಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿಧರ್ ಕಲ್ಲೂರು, ಸಂಘದ ಅಧ್ಯಕ್ಷರಾದ ಸಂತೋಷ್ ರೆಡ್ಡಿ, ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪಂಪನಗೌಡ, ಉಪನ್ಯಾಸಕರಾದ ಶ್ರೀ ವಿಜಯ್ ಭಾಸ್ಕರ್, ಮೋಹನ್ ಎ.ವಿ. ಹಾಗೂ ವಿ.ಎಸ್.ಕೆ.ಯು. ಎಂ.ಪಿ.ಇಡಿ. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು. ನಮ್ಮ ಭಾಗದ ಕ್ರೀಡಾ ಭವಿಷ್ಯವನ್ನು ಉಳಿಸಲು ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು