Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರಂಭಾವಸ್ಥೆಗೊಂದು ಯೋಗ ಪಥ-ಪುಸ್ತಕ ಬಿಡುಗಡೆ


ಬಳ್ಳಾರಿ,23:  ನಗರದ ಯೋಗಶ್ರೀ ಅಯ್ಯಂಗಾರ್‌ ಯೋಗ ಕೇಂದ್ರವು ಆರಂಭಗೊಂಡು ಹತ್ತು ವರ್ಷಗಳನ್ನು ಪೂರೈಸಿ ದಶಮಾನೋತ್ಸವ ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಗಳಾದ ರಾಜಶೇಖರ ಜೀ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತೀಯ ಋಷಿಮುನಿಗಳು ನೀಡಿದ ಅನೇಕ ಕೊಡುಗೆಗಳಲ್ಲಿ ಯೋಗ ಒಂದಾಗಿದ್ದು, ಪ್ರಸ್ತುತ ಸಮಜದಲ್ಲಿ ಎಲ್ಲರಿಗೂ ಅತ್ಯಂತ ಅವಶ್ಯವಾಗಿದೆ. ತಂತ್ರಜ್ಞಾನದ ಉತ್ತುಂಗದಲ್ಲಿರುವ ನಾವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಯೋಗವಿದ್ಯೆಯು ಜೀವನ ಒಂದು ಕಲೆಯಾಗಿದ್ದು ಎಲ್ಲರೂ ಅದನ್ನು ಅನುಸರಿಸಬಹುದಾಗಿದೆ. ಯೋಗ ಕೇಂದ್ರವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತಿದ್ದು, ಇನ್ನೂ ಎತ್ತರ ಬೆಳೆಯಲಿ ಎಂದು ಆಶಿಸಿದರು.


ಯೋಗಕೇಂದ್ರದ ಸಂಸ್ಥಾಪಕರು ಮತ್ತು ಲೇಖಕರಾದ ವಿರೂಪಾಕ್ಷ ಡಾಣಿ ಯೋಗಕೇಂದ್ರ ಮತ್ತು ಪುಸ್ತಕ ಬಗ್ಗೆ ಮಾತನಾಡಿದರು. ನಮ್ಮ ಯೋಗಕೇಂದ್ರವು ಜನರಲ್ಲಿ ಆರೋಗ್ಯದ ಕಾಳಜಿಯನ್ನು ಮೂಡಿಸುವುದಲ್ಲದೆ ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗದಿನದಂದು ಉಚಿತ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಬಿಡುಗಡೆಗೊಂಡ ಪುಸ್ತಕವು ಎಲ್ಲರಿಗೂ ಅತ್ಯಂತ ಉಪಯುಕ್ತವಾಗಿದೆ. 300ಕ್ಕೂ ಹೆಚ್ಚು ಆಸನಗಳ ಚಿತ್ರಗಳಿದ್ದು, ಸರಿಯಾದ ವಿವರಣೆ ಮತ್ತು ಎಚ್ಚರಿಕೆ ಹಾಗೂ ಅವುಗಳಿಂದಾಗುವ ಪ್ರಯೋಜನಗಳನ್ನು ವಿವರಿಸಿದೆ. ಆರಂಭದ ಅಭ್ಯಾಸಕರಿಗೆ ಇದು ಉತ್ತಮ ಕೈಗನ್ನಡಿಯಂತಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಎಲ್ಲಾ ಯೋಗಸಾಧಕರು ಆಸನಗಳ ಪ್ರದರ್ಶನ ಮಾಡಿದರು. ಕಾರ್ಯಕ್ರಮವನ್ನು ವಿಕ್ರಮ್‌.ಕೆ  ಮತ್ತು ಶ್ರೀನಿವಾಸ್‌ ನಿರ್ವಹಿಸಿದರು. ಮೌಕ್ತಿಕ ಮತ್ತು ಹರ್ಷಿಣಿ ಪ್ರಾರ್ಥಸಿದರು. ಪ್ರಸ್ತಾವನೆ ಶ್ರೀನಿವಾಸ್‌ ರಾವ್‌, ಸ್ವಾಗತ ಪರಿಚಯ ಸುಜಾತ ಪೋಲಾ ವಂದನಾರ್ಪಣೆ ವಿಜಯಲಕ್ಷ್ಮೀ ಎಸ್‌ ಮಾಡಿದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ