Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ 18ರಂದು ತಿಪ್ಪೇಸ್ವಾಮಿ ತಾತನವರ ಏಳನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹಗಳು 

ಬಳ್ಳಾರಿ ಮೇ 12: ತಾಲೂಕಿನ ಮೋಕ ಹೋಬಳಿಯ ದಾಸರ ನಾಗನಹಳ್ಳಿ ಗ್ರಾಮದ ಶ್ರೀಮದ್ ಉಜ್ಜಯಿನಿ ಖಾಸ ಶಾಖ ಮಠ, ಶ್ರೀ ಗುರು ಮರುಳ ಸಿದ್ದಾಶ್ರಮ ಶ್ರೀ ನಂಜುಂಡೇಶ್ವರ ಜನ ಸೇವಾ ಕಲ್ಯಾಣ ಟ್ರಸ್ಟ್ ವತಿಯಿಂದ ಮಠದ ಪರಮಪೂಜ್ಯ ತಿಪ್ಪೇಸ್ವಾಮಿ ತಾತನವರ ಏಳನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಉಜ್ಜಯಿನಿ  ಮತ್ತು ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ  ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಸದ್ಧರ್ಮ ಶಿರೋಮಣಿ ಪೂಜ್ಯಶ್ರೀ ನಂಜುಂಡೇಶ್ವರ ತಾತನವರು ತಿಳಿಸಿದ್ದಾರೆ.


 ಅವರು ಇಂದು ಮಠದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಮೇ 17 ರಂದು ಲೋಕಕಲ್ಯಾಣಕ್ಕಾಗಿ ಗಣಪತಿ ಹೋಮ ರುದ್ರ ಹೋಮ ಮತ್ತು ಮಹಾ ಚಂಡಿ ಹೋಮ ನಡೆಸಲಾಗುವುದು ಮತ್ತು ಮೇ 18ರಂದು ಶ್ರೀಮದ್ ಉಜ್ಜಯಿನಿ ಜಗದ್ಗುರುಗಳು ಮತ್ತು ಶ್ರೀಮದ್ ಕಾಶಿ ಜಗದ್ಗುರುಗಳ ಅವರ

 ಅಡ್ಡ ಪಲ್ಲಕ್ಕಿ ಮಹೋತ್ಸವ ಸಾಮೂಹಿಕ ವಿವಾಹಗಳು ಜೊತೆಗೆ ಆ ದಿನ 501 ಮಂಗಳಮುಖಿಯರಿಗೆ ವಿಶೇಷವಾಗಿ ಉಡಿ ತುಂಬ ಕಾರ್ಯಕ್ರಮವನ್ನು ನಡೆಸಲಾಗುವುದು ಮತ್ತು ಕೊನೆಯ ದಿನ ಮೇ 19ರಂದು ಉಜ್ಜಯಿನಿ ಜಗದ್ಗುರುಗಳವರಿಂದ ಇಷ್ಟು ಲಿಂಗ ಮಹಾಪೂಜೆ ಕಾರ್ಯಕ್ರಮ 108 ಜಂಗಮ ವಟುಗಳಿಗೆ ಅಯ್ಯೋ ಚಾರ ದೀಕ್ಷೆ, 1008 ಜಂಗಮ ಗಣರಾಧನೆ ಮತ್ತು 3501

ಸುಮಂಗಳಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಅಂದು ಸಂಜೆ ಧರ್ಮಸಭೆಯನ್ನು ನಡೆಸಲಾಗುವುದು.


ಈ ಅಭೂತ ಪೂರ್ವ ಕಾರ್ಯಕ್ರಮಕ್ಕೆ ಮಠದ  ಸಮಸ್ತ ಭಕ್ತಾದಿಗಳು ತಮ್ಮ ಸಕುಟುಂಬದ ಪರಿವಾರ ಸಮೇತರಾಗಿ ಆಗಮಿಸಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನು-ಮನ ದನದೊಂದಿಗೆ ಸೇವೆ ಸಲ್ಲಿಸಿ ನಾಡಿನ ಹರ ಗುರು ಚರಮೂರ್ತಿಗಳವರ ಆಶೀರ್ವಾದ ಪಡೆದು ಶ್ರೀ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಸದ್ಧರ್ಮ ಶಿರೋಮಣಿ ಶ್ರೀ ನಂಜುಂಡೇಶ್ವರ ತಾತನವರು ತಿಳಿಸಿದ್ದಾರೆ.


 ಅಷ್ಟೇ ಅಲ್ಲದೆ ಮೇ 19ರಂದು ಶ್ರೀ ಮರುಳಸಿದ್ದಾಶ್ರಮ ರಜತ ಮಹೋತ್ಸವದ ಅಂಗವಾಗಿ ಜಗದ್ಗುರು ದ್ವಯರಿಂದ ಶ್ರೀ ಪೂಜ್ಯರ ಧರ್ಮ ಅಧಿಕಾರ ದೀಕ್ಷ ಮಹೋತ್ಸವವನ್ನು ಪೂಜ್ಯಶ್ರೀ ರುದ್ರಮುನಿ ತಾತನವರು ದಾಸರಹಳ್ಳಿ ನಾಗೆನಹಳ್ಳಿ ಮಠ ಇವರ ಅಧ್ಯಕ್ಷತೆಯಲ್ಲಿ ಜರುಗಲಿದೆ.


 ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸುವವರು ಸರ್ಕಾರದ ಎಲ್ಲಾ ನಿಯಮ ನಿಬಂಧನೆಗಳನ್ನು ಪೂರೈಸಬೇಕು ವಯಸ್ಸಿನ ಮತ್ತು ವಿಳಾಸಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿ ಮುಂಚಿತವಾಗಿ  ನೋಂದಣಿಯನ್ನು ಮಾಡಿಸಿಕೊಳ್ಳಬೇಕೆಂದರು.


 ಈ ಪತ್ರಿಕಾಗೋಷ್ಠಿಯಲ್ಲಿ ಮರಿಸ್ವಾಮಿಗಳಾದ ಚಾಮರಾಜಸ್ವಾಮಿ, ಮಠದ ಭಕ್ತಾದಿಗಳಾದ, ರಮೇಶ್ ಉಪ್ಪಾರ್, ದುರ್ಗಪ್ಪ, ಸಂತೋಷ್, ಅಂಬರೀಶ್, ರಮೇಶ್, ಅರವಿಂದ್ ಸೇರಿದಂತೆ ಇತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ