Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜುಲೈ 1 ರಂದು ಪತ್ರಕರ್ತರ ಹಬ್ಬದ ಅದ್ದೂರಿ ಆಚರಣೆಗೆ ಸಕಲ ಸಿದ್ದತೆ: ಯಾಳ್ಪಿ ವಲಿಭಾಷ

ಬಳ್ಳಾರಿ ಜೂನ್ 30  ಪ್ರತಿ ವರ್ಷದಂತೆ ಈ ವರ್ಷವೂ ಪತ್ರಕರ್ತರ ಹಬ್ಬವನ್ನು ಜು.1 ರಂದು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಭಾನುವಾರ, ಕಾನಿಪ ಜಿಲ್ಲಾ ಸಮಿತಿಯ ಅಧ್ಯಕ್ಷ ಯಾಲ್ಪಿ ವಲಿಭಾಷಾ, ಉಪಾಧ್ಯಕ್ಷ ಕೆ. ಬಜಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ರವಿ ಕುಮಾರ್, ಕಾರ್ಯದರ್ಶಿ ಪಿ.ರಘುರಾಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಜಂಬುನಾಥ್, ಎಂ.ವಿ.ಜೋಶಿ, ಪ್ರವೀಣ್ ರಾಜ್, ಪಂಪನಗೌಡ ಸೇರಿದಂತೆ ಎಲ್ಲ ಪತ್ರಕರ್ತರ ಸಮ್ಮುಖದಲ್ಲಿ ಪತ್ರಿಕಾ ದಿನಾಚರಣೆ ಅದ್ದೂರಿ ಆಚರಣೆ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಗಣೇಶ್ ಇನಾಂದಾರ್, ಹನುಮೇಶ ರಾವ್, ಗಿರೀಶ್ ಕುಮಾರ್ ಗೌಡ ಸೇರಿದಂತೆ ಎಲ್ಲ ಮಾಧ್ಯಮ ಮಿತ್ರರು ಕಾರ್ಯಕ್ರಮದ ರೂಪರೇಶದ ಕುರಿತು ಚರ್ಚೆ ನಡೆಸಿದರು. ಪತ್ರಕರ್ತರ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಲ್ಪಿ ವಲಿಭಾಷ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜು.1 ರಂದು ಬೆಳಿಗ್ಗೆ 10.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ, ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ನಮ್ಮ ಬಳ್ಳಾರಿ ಸೇರಿ ಜಿಲ್ಲೆಯ ಎಲ್ಲ ಪತ್ರಕರ್ತರು ಈ ಪತ್ರಕರ್ತರ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.


ಈ ಕುರಿತು ನಮ್ಮ ಜಿಲ್ಲಾ ಸಮಿತಿ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಕಾರ್ಯಕ್ರಮವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ, ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ದಿನದಂದು ಎಲ್ಲರೂ ಒಂದೇ ತರಹದ ಸಮವಸ್ತ್ರಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ, ಕಾರ್ಯಕ್ರಮದಲ್ಲಿ ನಗರದ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಸಚಿವರು, ಮಾಜಿ ಸಚಿವರು, ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸೇರಿ ಸದಸ್ಯರು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲೆಯ ನಮ್ಮ ಎಲ್ಲ ಮಾಧ್ಯಮ ಮಿತ್ರರು ಸೇರಿ ಎಲ್ಲರೂ ಪತ್ರಕರ್ತರ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.


ಪತ್ರಿಕಾ ದಿನಾಚರಣೆಯಂದು ಛಾಯಾ ಚಿತ್ರ ಪ್ರದರ್ಶನ, ಎಲ್ಲ ಪತ್ರಿಕೆಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ನಾವೆಲ್ಲರು ಒಂದೇ, ಭಿನ್ನಾಭಿಪ್ರಾಯಗಳು ಏನೇ ಇರಲಿ, ಎಲ್ಲವನ್ನೂ ಬದಿಗೊತ್ತಿ ನಮ್ಮ ಹಬ್ಬವನ್ನು ನಾವೆಲ್ಲರೂ ಸೇರಿ ಆಚರಿಸೋಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರವಿ ಕುಮಾರ್ ಮಾತನಾಡಿ, ಕಾನಿಪಾ ಸಂಘದ ಆಶ್ರಯದಲ್ಲಿ ಜು.1 ರಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ನಮ್ಮ ಎಲ್ಲ ಪತ್ರಕರ್ತರು, ಗಣ್ಯರು, ಸಂಘ ಸoಸ್ಥೆಯ ಪದಾಧಿಕಾರಿಗಳು, ಸೇರಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಕಾರ್ಯಕ್ರಮದ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆಗಳು ಭರದಿಂದ ನಡೆದಿವೆ ಎಂದರು. ಜು.1 ರಂದು ಬಳ್ಳಾರಿಯಲ್ಲಿ ಅದ್ದೂರಿಯಾಗಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು. ಇದೊಂದು ನಮ್ಮ ಹಬ್ಬ, ಪತ್ರಕರ್ತರ ಹಬ್ಬವಿದು, ವರ್ಷಕ್ಕೊಮ್ಮೆ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸುವ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ. ಈಗಾಗಲೇ ಸಂಘದ ಎಲ್ಲ ಸದಸ್ಯರಿಗೆ ಉಚಿತವಾಗಿ ಅಂಚೆ ಕಚೇರಿಯಲ್ಲಿ ವಿಮೆ ಮಾಡಿಸಲಾಗಿದ್ದು, ಉಳಿದವರು ಇನ್ನೂ ಮಾಡಿಸಬಹುದು. 10 ಲಕ್ಷ ರೂ.ವಿಮೆ ಸೌಲಭ್ಯ ಇದಾಗಿದೆ, ಈ ಬಾರಿಯ ನಮ್ಮ ಪತ್ರಕರ್ತರ ಹಬ್ಬದಲ್ಲಿ ಎಲ್ಲರೂ ಒಂದೇ ಸಮವಸ್ತ್ರ ಧರಿಸಬೇಕು ಎಂದು ನಿಶ್ಚಯಿಸಲಾಗಿದ್ದು, ಈ ಬಾರಿಯ ವಿಶೇಷ. ಎಲ್ಲ ನಮ್ಮ ಮಾಧ್ಯಮದವರಿಗೆ ನೆನಪಿಗಾಗಿ ಬ್ಯಾಗ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ದುರ್ಗೆಶ್, ಸಿದ್ದೀಕ್, ಅಸ್ಲಾಂ, ರೆಡ್ಡಿ, ಬಸವರಾಜ್, ಮಹೇಶ್, ವಿನೋದ್, ರಮೇಶ್, ಲಕ್ಷ್ಮಣ್ ಭಂಡಾರಿ, ಖಲಂದರ್, ಮರಿಸ್ವಾಮಿ, ಸುಕಣ್ಣ್ಣ , ಮಂಜು ತುಪ್ಪದ ಸೇರಿದಂತೆ ಇತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ