Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

28 ರಂದು  ವಿಜ್ಞಾನ ವಸ್ತು ಪ್ರದರ್ಶನ: ಕಲಾ ಉತ್ಸವ ಮತ್ತು ಆಹಾರ ಮೇಳ  



ಅಥಣಿ : ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕುವ, ಕಲಿಕೆಯನ್ನು ಉತ್ತೇಜಿಸುವ ಮತ್ತು ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದಿಂದ ಅಥಣಿ ತಾಲೂಕಿನ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ  ಜೆ ಎ ಪಿ ಯು ಕಾಲೇಜಿನಲ್ಲಿ  ಡಿ. 28 ಮತ್ತು 29 ರಂದು ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಆಯೋಜಿಸಲಾಗಿದೆ. ತಾಲೂಕಿನ ವಿವಿಧ  ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಬೇಕೆಂದು  ಜಾಧವಜಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ  ಡಾ ರಾಮ ಬಿ. ಕುಲಕರ್ಣಿ ಹೇಳಿದರು.


  ಅವರು  ಶನಿವಾರ ಇಲ್ಲಿನ  ಜೆ ಎ  ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ  ಜೆಎಪಿಯು ಕಾಲೇಜು  ಅಥಣಿ ತಾಲೂಕಿನಲ್ಲಿ ಅಷ್ಟೇ ಅಲ್ಲ  ಬೆಳಗಾವಿ ಜಿಲ್ಲೆಯಲ್ಲಿ  ಶತಮಾನ ಪೂರೈಸಿದ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ತನ್ನದೇ ಚಾಫು ಮೂಡಿಸಿದೆ. ವಿದ್ಯಾರ್ಥಿಗಳಿಗೆ  ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದೆ. ಇಂತಹ  ನಮ್ಮ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಆಯೋಜಿಸಲಾಗಿದ್ದು ಅಥಣಿ  ತಾಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.


 ಮಹಾವಿದ್ಯಾಲಯ  ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಸಂದೀಪ ಸಂಗೋರಾಮ  ಮಾತನಾಡಿ  ನಮ್ಮ ಜೆ ಎ ಪದವಿಪೂರ್ವ ಮಹಾವಿದ್ಯಾಲಯ ಅಥಣಿ ತಾಲೂಕಿನಲ್ಲಿ ಶತಮಾನಗಳಿಂದ ಅನೇಕ  ಬಡ ವಿದ್ಯಾರ್ಥಿಗಳಿಗೆ   ವಿದ್ಯಾರ್ಥಿ  ಸ್ನೇಹಿ  ವಾತಾವರಣದೊಂದಿಗೆ  ಅತ್ಯುತ್ತಮ ಶಿಕ್ಷಣ ನೀಡುತ್ತಾ ಬಂದಿದೆ. ಈಗ ನೂತನವಾಗಿ ವಿಜ್ಞಾನ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಾಣಿಜ್ಯ ವಿಭಾಗದಲ್ಲಿ ಸ್ಟಾಟಿಸ್ಟಿಕ್ಸ್ ಕಂಪ್ಯೂಟರ್ ಸೈನ್ಸ್ ವಿಭಾಗ ಅಥಣಿ  ತಾಲೂಕಿನಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ಮಾತ್ರ ಲಭ್ಯವಿದ್ದು  ಅತ್ಯುತ್ತಮ ಶಿಕ್ಷಣ ನೀಡುತ್ತಿದ್ದೇವೆ.  ವಿಶೇಷವಾಗಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ಉದ್ದೇಶದಿಂದ  ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಈ ಪ್ರದರ್ಶನ ಕಾರ್ಯಕ್ರಮ ಹಾಕಿಕೊಂಡಿದ್ದೇವೆ.   ವಿದ್ಯಾರ್ಥಿಗಳಿಗೆ ಹೊಸತನ, ಪ್ರಯೋಗ, ಮತ್ತು ನೈಜ-ಪ್ರಪಂಚದ ಸನ್ನಿವೇಶಗಳಲ್ಲಿ ವೈಜ್ಞಾನಿಕ ತತ್ವಗಳ ಅನ್ವಯವನ್ನು ಪ್ರೋತ್ಸಾಹಿಸುವ ವಿದ್ಯಾರ್ಥಿಗಳಲ್ಲಿ ಇರುವ ವೈಜ್ಞಾನಿಕ ಮನೋಭಾವವನ್ನು ಹೊರ ತರುವ ಹಾಗೂ ವಿವಿಧ  ಕಲೆಯನ್ನು ಪ್ರೋತ್ಸಾಹಿಸುವ ವೇದಿಕೆಯಾಗಿದೆ ಎಂದರು.

 ಮಹಾವಿದ್ಯಾಲಯದ ಪ್ರಾಚಾರ್ಯ  ಎಂ. ಪಿ ಮೇತ್ರಿ ಮಾತನಾಡಿ  ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಉದ್ಘಾಟನಾ ಸಮಾರಂಭ ದಿ. 28 ರಂದು  ಮುಂಜಾನೆ 9-00 ಗಂಟೆಗೆ ಜರುಗಲಿದ್ದು ಉದ್ಘಾಟಕರಾಗಿ   ಕೊಪ್ಪಳದ ಕಿರ್ಲೋಸ್ಕರ್ ಪೆರೆಸ್ ಕೈಗಾರಿಕೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರನಾಥ ಗುಮಾಸ್ತೆ ಆಗಮಿಸಲಿದ್ದಾರೆ. ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ  ಡಾ. ರಾಮ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ  ಉಪನಿರ್ದೇಶಕ  ಪಿ ಐ ಬಂಡಾರೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ  ಸಿ ಎಂ ಡೊಂಗರೆ,  ಅತಿಥಿಗಳಾಗಿ ನಮ್ಮ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸರ್ವ ಸದಸ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.


ಈ ಸಂದರ್ಭದಲ್ಲಿ  ಅನೀಲ ವಿ. ದೇಶಪಾಂಡೆ, ಎಮ್. ವಿ. ಜೋಶಿ, ಡಾ. ವಿಶ್ವನಾಥ ಕುಲಕರ್ಣಿ,  ಬಿ ಎಸ್ ಲೋಕುರ, ಎಸ್ ವಿ ದಾಸರಡ್ಡಿ,ಎಸ್ ಆರ್ ಪಾಟೀಲ ಡಾ. ಪಿ ಎಂ ಹುಲಗಬಾಳಿ, ಎಸ್ ಎಸ್ ಬಕಾಲಿ  ಸೇರಿದಂತೆ ಇನ್ನಿತರರು  ಉಪಸ್ಥಿತರಿದ್ದರು.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ