ಯರಗಟ್ಟಿ,ಜು,೦೬: ಸಂಸ್ಕರಿಸಿದ ಆಹಾರಗಳು, ಸಕ್ಕರೆ ಮತ್ತು ಹೆಚ್ಚು ಎಣ್ಣೆ ಇರುವ ಪದಾರ್ಥಗಳನ್ನು ಮಿತಗೋಳಿಸಿ ವಿಟಾಮಿನ್‌ಗಳು ಮತ್ತು ಖನಿಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಜಿಲ್ಲಾ ನಿರ್ದೆಶಕರಾದ ಎಚ್ ಆರ್ ಲವಕುಮಾರ ತಿಳಿಸಿದರು.
ಅವರು ಸಮೀಪದ ಕೋ.ಶಿವಾಪೂರ ಗ್ರಾಮದ ಹಿರೇಮಠ ಆವರಣದಲ್ಲಿ ಜ್ಞಾನವಿಕಾಸ ಕಾರ್ಯಕ್ರದಡಿಯಲ್ಲಿ ಪೌಷ್ಟಿಕ ಆಹಾರ ತಿಳುವಳಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜ್ಞಾನವಿಕಾಸ ಕಾರ್‍ಯಕ್ರಮದ ಮಹತ್ವ ಹಾಗೂ ಪೌಷ್ಟಿಕ ಆಹಾರ ಕಾರ್ಯಕ್ರಮ ಮಾಡುವ ಉದ್ದೇಶ ಹಾಗೂ ಮಹತ್ವದ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿ ವಿರೇಶ ನಾಯ್ಕ ಮಾತನಾಡಿ ಹಣ್ಣುಗಳು, ತರಕಾರಿಗಳು, ಮತ್ತು ಧಾನ್ಯಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿ, ಆರೋಗ್ಯಕರ ಆಹಾರ ಸೇವನೆ ಮಾಡಿ, ಯೋಗಾಸನಕ್ಕೆ ಹೆಚ್ಚಿನ ಮಹತ್ವ ನಿಡಬೇಕೆಂದು ತಿಳಿಸಿದರು.
ಹಿರೇಮಠ ಸಂಸ್ಥಾನ ಮಠದ ಜಡೆತಲೆ ಶಿವಚಾರ್ಯ ಮಹಾಸ್ವಾಮಿಗಳು ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ಜಾಗೃತಿಗಾಗಿ ರಾಜ್ಯಾದ್ಯಂತ ಜ್ಙಾನವಿಕಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡುತ್ತಿದ್ದು ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೇಂದ್ರದ ಸದಸ್ಯರಿಗೆ ಪೌಷ್ಟಿಕ ಆಹಾರ ತಯಾರಿ ಸ್ಪರ್ದೆಯನ್ನು ಎರ್ಪಡಿಸಲಾಗಿತ್ತು ಬಹುಮಾನವನ್ನು ವಿತರಿಸಲಾಯಿತು. ಯೊಜನಾಧಿಕಾರಿಗಳಾದ ಶ್ರೀಕಾಂತ ಎಮ್ ಸರ್ ರವರು, ಯಲ್ಲಪ್ಪ ಕುಂಬಾರ, ಕೆಂದ್ರದ ಅಧ್ಯಕ್ಷರಾದ ಮಂಜುಳಾ ಕೌಜಲಗಿ, ಸುಮಂಗಲಾ ಟೋಪನ್ನವರ, ಸಾವಿತ್ರಿ ಸೋಗಲದ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ನಿಶಾ ನಾಯಿಕ, ಗುರುದೇವಿ ಹೂಗಾರ, ರೇಕಾ ತೋಟಗಿ, ಸವೀತಾ ಶಟ್ಟಿ, ಶಿಲ್ಪಾ ಹುಂಡೆಕಾರ, ಕಲಾವತಿ ಹಂಜಿ, ಅಣ್ಣಪೂರ್ಣ ಹಂಜಿ, ಲಲಿತಾ ಬಡಿಗೇರ, ಯಲ್ಲಪ್ಪ ನಾಯ್ಕರ, ಶ್ರೀಕಾಂತ ಎಮ್, ಹಾಗೂ ಕೇಂದ್ರದ ಸರ್ವಸದಸ್ಯರು ಪಾಲ್ಗೋಂಡಿದ್ದರು.