LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ನಗರ ಶಿಶು ಅಭಿವೃದ್ಧಿ ಇಲಾಖೆಯಿಂದ ಪೋಷಣ ಮಾಸಾಚರಣೆ ಕಾರ್ಯಕ್ರಮ 

ಬಳ್ಳಾರಿ. ಆ. 03::  ಗರ್ಭಿಣಿಯರು ಮತ್ತು ಬಾಣಂತಿಯರು ಪೋಷಕಾಂಶಗಳಿರುವ ಆಹಾರ ಮತ್ತು ಪದಾರ್ಥಗಳನ್ನು ಸೇವಿಸಬೇಕು ಇದರಿಂದಾಗಿ ಹುಟ್ಟುವ ಮಗು ಆರೋಗ್ಯವಾಗಿ ಜನಿಸುತ್ತದೆ. ಗರ್ಭಿಣಿಯರ ಹಾಗೂ ಬಾಣಂತಿಯರ ಆರೋಗ್ಯ ಮತ್ತು ಪೌಷ್ಠಿಕತೆ ಗುಣಮಟ್ಟ ಹೆಚ್ಚಿಸಬೇಕು ಇದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ ಇದರಿಂದಾಗಿ ಶಿಶು ಮರಣ ಬಾಣಂತಿಯ ಮರಣ ತಡೆಗಟ್ಟ ಬಹುದು ಎಂದು ಬಳ್ಳಾರಿ ನಗರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಧವ ನಂದ ತಿಳಿಸಿದರು.
ದೇವಿ ನಗರ ವಲಯದ 36 ನೇ ವಾರ್ಡಿನ ಕುರಿ ಹಟ್ಟಿ 1ನೇ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ದಂದು  ಹಮ್ಮಿಕೊಳ್ಳಲಾಗಿದ್ದ ಪೋಷಣೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಂಗನವಾಡಿ ಕೇಂದ್ರಗಳ  ಮೂಲಕ ನೀಡಲಾಗುವ ಪೌಷ್ಟಿಕ ಆಹಾರವು ನಿತ್ಯ ಸೇವಿಸುವುದರಿಂದ ಪ್ರೊಟೀನ್ ಗಳು, ವಿಟಮಿನ್ ಗಳು, ಖನಿಜಾಂಶಗಳು ಒಳಗೊಂಡ ಸಮತೋಲಿತ ಆಹಾರ ಸಿಗುತ್ತದೆ. ಆದಕಾರಣ ಇದರ ಪ್ರಯೋಜನವನ್ನು  ಎಲ್ಲ ಅರ್ಹ ಫಲಾನುಭವಿಗಳು ಪಡೆದು ಕೊಂಡು ತಮ್ಮ ಆರೋಗ್ಯ ಹಾಗೂ ಹುಟ್ಟುವ ಮಗುವಿನ ಬೆಳವಣಿಗೆ ಬಗ್ಗೆ ಜಾಗೃತಿ ವಹಿಸ ಬೇಕೆಂದು ತಿಳಿಸಿದರು. 
ಇದೆ ಸಂದರ್ಭದಲ್ಲಿ ಇಲಾಖೆಯ ಸಂರಕ್ಷಣ ಅಧಿಕಾರಿ  ಶ್ರೀದೇವಿ, ವಲಯ ಮೇಲ್ವಿಚಾರಕಿ ಜೆ. ಸುಶೀಲಮ್ಮ, ಶಿವಕುಮಾರ ,ಎಲ್ಲ ವಲಯದ ಮೇಲ್ವಿಚಾರಕಿಯರು, ಆರೋಗ್ಯ ಇಲಾಖೆಯ LHV ಜಲಜಾಕ್ಷಿ, ಲೂದಿಯ ಹಾಗೂ ಜಿಲ್ಲಾ ಪೋಷಣ ಅಭಿಯಾನದ ಸಂಯೋಜಕ ಮುತ್ತುರಾಜ್, ತಾಲ್ಲೂಕು   ಸಂಯೋಜಕಿ ಸುಲೋಚನ, ಶಾಲಾಪೂರ್ವ ಶಿಕ್ಷಣ ಸಂಯೋಜಕ ಜಗನ್ನಾಥ, ಯಲ್ಲಪ್ಪ, ನಬಿ, ದುರ್ಗೇಶ, ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಮೀನಾ ಕುಮಾರಿ, ಅರ್ಕಾಣಿ, ಮಂಗಮ್ಮ, ಮತ್ತು ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವನ್ಯಜೀವಿಗಳಿಗೂ ಮಾನವರಂತೆ ಮನಸ್ಸಿದೆ, ಅವುಗಳನ್ನು ಪ್ರೀತಿಸೋಣ: ಡಿಎಫ್‌ಒ ಮಲ್ಲಿನಾಥ ಕುಸನಾಳದೈನಂದಿನ ಜೀವನದಲ್ಲಿ ಪ್ರಾಣಾಯಾಮದಿಂದ ಆರೋಗ್ಯ ಮತ್ತು ಮನಃಶಾಂತಿ: ಅಮೃತಾಂನಂದ ಮಹಾಸ್ವಾಮಿಗಳ ಬೋಧನೆಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರ 59ನೇ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಕೊಪ್ಪಳದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಸಾಮೂಹಿಕ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣಬಳ್ಳಾರಿಯ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ  11ನೇ ವರ್ಷದ ಶರನ್ನವರಾತ್ರಿ ಉತ್ಸವ ಇಂದು ಹನುಮಾನ್ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಮೂಳೆಯ ಗುಣಮಟ್ಟ ಕಡಿಮೆ ಇರುವ ರೋಗಿಗಳಲ್ಲಿ ಆಂಕರ್‌ರಹಿತ ರಿಪೇರ್‌ಗೆ ನೆರವಾಗುವ ಸಾಧನ ಅಭಿವೃದ್ಧಿಹೊಸಪೇಟೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ: ಶಾಸಕ ವಿಶ್ವಾಸ ವೈದ್ಯಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇ?ರು: ಧರೆಪ್ಪ ಸಾಂಗ್ಲೀಕರ